• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ; ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ, ನೋಟುಗಳು ಭಸ್ಮ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಫೆಬ್ರವರಿ 24: ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅದರಲ್ಲಿ ಸಂಗ್ರಹವಾಗಿದ್ದ ಲಕ್ಷಾಂತರ ರೂಪಾಯಿ ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ನಡೆದಿದೆ.

2 ಸಾವಿರ, 500, 200, 100 ಸೇರಿದಂತೆ ವಿವಿಧ ಮುಖಬೆಲೆಯ ನೋಟುಗಳು ಸುಟ್ಟು ಹೋಗಿವೆ. ಹುಂಡಿಯಿಂದ ಬೆಂಕಿ ಬರುತ್ತಿರುವುದನ್ನು ದರ್ಗಾದ ಸಿಬ್ಬಂದಿ, ಭಕ್ತರು ಗಮನಿಸಿದ್ದಾರೆ. ತಕ್ಷಣ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಎಚ್ಚೆತ್ತುಕೊಳ್ಳದ ಜನ: ರಾಜಸ್ಥಾನದ ದರ್ಗಾ ಸಭೆಯಲ್ಲಿ ನೂರಾರು ಮಂದಿ ಭಾಗಿ ಎಚ್ಚೆತ್ತುಕೊಳ್ಳದ ಜನ: ರಾಜಸ್ಥಾನದ ದರ್ಗಾ ಸಭೆಯಲ್ಲಿ ನೂರಾರು ಮಂದಿ ಭಾಗಿ

ಬೆಂಕಿ ಬಿದ್ದ ಕುರಿತು ತಕ್ಷಣವೇ ವಕ್ಫ್ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಹುಂಡಿ ತೆರೆದು ನೋಡಿದಾಗ ನೋಟುಗಳು ಬೆಂಕಿಗೆ ಆಹುತಿಯಾಗಿದ್ದು, ತಿಳಿದುಬಂದಿದೆ.

ಹಾಸನಾಂಬೆ ಜಾತ್ರೆ ಮುಕ್ತಾಯ; ಹುಂಡಿ ಸಂಗ್ರಹ ಕುಸಿತ! ಹಾಸನಾಂಬೆ ಜಾತ್ರೆ ಮುಕ್ತಾಯ; ಹುಂಡಿ ಸಂಗ್ರಹ ಕುಸಿತ!

ಹುಂಡಿಯಲ್ಲಿದ್ದ ಅರೆಬರೆ ಸುಟ್ಟಿದ್ದ ನೋಟುಗಳನ್ನು ದರ್ಗಾ ಸಿಬ್ಬಂದಿ ಜೊತೆಗೂಡಿ ಬೇರ್ಪಡಿಸಲಾಗಿದೆ. ಹುಂಡಿಯಲ್ಲಿದ್ದ ಹಣವನ್ನು ಎಣಿಕೆ ಮಾಡಲಾಗುತ್ತಿದೆ.

ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದ ತಿರುಪತಿ!ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದ ತಿರುಪತಿ!

ಹುಂಡಿಯಲ್ಲಿದ್ದ ಸುಟ್ಟು ಕರಕಲಾದ ನೋಟು, ಅರೆಬರೆ ಸುಟ್ಟ ನೋಟು, ನೀರಿನಿಂದಾಗಿ ಒದ್ದೆಯಾದ ನೋಟುಗಳನ್ನು ಬೇರ್ಪಡಿಸಲಾಗುತ್ತಿದೆ. ಹುಂಡಿ ಹಣ ಎಣಿಕೆ ಕಾರ್ಯ ಸಾಗಿದೆ.

ದರ್ಗಾದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಬಿ. ಎನ್. ಗಿರೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

English summary
In a fire accident money destroyed in darga Doddabathi, Davanagere. Rs 500, 200 and 100 note in dargah kanike hundi catches fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X