ದಾವಣಗೆರೆ: ಮರಕ್ಕೆ ಕಟ್ಟಿ ಬಾಲಕನ ಗುಪ್ತಾಂಗಕ್ಕೆ ಇರುವೆ ಬಿಟ್ಟು ಹಲ್ಲೆ; ಪ್ರಕರಣ ದಾಖಲು
ದಾವಣಗೆರೆ, ಏಪ್ರಿಲ್ 06: ಇತ್ತೀಚಿನ ಅಮಾನವೀಯ ಘಟನೆಗಳು ನಡೆಯುತ್ತಲಿವೆ. ಸಾಮಾನ್ಯವಾಗಿ ಯಾರಾದರು ತಪ್ಪು ಮಾಡಿದ್ದಾರೆ ಅಂದ್ರೆ ಅದಕ್ಕಾಗಿಯೇ ಕಾನೂನು ಇದೆ. ಆದರೆ ಇದನೆಲ್ಲವನ್ನು ಮೀರಿ ಕಳ್ಳತನ, ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಬಾಲಕನ ಮೇಲೆ ಅಮಾನೀಯವಾಗಿ ಹಲ್ಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಕಳ್ಳತನ ಸೇರಿದಂತೆ ಅಸಭ್ಯ ವರ್ತನೆ ಮಾಡಿದ್ದಾರೆಂದು ಆರೋಪಿಸಿ ಬಾಲಕನ ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿಯ ಅಸ್ತಾಪನಹಳ್ಳಿಯಲ್ಲಿ ಕೆಲೆ ದಿನಗಳ ಹಿಂದೆ ನಡೆದಿದೆ. ಆದರೆ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕರಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಎಚ್ಚೆತ್ತ ಪೊಲೀಸರು 9 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಸುಭಾಷ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನುಳಿದವರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿ- ಪಿಕ್ಕಿ ಜನಾಂಗದ ಬಾಲಕರ ಮೇಲೆ ಅದೇ ಜನಾಂಗದ ಯುವಕರಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಕ್ಕಿ ಪಿಕ್ಕಿ ಜನಾಂಗದ ಗಿಡ ಮೂಲಿಕೆ ಮಾರಾಟ ಮಾಡಿ ಜನ ಜೀವನ ನಡೆಸುತ್ತಾರೆ. ಇದು ಕೆಲ ತಿಂಗಳ ಹಿಂದೆ ನಡೆದ ಘಟನೆ ಎನ್ನಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿರುವ ಸಾದ್ಯತೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಅಸ್ತಾಪನಹಳ್ಳಿ ಗ್ರಾಮದ ದರ್ಶನ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ. ಬಳಿಕ ಬಾಲಕನನ್ನು ಹಿಡಿದು ಅಡಕೆ ತೋಟಕ್ಕೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಕಳ್ಳತನಕ್ಕೆ ಸಹಕರಿಸಿದ್ದ ಇನ್ನೊಬ್ಬ ಬಾಲಕನಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಲ್ಲೆಗೊಳಗಾದ ಬಾಲಕನ ತಾತನಿಂದ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ 9 ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಚಿನ್ನಾಭರಣ ಕಳವು: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಖತರ್ನಾಕ್ ಬುರ್ಖಾ ಗ್ಯಾಂಗೊಂದು ಜ್ಯೂವೆಲರಿ ಅಂಗಡಿ ಸಿಬ್ಬಂದಿಯನ್ನೇ ಯಾಮಾರಿಸಿ ಚಿನ್ನಾಭರಣ ಎಗರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ರವಿ ಜ್ಯುವೆಲರಿ ಅಂಗಡಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿಸಿದ ಒಬ್ಬ ಪುರುಷ ಈ ಕೃತ್ಯವನ್ನು ನಡೆಸಿದ್ದಾರೆ.
ಜ್ಯುವೆಲರಿ ಅಂಗಡಿ ಸಿಬ್ಬಂದಿ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದಾರೆ. ಈ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.ದಾವಣಗೆರೆ ಮಂಡಿಪೇಟೆಯ ರವಿ ಜ್ಯುವೆಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ.
ಚಿನ್ನಾಭರಣ ಖರೀದಿಯ ನೆಪದಲ್ಲಿ ಶಾಪ್‌ಗೆ ಎಂಟ್ರಿ ಕೊಟ್ಟ ಖತರ್ನಾಕ್ ಗ್ಯಾಂಗ್, ಅಲ್ಲಿನ ಸಿಬ್ಬಂದಿಯನ್ನು ಗಮನ ಬೇರೆಡೆ ಸೆಳೆದು 1.13 ಕೋಟಿ ರೂಪಾಯಿ ಮೌಲ್ಯದ 1 ಕೆ.ಜಿ 400 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣ ಅಂಗಡಿಗೆ ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿಸಿದ ವ್ಯಕ್ತಿಯೊಬ್ಬ ಮಾರ್ಚ್ 26ರಂದು ಮಧ್ಯಾಹ್ನ 1ಕ್ಕೆ ಬಂದಿದ್ದಾರೆ.
ಅಂಗಡಿಯಲ್ಲಿದ್ದ 50 ಸಿಬ್ಬಂದಿಯಲ್ಲಿ ಮೂವರು ಊಟಕ್ಕೆ ತೆರಳಿದ್ದರು. ಬೆಳ್ಳಿ ಲೋಟ, ಆಭರಣ ಖರೀದಿಗೆ ಬಂದಿರುವುದಾಗಿ ಹೇಳಿಕೊಂಡು ಕೆಲ ಹೊತ್ತು ಕಾಲಾಹರಣ ಮಾಡಿ, ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ತೋರಿಸಿದ ಆಭರಣವನ್ನು ಒಪ್ಪದೆ ಬೇರೆ ಅಭರಣ ತರುವಂತೆ ಹೇಳಿದ್ದಾರೆ. ಆಗ ಮಹಿಳೆಯೊಬ್ಬರು ಚಿನ್ನಾಭರಣದ ಪೆಟ್ಟಿಗೆಯೊಂದನ್ನು ಎತ್ತಿಕೊಂಡು ಬುರ್ಖಾದಲ್ಲಿ ಇಟ್ಟುಕೊಂಡು ಹೊರನಡೆದ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications