ಮಾಜಿ ಸಚಿವರ ಕಾರು ಡಿಕ್ಕಿ: ಬೈಕ್ ಸವಾರ ಸಾವು
ದಾವಣಗೆರೆ, ಡಿಸೆಂಬರ್ 13 : ಚಿತ್ರದುರ್ಗದಲ್ಲಿ ಮಾಜಿ ಸಚಿವ ಪರಮೇಶ್ವರ್ ಅವರ ಕಾರಿಗೆ ಸಿಲುಕಿ ಗಾಯಗೊಂಡಿದ್ದ ಬೈಕ್ ಸವಾರ ಓಬಳೇಶ್ ಚಿಕಿತ್ಸೆ ಫಲಕಾರಿಯಾಗಿದೆ ಬುಧವಾರ ಮೃತಪಟ್ಟಿದ್ದಾನೆ.
ಡಿಸೆಂಬರ್ 4 ರಂದು ಚಿತ್ರದುರ್ಗದ ಸಿಬಾರ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿದ್ದರು. ಆದರೆ ಪರಮೇಶ್ವರ್ ನಾಯ್ಕ್ ಅವರು ಮಾನವೀಯತೆ ಮರೆತು ಅಲ್ಲಿಂದ ತೆರಳಿದ್ದರು.

ಅವರನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 4 ರಿಂದ ಇಲ್ಲಿಯವರೆಗೆ 2.5 ಲಕ್ಷ ವೆಚ್ಚವಾಗಿದೆ. ಆದರೆ ಪೋಷಕರಿಗೆ ಹಣ ನೀಡಲಾಗದೆ ಪರದಾಡುವಂತಾಗಿದೆ. ಆದರೆ ಪರಮೇಶ್ವರ ಮಾನವೀಯತೆ ಮರೆತಿದ್ದಾರೆ. ಚಿಕಿತ್ಸಾವೆಚ್ಚವನ್ನು ನೀಡಲು ಪೋಷಕರು ಒತ್ತಾಯಿಸುತ್ತಿದ್ದಾರೆ ಆದರೆ ಪರಮೇಶ್ವರ್ ನಾಯ್ಕ್ ಅವರು 50 ಸಾವಿರವಷ್ಟೇ ನೀಡಲಾಗುವುದು ಎಂದು ಕಡಾಖಂಡಿತವಾಗಿ ಹೇಳಿದ್ದಾರೆ.












Click it and Unblock the Notifications