ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ನನಗೂ ಡಿಸಿಎಂ ಆಗುವ ಆಸೆ ಇತ್ತು" ಎಂದ ಶ್ರೀರಾಮುಲು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 08: "ನನಗೂ ಡಿಸಿಎಂ ಆಗುವ ಆಸೆ ಇತ್ತು, ಆದರೆ ಮುಖ್ಯಮಂತ್ರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮುಜುಗರ ತರುವ ಕೆಲಸ ಮಾಡೋಲ್ಲ" ಎಂದು ತಮಗೂ ಡಿಸಿಎಂ ಸ್ಥಾನದ ಮೇಲೆ ಆಸೆ ಇದೆ ಎನ್ನುವುದನ್ನು ಆರೋಗ್ಯ ಸಚಿವ ಶ್ರೀರಾಮುಲು ಹೊರಹಾಕಿದ್ದಾರೆ.

ದಾವಣಗೆರೆಯ ರಾಜನಹಳ್ಳಿ ವಾಲ್ಮಿಕಿ ಪೀಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ಅಧ್ಯಕ್ಷರಾಗಿರುವ ಸಚಿವ ಶ್ರೀರಾಮುಲು ಅವರು ಮಠಕ್ಕೆ ಹೊರಡುವ ಮುನ್ನ ಮಾತನಾಡಿದರು. "ಡಿಸಿಎಂ ಆಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪನವರು ವಾಲ್ಮೀಕಿ ಸಮಾಜಕ್ಕೆ ಅವಕಾಶ ಕೊಡುತ್ತಾರೆ. ಅಷ್ಟೇ ಅಲ್ಲದೇ, ಕೊಟ್ಟ ಮಾತನ್ನು ಯಡಿಯೂರಪ್ಪ ಯಾವತ್ತೂ ತಪ್ಪುವುದಿಲ್ಲ. ಈಗ ಅವರು ಸಾಕಷ್ಟು ಒತ್ತಡದಲ್ಲಿ ಇದ್ದಾರೆ. ಈಗ ಹೋಗಿ ಮತ್ತಷ್ಟು ಒತ್ತಡ ಹಾಕಿದರೆ ಅವರಿಗೆ ಮುಜುಗರ ನೀಡಿದಂತಾಗುತ್ತದೆ" ಎಂದರು.

ಮಂಗಳೂರಲ್ಲಿ ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲುಮಂಗಳೂರಲ್ಲಿ ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲು

"ನಾಳೆ ನಾಡಿದ್ದು ಬಜೆಟ್ ಪೂರ್ವ ಸಭೆ ಇದ್ದು, ನಮ್ಮ ಸಲಹಗೆಳನ್ನು ಸಿಎಂಗೆ ತಿಳಿಸುತ್ತೇವೆ" ಎಂದ ಶ್ರೀರಾಮುಲು, ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

I Also Have A Desire To Become DCM Said Sriramulu In Davanagere

ಶನಿವಾರವಾದ್ದರಿಂದ ದಾವಣಗೆರೆಯ ಹೊರ ವಲಯದಲ್ಲಿರುವ ಶಾಮನೂರು ಗ್ರಾಮದ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲದೆ ಆಂಜನೇಯ ಹಾಗೂ ಈಶ್ವರನಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹೋಟೆಲ್ ಒಂದರಲ್ಲಿ ಒಗ್ಗರಣೆ ಮಂಡಕ್ಕಿ ಹಾಗೂ ಮೆಣಸಿನಕಾಯಿ ತಿಂದು ಅಲ್ಲಿಂದ ವಾಲ್ಮೀಕಿ ಮಠಕ್ಕೆ ಪ್ರಯಾಣ ಬೆಳೆಸಿದರು.

English summary
"I also have a desire to become DCM. But the chief minister yediyurappa is working under pressure. I do not want to embarrass HIM," said Health Minister Sriramulu in davangere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X