ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್
ದಾವಣಗೆರೆ, ನವೆಂಬರ್, 15: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿದ್ದ ಮನೆಗಳಿಗೆ ಪರಿಹಾರ ಒದಗಿಸಲು ಪ್ರಸ್ತಾವನೆ ಸಲ್ಲಿಸುವಂತೆ ಒತ್ತಡ ಹೇರಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪರಿಹಾರ ಕೇಳಲು ಬಂದಿದ್ದ ಜನರಿಗೆ ಬೆದರಿಕೆ ಹಾಕಿದ್ದರು. ಆದ್ದರಿಂದ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳಗುತ್ತಿ ಹೋಬಳಿಯ ಗ್ರಾಮ ಲೆಕ್ಕಿಗ ಎಂ.ಎಸ್. ಪ್ರಶಾಂತ್ ಕುಮಾರ್ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಅಕ್ಟೋಬರ್ 30ರಂದು ಶಾಸಕ ರೇಣುಕಾಚಾರ್ಯರ ಆಹ್ವಾನದ ಮೇರೆಗೆ ಹೊನ್ನಾಳಿ ಪಟ್ಟಣದಲ್ಲಿನ ಅವರ ನಿವಾಸಕ್ಕೆ ಹೋಗಿದ್ದೆ. ಆಗ ಕುಂಕುವ ವೃತ್ತಕ್ಕೆ ಸಂಬಂಧಿಸಿದಂತೆ ಕೊಗೆನಹಳ್ಳಿ ಗ್ರಾಮದ ದೇವರಾಜ್ ಅರಸ್ ಸೇರಿದಂತೆ ಕೆಲ ಗ್ರಾಮಸ್ಥರು ಮತ್ತು ಸಾರ್ವಜನಿಕರು ಇದ್ದರು. ಆಗ ಕೂಗನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದಂತೆ ರೂಪಾ ಬಾಯಿ, ಸಾವಿತ್ರಿ ಬಾಯಿ, ಶಿವರಾಜ ನಾಯ್ಕ ಎಂಬುವವರ ಮನೆಗಳು ಮಳೆಯಿಂದ ಹಾನಿ ಆಗಿದ್ದವು. ಅದಕ್ಕಾಗಿ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುಲು ಕಡತ ತಯಾರಿಸಲು ಶಾಸಕರು ಹೇಳಿದರು. ಆಗ ನಾನು ಸಂಬಂಧಿಸಿದ ದಾಖಲೆ ಹಾಗೂ ವಾಸ್ತಾವಾಂಶದ ವಿವರಣೆ ನೀಡಿದೆ ಎಂದು ಉಲ್ಲೇಖಿಸಿದ್ದಾರೆ.

ಶಾಸಕರಿಂದ ಗ್ರಾಮ ಲೆಕ್ಕಿಗನಿಗೆ ಬೆದರಿಕೆ
ಆಗ ಶಾಸಕರು ವಾಸ್ತವಾಂಶ ಇಲ್ಲದೆ ಅವರಿಗೆ ಪರಿಹಾರ ಸಿಗಲ್ಲ. ನಿನ್ನ ವರದಿ ಬದಲಾಯಿಸು ಎಂದಿದ್ದರು. ಇಲ್ಲದಿದ್ದರೆ ತಾಲೂಕು ಬಿಟ್ಟು ಹೋಗು ಎಂದು ಗದರಿಸಿದ್ದರು. ಆ ವೇಳೆ ಎಲ್ಲಿಗೆ ಬೇಕಾದರೂ ಟ್ರಾನ್ಸ್‌ಫರ್ ಮಾಡಿ ಹೋಗಿ ಕೆಲಸ ಮಾಡುತ್ತೇನೆ ಎಂದಿದ್ದೆ. ಪುನಃ ಶಾಸಕರು ನೀನು ನಾಳೆಯಿಂದ ಡ್ಯೂಟಿಗೆ ಬರಬೇಡ. ರಜೆ ಹಾಕಿ ಹೋಗು ಎಂದು ಆದೇಶಿಸುವ ರೀತಿಯಲ್ಲಿ ಗದರಿಸಿದ್ದರು. ಆಗ ನಾನು ರಜೆ ಹಾಕುವುದು ವೈಯಕ್ತಿಕ ವಿಚಾರ ಎಂದು ಹೇಳಿದಾಗ ಶಾಸಕರು ನನಗೆ ಗೆಟ್‌ಔಟ್ ಎಂದು ಬೆದರಿದ್ದರು. ತಕ್ಷಣ ನಾನು ಅವರ ಮನೆಯಿಂದ ಹೊರಬಂದಿದ್ದೆ.

ಎಂ.ಎಸ್. ಪ್ರಶಾಂತ್‌ಗೆ ಗದರಿದ್ದ ಶಾಸಕ
ಈ ಹಿಂದೆಯೂ ಸಹ ನನ್ನ ಕೆಲಸದ ವ್ಯಾಪ್ತಿಗೆ ಬರುವ ಕುಂಕುವ ಒಡೆಯರಹತ್ತೂರು - ಕೂಗನಹಳ್ಳಿ ಮತ್ತು ಗಡೇಕಟ್ಟೆ ಗ್ರಾಮಗಳಿಗೆ ಪರಿಶೀಲನೆಗೆ ಹೋಗಿದ್ದೆ. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಪಿಡಿಒ ಅವರೊಂದಿಗೆ ಮಳೆಯಿಂದ ಹಾನಿಗೀಡಾದ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಹಾನಿಗೀಡಾದ ಕೆಲವು ಮನೆಗಳಿಗೂ ಪರಿಹಾರ ಬರುವಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. "ನಾನು ಇದಕ್ಕೆ ವಿವರಣೆ ನೀಡುವಾಗ ಹೇಯ್ ಏನೂ ಮಾತನಾಡಬೇಡ ಎಂದು ನನಗೆ ಗದರಿಸಿದ್ದರು. ಮೂರು ಲಕ್ಷ ಅದಕ್ಕೆ ಹಾಕು, 5 ಲಕ್ಷ ಇದಕ್ಕೆ ಹಾಕಿ ವರದಿ ನೀಡು" ಎಂದರು ಆರೋಪಿಸಿದ್ದಾರೆ.

ಹನುಮಂತಪ್ಪ ಸೊರಟೂರು ಆರೋಪವೇನು?
ಭಾರಿ ಮಳೆಯಿಂದ ಹಾನಿಗೀಡಾಗಿರುವ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಅನೇಕ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡುವಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಫಲವಾಗಿದ್ದಾರೆ. ಹೀಗೆ ಶಾಸಕರ ವಿರುದ್ಧ ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಕುವ ಗ್ರಾಮದಲ್ಲಿ 200 ಮನೆಗಳಿದ್ದು, ಮಳೆಯಿಂದ 160 ಮನೆಗಳು ಹಾಳಾಗಿವೆ. ನಿರ್ಮಾಣಕ್ಕೆ ಮಂಜೂರಾತಿ ಮಾಡುವಂತೆ ಅಧಿಕಾರಿಗಳ ಮೇಲೆ ರೇಣುಕಾಚಾರ್ಯರು ಒತ್ತಾಯ ಹಾಕಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಹನುಮಂತಪ್ಪ ಸೊರಟೂರು ಆರೋಪವೇನು?
ಭಾರಿ ಮಳೆಯಿಂದ ಹಾನಿಗೀಡಾಗಿರುವ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಅನೇಕ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡುವಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಫಲವಾಗಿದ್ದಾರೆ. ಹೀಗೆ ಶಾಸಕರ ವಿರುದ್ಧ ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಕುವ ಗ್ರಾಮದಲ್ಲಿ 200 ಮನೆಗಳಿದ್ದು, ಮಳೆಯಿಂದ 160 ಮನೆಗಳು ಹಾಳಾಗಿವೆ. ನಿರ್ಮಾಣಕ್ಕೆ ಮಂಜೂರಾತಿ ಮಾಡುವಂತೆ ಅಧಿಕಾರಿಗಳ ಮೇಲೆ ರೇಣುಕಾಚಾರ್ಯರು ಒತ್ತಾಯ ಹಾಕಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಯಾವುದೇ ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ. ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ ರೇಣುಕಾಚಾರ್ಯ ಅವರು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಲಿ. ನಾನು ಸಹ ಆಣೆ ಮಾಡುತ್ತೇನೆ ಎಂದು ತಿಳಿಸಿದರು. ಚುನಾವಣೆ ಸಮೀಪಿಸುತ್ತಿರುವಾಗ ಫಲಾನುಭವಿಗಳಿಗೆ ಪ್ಯಾಕೇಜ್ ವಿತರಣೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ರೇಣುಕಾಚಾರ್ಯ ಏನಾದರೂ ಗೆದ್ದರೆ ಹೋರಾಟಗಾರರು ಉಸಿರಾಡುವುದು ಕಷ್ಟವಾಗುತ್ತದೆ. ರೇಣುಕಾಚಾರ್ಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಧನಂಜಯ ಹರಮಘಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications