ಶಾಮನೂರು ಶಿವಶಂಕರಪ್ಪರ ಬಳಿ ಬಡ್ಡಿ ಸಮೇತ ಸಾಲ ವಸೂಲಿ ಮಾಡಿದ್ದೆ: ಜಿ.ಎಂ.ಸಿದ್ದೇಶ್ವರ ಹೀಗೆ ಹೇಳಿದ್ದೇಕೆ?
ದಾವಣಗೆರೆ, ಜುಲೈ, 14: ಸಂಸದ ಜಿ.ಎಂ. ಸಿದ್ದೇಶ್ವರ ಅವರು, ನಾಯಿ ಬೊಗಳಿದರೆ ಸಹಜ. ಆದರೆ ಆನೆ ತನ್ನ ಪಾಡಿಗೆ ತಾನು ಅದು ಹೋಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಬೆಂಕಿಯುಗುಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನನ್ನ ಆಸ್ತಿ ಬಗ್ಗೆ ಕೇಳುತ್ತಾರೆ. ಬೇಲಿಕೆರೆ ಅದಿರು ಬಗ್ಗೆ ಮಾತನಾಡುತ್ತಾರೆ, ಅಲ್ಲಿ ಒಂದು ಕೆ.ಜಿ.ನೂ ವ್ಯತ್ಯಾಸ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

"ಒಂದು ರೂಪಾಯಿ ಕೂಡ ವ್ಯತ್ಯಾಸ ಇಲ್ಲ, ನನ್ನ ಮೇಲೆ ಗೂಬೆ ಕೂರಿಸಲು ತಮ್ಮನನ್ನು ಹಿಡಿಸಿ ತೊಂದರೆ ಕೊಟ್ಟರು. ಆ ಕೇಸ್ ಕೋರ್ಟ್‌ನಲ್ಲಿ ವಜಾ ಆಗಿದೆ. ಭ್ರಷ್ಟಾಚಾರ ಮಾಡಿ ಹಣ ಹೊಡೆದಿಲ್ಲ, ನಮ್ಮ ಮನೆಯಲ್ಲಿ ಆರು ಜನ ದುಡಿಯುತ್ತಾರೆ. ಪ್ರಾಮಾಣಿಕವಾಗಿ ದುಡಿಯುತ್ತೇವೆ, ಆದರೆ ಅವನು ಒಬ್ಬನೇ ದುಡಿಯುತ್ತಾನೆ. ಹಾಗಾದರೆ ಅವನದ್ದು ಆಸ್ತಿ ಎಷ್ಟಿದೆ ನೋಡಿ ಎಂದು ನೋಡಿ," ಎಂದು ವಾಗ್ದಾಳಿ ನಡೆಸಿದರು.
ಕಾಲೇಜು ಮೇಲೆ ಕಾಲೇಜು, ಜಮೀನು ಮೇಲೆ ಜಮೀನು ತೆಗೆದುಕೊಳ್ಳುತ್ತಾ ಇದ್ದೇನೆ ಎಂಬ ಆರೋಪ ಮಾಡಿದ್ದಾರೆ. ಹೌದು, ಖರೀದಿ ಮಾಡಿದ್ದೇನೆ. ಕಷ್ಟಪಟ್ಟು ದುಡಿದಿದ್ದೇನೆ, ತೆಗೆದುಕೊಳ್ಳುತ್ತೇನೆ. ಆದಾಯ ತೆರಿಗೆ ಇಲಾಖೆ ಇದೆ. ಅವರು ಆ ಕೆಲಸ ಮಾಡುತ್ತಾರೆ. ಕೇಳೋಕೆ ಇವರು ಯಾರು? ನಾನು ಭ್ರಷ್ಟಾಚಾರ ಮಾಡಿಲ್ಲ, ದುಡ್ಡು ಹೊಡೆದಿಲ್ಲ. ಆದಾಯ, ತೆರಿಗೆ ಇಲಾಖೆ ಇದ್ದಾವೆ. ಅವು ನೋಡಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ, ಆಶ್ರಯ ಮನೆ ಹಂಚಿಕೆ ತನಿಖೆ ಮಾಡಿಸುತ್ತಾರಂತೆ. ಅವನು ಮಲ್ಲಿಕಾರ್ಜುನ್ ಹಿಂದೆ ಮಂತ್ರಿ ಆಗಿದ್ದಾಗನಿಂದಲೂ ತನಿಖೆ ಮಾಡಲಿ, ಎಲ್ಲವೂ ತನಿಖೆ ಮಾಡಲಿ. ನನಗೇನು ಭಯ ಇಲ್ಲ." ಎಂದು ವಾಗ್ದಾಳಿ ನಡೆಸಿದರು.
ನಾನು ಮತ್ತು ನನ್ನ ಮಾವ ಶಾಮನೂರು ಶಿವಶಂಕರಪ್ಪ ತುಂಬಾ ಚೆನ್ನಾಗಿ ಇದ್ದೆವು. 1994ರಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ತಂದೆ ಶಾಮನೂರು ಶಿವಶಂಕರಪ್ಪಗೆ ಸಾಲ ಕೊಟ್ಟಿದ್ದೆ. ಆಗ ವಾಪಸ್ ಕೊಡುವುದಕ್ಕೆ ಕಾಡಿಸಿದ್ದರು. ಬಳಿಕ ಬಡ್ಡಿ ಸಮೇತ ವಸೂಲಿ ಮಾಡಿದ್ದೆ. ಶಾಮನೂರು ಶಿವಶಂಕರಪ್ಪ ಲಕ್ಷ್ಮೀ ಪ್ಲೋರ್ ಮಿಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೊಟ್ಟಿದ್ದೆ. ಇವರ ಕಾರ್ಖಾನೆಯ ಶುಗರ್ ರಫ್ತು ಆಗುತ್ತಿತ್ತು. ಆಗಲೂ ಸಾಲ ಕೊಟ್ಟಿದ್ದೆ ಎಂದರು.
ಇನ್ನು 1997ರಲ್ಲಿ ಆಸ್ತಿ ಸೆಲ್ಫ್ ಡೆಕ್ಲರೆಷನ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಆಗ ನಾನು 6 ಕೋಟಿ ಡಿಕ್ಲೇರ್ ಮಾಡ್ಕೊಂಡು, 1.80 ಕೋಟಿ ತೆರಿಗೆ ಕಟ್ಟಿದ್ದೆ. ಆಗ ಶಾಮನೂರು ಶಿವಶಂಕರಪ್ಪ ಮಾವನೂ ಟ್ಯಾಕ್ಸ್ ಕಟ್ಟೋಕೆ ಅಂತಾ ಸಾಲ ತೆಗೆದುಕೊಂಡಿದ್ದರು. ಚುನಾವಣೆ ವೇಳೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ. ನಂತರ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದು ತಿಳಿಸಿದರು.












Click it and Unblock the Notifications