ದಾವಣಗೆರೆಯಲ್ಲಿ ಬೀದಿ ನಾಯಿ ಜಗಳ, ಭ್ರೂಣದಲ್ಲಿದ್ದ ಶಿಶು ಸಾವು

Posted By: Nayana
Subscribe to Oneindia Kannada

ದಾವಣಗೆರೆ, ಡಿಸೆಂಬರ್ 1 : ನಾಯಿಗಳ ಜಗಳದಿಂದಾಗಿ ಇನ್ನು ಕಣ್ಣುತೆರೆಯದ ಶಿಶು ಗರ್ಭದಲ್ಲೇ ಸಾವನ್ನಪ್ಪಿದ ಮನಕಲಕುವ ಘಟನೆ ದಾವಣಗೆರೆಯ ಪಾಮೇನಹಳ್ಳಿಯಲ್ಲಿ ಗುರುವಾರ(ನ.30) ನಡೆದಿದೆ.

ಪಾಮೇನಹಳ್ಳಿ ಗ್ರಾಮದ ನಿವಾಸಿ ಕವಿತಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಕವಿತಾ ಹಾಗೂ ನಂಜುಂಡಪ್ಪ ಅವರ ಮನೆಯ ನಾಯಿಗಳ ಮಧ್ಯೆ ಜಗಳ ನಡೆದಿದೆ. ಸಂದರ್ಭದಲ್ಲಿ ನಂಜುಂಡಪ್ಪ ಎಂಬುವವರು ಕವಿತಾ ಅವರ ಮನೆ ನಾಯಿಗೆ ಕಲ್ಲಿನಲ್ಲಿ ಹೊಡೆದಿದ್ದಾರೆ.

Dog fight claims fetal life

ಆಗ ಕವಿತಾ ಹಾಗೂ ತಾಯಿ ತಿಮ್ಮವ್ವ ನಮ್ಮ ನಾಯಿಗೆ ಏಕೆ ಹೊಡೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಂಜುಂಡಪ್ಪ ಮತ್ತು ಅವರ ಸಂಬಂಧಿಕರು ಗರ್ಭಿಣಿ ಕವಿತಾ ಮೇಲೆ ಹಲ್ಲೆ ನಡೆಸಿದ್ದಾರೆ.
ಕವಿತಾ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಚರಂಡಿಗೆ ಬಿದ್ದಿದ್ದಾಳೆ, ಹೊಟ್ಟೆಗೆ ಪೆಟ್ಟು ಬಿದ್ದ ಕಾರಣ ಶಿಶು ಹೊಟ್ಟೆಯಲ್ಲೇ ಮೃತಪಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a strange incident, dogs fight leads to quarrel between two families and during quarrel a pregnant woman fell down in gutter caused her fetal death.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ