ದಾವಣಗೆರೆಯಲ್ಲಿ ಅಕ್ರಮ ಪಡಿತರ ದಾಸ್ತಾನು; ಆಹಾರ ಇಲಾಖೆ ದಾಳಿ
ದಾವಣಗೆರೆ, ಜುಲೈ 10: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ದಾವಣಗೆರೆಯ ಗೋದಾಮಿನ ಮೇಲೆ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Recommended Video
ದಾವಣಗೆರೆಯ ಅಣ್ಣಾನಗರದಲ್ಲಿರುವ ಕರಿಬಸವೇಶ್ವರ ರೈಸ್ ಮಿಲ್ ಗೋದಾಮಿನಲ್ಲಿ ಸುಮಾರು 3.60 ಲಕ್ಷ ರೂ. ಮೌಲ್ಯದ 250 ಕ್ವಿಂಟಲ್ ನಷ್ಟು ಪಡಿತರ ಅಕ್ಕಿಯನ್ನು ಶೇಖರಣೆ ಮಾಡಲಾಗಿತ್ತು.
ಪಂಜಾಬ್ ರಾಜ್ಯದ ಪಡಿತರ ಅಕ್ಕಿ ಚೀಲಗಳು ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಉಪ ನಿರ್ದೇಶಕರಾದ ಮಂಟೇಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.

ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ರೈಸ್ ಮಿಲ್ ಕಾಂಪೌಂಡ್ ನಲ್ಲಿ ಸುಮಾರು 500 ಚೀಲ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಬಂದಿತ್ತು, ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸ್ ಇಲಾಖೆ ಸಹಯೊಗದಲ್ಲಿ ಒಂಟಿಯಾಗಿ ಕಾರ್ಯಾಚರಣೆ ಕೈಗೊಂಡು ದಾಸ್ತಾನು ವಶಪಡಿಸಿಕೊಂಡಿದ್ದೇವೆ ಎಂದರು.

ರೈಸ್ ಮಿಲ್ ಮಾಲೀಕರು ಹಾಗೂ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ರೀತಿ ಅಕ್ರಮವಾಗಿ ಪಡಿತರ ಸಂಗ್ರಹಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.












Click it and Unblock the Notifications