ಹರ್ಷ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಿ; ಪ್ರಮೋದ್ ಮುತಾಲಿಕ್

ದಾವಣಗೆರೆ, ಮಾರ್ಚ್ 04; "ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಕೊಂದು ಹಾಕಿದ ಹಂತಕರ ಮೇಲೆ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಹೊರಬಾರದಂತೆ ಕ್ರಮ ಕೈಗೊಳ್ಳಬೇಕು. ಹಂತಕರನ್ನು ಗಲ್ಲಿಗೇರಿಸಬೇಕು" ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು‌.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೌರಿ ಲಂಕೇಶ್ ಹತ್ಯೆ ಮಾಡಿದವರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಆದರೆ ಹರ್ಷ ಹಂತಕರ ವಿರುದ್ಧ ಕೇವಲ ಕೊಲೆ ಕೇಸ್ ದಾಖಲಿಸಲಾಗಿದೆ. ಸ್ವಲ್ಪ ದಿನಗಳ ಬಳಿಕ ಜಾಮೀನಿನ ಮೇಲೆ ಹೊರಬಂದು ಓಡಾಡುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿ ಈ ಕುರಿತು ಒತ್ತಾಯಿಸಿದ್ದೇನೆ" ಎಂದರು.

"ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಹರ್ಷ ಕೊಂದ ಹಂತಕರಿಗೆ ಒಂದು ವರ್ಷದಲ್ಲಿ ಶಿಕ್ಷೆಯಾಗಬೇಕು. ವರ್ಷದೊಳಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ವಾದ, ಪ್ರತಿವಾದ ಮುಗಿದು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಬೇಕು" ಎಂದು ಆಗ್ರಹಿಸಿದರು.

ನವೀನ್ ಮೃತದೇಹ ತರಲು ಆಗ್ರಹ; "ಉಕ್ರೇನ್‌ನಲ್ಲಿ ಸಾವನ್ನಪ್ಪಿದ ಹಾವೇರಿ ಮೂಲದ ನವೀನ್ ಮೃತದೇಹವನ್ನು ತರಲು ವ್ಯವಸ್ಥೆ ಮಾಡಬೇಕು. ನವೀನ್ ಅವರ ಕಳೆಬರಹ ನೋಡಲು ಆತನ ಕುಟುಂಬದವರಿಗೆ ಅವಕಾಶ ಮಾಡಿಕೊಡಬೇಕು ಜೊತೆಗೆ ನವೀನ್ ಸಹೋದರ ಹರ್ಷ ಸಹ ಪಿಎಚ್‌ಡಿ ವಿದ್ಯಾರ್ಥಿ. ಆತನಿಗೆ ಸರ್ಕಾರಿ ಉದ್ಯೋಗ ನೀಡಬೇಕು" ಎಂದು ಆಗ್ರಹಿಸಿದರು.

"ನವೀನ್ ಉತ್ತಮ ಅಂಕಗಳನ್ನು ಪಡೆದರೂ ಇಲ್ಲಿ ಮೆಡಿಕಲ್ ಸೀಟ್ ಸಿಕ್ಕಿಲ್ಲ, ಇದಕ್ಕೆ ಇಲ್ಲಿನ ಮೆಡಿಕಲ್ ವ್ಯವಸ್ಥೆ ಹೊಣೆ. ಆತನಿಗೆ ಇಲ್ಲಿ ಸೀಟ್ ಸಿಕ್ಕಿದ್ದರೆ ಅಲ್ಲಿಗೆ ಹೋಗುತ್ತಿರಲಿಲ್ಲ. ರಾಜಕಾರಣಿಗಳು, ಸ್ವಾಮೀಜಿಗಳ ಕೈಯಲ್ಲೇ ಮೆಡಿಕಲ್ ಕಾಲೇಜುಗಳಿವೆ. ಎಲ್ಲಾ ಕಡೆಗಳಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕು" ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಎಸ್‌ಡಿಪಿಐ, ಪಿಎಫ್‌ಐ ನಿಷೇಧ

ಎಸ್‌ಡಿಪಿಐ, ಪಿಎಫ್‌ಐ ನಿಷೇಧ

"ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಎಸ್‌ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು. ಸಂಘಟನೆಯನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿ ಮುಂಬರುವ ಏಪ್ರಿಲ್ ತಿಂಗಳಿನಿಂದ ಬ್ಯಾನ್ ಪಿಎಫ್ಐ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಈಗಾಗಲೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಆಡಳಿತ ಪಕ್ಷದಲ್ಲಿರುವ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿವೆ. ರಾಜ್ಯದಲ್ಲೂ ಬಿಜೆಪಿ ಸರಕಾರದ ಆಡಳಿತ ಇರುವ ಕಾರಣ ಈ ಕೂಡಲೇ ಸಂಘಟನೆಯನ್ನು ನಿಷೇಧ ಮಾಡುವಂತೆ" ಒತ್ತಾಯಿಸಿದರು.

"ಎಸ್ ಡಿಪಿಐ ಸಂಘಟನೆ ಬೆಳೆಯಲು ಸರ್ಕಾರ ಕಾರಣ ಆಗುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧ ಮಾಡದಿದ್ದಲ್ಲಿ ಮುಂದೊಂದು ದಿನ ಅದು ಬಿಜೆಪಿ ಪಕ್ಷವನ್ನೇ ನುಂಗಿ ಹಾಕಲಿದೆ. ಕಾರಣ ಈಗಲಾದರೂ ಸರ್ಕಾರ ಎಚ್ಚತ್ತು ಕೊಳ್ಳಬೇಕು" ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಹಿಜಾಬ್ ವಿಚಾರದಲ್ಲಿ ಹಲ್ಲೆಯಾಗಿದೆ

ಹಿಜಾಬ್ ವಿಚಾರದಲ್ಲಿ ಹಲ್ಲೆಯಾಗಿದೆ

"ಹಿಜಬ್ ವಿಚಾರಕ್ಕೆ ಸಂಬಂಧಪಟ್ಟಂತೆ ದಾವಣಗೆರೆ ಜಿಲ್ಲೆಯ ಹರಿಹರ, ಮಲೆಬೆನ್ನೂರು ಹಾಗೂ ನಲ್ಲೂರುಗಳಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆಯಾಗಿದೆ. ಆದರೆ ಹಲ್ಲೆಗೊಳಗಾದವರು ಜೈಲಿನಲ್ಲಿದ್ದಾರೆ ಹಲ್ಲೆ ಮಾಡಿದವರು ಜಾಮೀನು ಪಡೆದು ಹೊರಗಿದ್ದಾರೆ. ರಾಜ್ಯಾದ್ಯಂತ ಇದೇ ರೀತಿ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ಕೂಡ ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದೆ" ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.

"ಯುದ್ಧಪೀಡಿತ ಉಕ್ರೇನ್‌ನಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ನವೀನ್ ಸಾವಿಗೀಡಾಗಿದ್ದು ಅವನ ಪಾರ್ಥಿವ ಶರೀರವನ್ನು ತರಲು ಕೇಂದ್ರ ಸರ್ಕಾರ ಶ್ರಮಿಸಬೇಕು ಅಲ್ಲದೆ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಸರ್ಕಾರಿ ನೌಕರಿ ಕೊಡಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದ್ದು ಅದು ಕಾರ್ಯರೂಪಕ್ಕೆ ಬರಲಿ ಶವ ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ" ಎಂದು ಒತ್ತಾಯಿಸಿದರು.

ಹೊರ ರಾಜ್ಯದವರಿಗೆ ಅವಕಾಶ

ಹೊರ ರಾಜ್ಯದವರಿಗೆ ಅವಕಾಶ

"ನೀಟ್ ಪರೀಕ್ಷೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿಲ್ಲ. ಹೊರರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದ್ದು ಕಾರಣ ನೀಟ್ ಪರೀಕ್ಷೆಯನ್ನು ಸರಿಪಡಿಸಿ ಸರಳೀಕರಣಗೊಳಿಸಿ ರಾಜ್ಯದಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳು ಇಂಜಿನಿಯರಿಂಗ್ ಕಾಲೇಜುಗಳು ಕೇವಲ ಸ್ವಾಮಿಗಳ ರಾಜಕಾರಣಿಗಳ ಮತ್ತು ಜನಪ್ರತಿನಿಧಿಗಳ ಸ್ವತ್ತಾಗಿವೆ. ಕಾರಣ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಸರ್ಕಾರಿ ಕಾಲೇಜುಗಳನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಹಣದ ಲೂಟಿಗಾಗಿಯೇ ಮೆಡಿಕಲ್ ಕಾಲೇಜುಗಳು ಹುಟ್ಟಿವೆ ಎನಿಸುತ್ತದೆ. ಸರ್ಕಾರ ಇದನ್ನು ಹದ್ದುಬಸ್ತಿ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಮುತಾಲಿಕ್ ಜೊತೆ ವಾಗ್ವಾದ

ಮುತಾಲಿಕ್ ಜೊತೆ ವಾಗ್ವಾದ

ಜೈಲಿನಲ್ಲಿದ್ದ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಲು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗಮಿಸಿದ ವೇಳೆ ಜೈಲರ್ ಜೊತೆ ವಾಗ್ವಾದ ನಡೆದ ಘಟನೆ ದಾವಣಗೆರೆಯ ಉಪಕಾರಾಗೃದಲ್ಲಿ ನಡೆದಿದೆ.

ಪ್ರಮೋದ್ ಮುತಾಲಿಕ್ ಪ್ರವೇಶಕ್ಕೆ ಜೈಲಿನ ಸಿಬ್ಬಂದಿ ನಿರಾಕರಿಸಿದರು. ಈ ವೇಳೆ ಮಾತಿನ ಚಕಮಕಿ‌ ನಡೆಯಿತು‌. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ ಹಿಜಾಬ್-ಕೇಸರಿ ಶಾಲು ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು. ಈ ವೇಳೆ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿದ್ದವರ ಭೇಟಿಗೆ ಕಾರಾಗೃಹದ ಬಳಿ ಪ್ರಮೋದ್ ಮುತಾಲಿಕ್ ಸೇರಿದಂತೆ ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+