• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಣ್ಣೆನಗರಿ ದಾವಣಗೆರೆಯಲ್ಲೂ ಕೊರೊನಾ ಭೀತಿ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಮಾರ್ಚ್ 03: ಇಡೀ ಪ್ರಪಂಚವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಭೀತಿ ಇದೀಗ ಮಧ್ಯ ಕರ್ನಾಟಕವನ್ನೂ ಆವರಿಸಿದೆ.

ದಾವಣಗೆರೆ ಮೂಲದವರಾದ 14 ಜನ ಹಾಗೂ ಚೀನಾ ಮೂಲದ ವೈದ್ಯಕೀಯ ವಿದ್ಯಾರ್ಥಿಯೊಬ್ಬರಿಗೆ ಜ್ವರ ಕಾಣಿಸಿಕೊಂಇಡದ್ದು, ಅವರನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನದಂತೆ ತಪಾಸಣೆ ಮಾಡಲಾಗಿದೆ.

ಚೀನಾ ದೇಶದ ಮೆಡಿಕಲ್ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿ 28 ದಿನಗಳ‌ ಕಾಲ‌ ತಪಾಸಣೆ ನಡೆಸಿದ್ದು, ಉಳಿದ 14 ಮಂದಿ ಬ್ಯಾಂಕಾಕ್, ನೇಪಾಳ, ಸಿಂಗಾಪುರಕ್ಕೆ ಪ್ರವಾಸ ಹೋಗಿದ್ದರು. ಅವರನ್ನೂ ಇಲ್ಲಿ ತಪಾಸಣೆ ಮಾಡಲಾಗಿದೆ ಎಂದು ದಾವಣಗೆರೆ ಡಿಎಚ್ಓ ರಾಘವೇಂದ್ರ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು.

Exclusive:ಕೊರೊನಾ ಸೋಂಕಿತನ ಫ್ಲಾಟ್ ಮೇಟ್ ಇಮೇಲ್ ಲೀಕ್

ಇವರಿಗೆ ರಕ್ತ ಪರೀಕ್ಷೆ‌ ಸೇರಿದಂತೆ‌ ಹಲವು‌ ಪರೀಕ್ಷೆಗಳನ್ನು ನಡೆಸಲಾಗಿದೆ. ಕೊರೊನ ವೈರಸ್ ‌ನ ಲಕ್ಷಣಗಳು ಕಾಣದ ಹಿನ್ನೆಲೆ ಮೇಲಧಿಕಾರಿಗೆ ವರದಿ ನೀಡಲಾಗಿದೆ. 28 ದಿನಗಳ ಕಾಲ ಚಿಕಿತ್ಸೆ ನೀಡಿದ ಚೀನಾ ವಿದ್ಯಾರ್ಥಿಯಲ್ಲಿ ಕೂಡ ಯಾವುದೇ ಸೋಂಕು ‌ಕಂಡು ಬಾರದ‌ ಹಿನ್ನೆಲೆ ಚಿಕಿತ್ಸೆ ನಿಲ್ಲಿಸಲಾಗಿದೆ. ಇನ್ನು ಡಿಎಚ್ಒ ರಾಘವೇಂದ್ರ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ದಾವಣಗೆರೆಯ ಜನರು ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ಜನರು ಕೈಗಳನ್ನು ಶುಚಿಯಾಗಿಟ್ಟುಕೊಂಡು ಆಹಾರದಲ್ಲಿ ‌ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು‌ ಎಂದು ತಿಳಿಸಿದರು. ಅಲ್ಲದೇ ಕೊರೊನಾ ವೈರಸ್ ನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್, ಎಸ್.ಎಸ್ ಆಸ್ಪತ್ರೆಯಲ್ಲಿ 5 ಬೆಡ್ ಗಳನ್ನು ಮೀಸಲಿಡಲಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ನ ಸೋಂಕು ಕಂಡು ಬಂದಿಲ್ಲ ಎಂದು ತಿಳಿಸಿದರು.

English summary
15 Suspected cases of coronavirus have been reported in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X