ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಕೆಪಿಸಿಸಿ ಅಧ್ಯಕ್ಷರಾಗಿ ಜುಲೈ 2 ರಂದು ಡಿ.ಕೆ ಶಿವಕುಮಾರ್ ಪದಗ್ರಹಣ'

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 15: ನೂತನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದು, ಜುಲೈ 2 ರಂದು ಡಿ.ಕೆ ಶಿವಕುಮಾರ್ ಅವರು ಪದಗ್ರಹಣ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯ ಲಕ್ಷ್ಮೀಪುರದಲ್ಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.

ದಾವಣಗೆರೆ ಜಿ.ಪಂ ನೂತನ ಅಧ್ಯಕ್ಷರಾಗಿ ದೀಪಾ ಜಗದೀಶ್ ಆಯ್ಕೆದಾವಣಗೆರೆ ಜಿ.ಪಂ ನೂತನ ಅಧ್ಯಕ್ಷರಾಗಿ ದೀಪಾ ಜಗದೀಶ್ ಆಯ್ಕೆ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷದಲ್ಲಿ ಹಿರಿಯ ನಾಯಕರು ಇರುವುದರಿಂದ ವಿಧಾನ ಪರಿಷತ್ ಚುನಾವಣೆಗೆ ಆಕಾಂಕ್ಷಿತರು ಬಹಳ ಜನ ಇದ್ದಾರೆ. ನಾವು ಇನ್ನು ಯಾರ ಹೆಸರು ಶಿಫಾರಸ್ಸು ಮಾಡಿಲ್ಲ. ಇವತ್ತು, ನಾಳೆ ಚರ್ಚೆ ಮಾಡಿ ಶಿಫಾರಸ್ಸು ಮಾಡಿತ್ತೇವಿ ಎಂದು ಹೇಳಿದರು.

DK Shivakumar To Take Oath As KPCC President On July 2nd: Siddaramaiah

ತೋಟಗಾರಿಕೆ ಸಚಿವ ನಾರಾಯಣ ಗೌಡರ 'ಬೆಣ್ಣೆ ಹಚ್ಚುವ' ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲ ಬಾರಿಗೆ ಬಹಳ ಆಸೆ, ಆಕಾಂಕ್ಷೆ ಇಟ್ಟುಕೊಂಡು ಹೋಗಿದ್ದರು, ಆದರೆ ಸರ್ಕಾರದಲ್ಲಿ ದುಡ್ಡು ಇಲ್ಲ, ಸರ್ಕಾರದ ಆರ್ಥಿಕತೆ ಕುಸಿದ ಪರಿಣಾಮ ಎಲ್ಲರಿಗೂ ನಿರಾಸೆಯಾಗಿದೆ ಎಂದು ತಿರುಗೇಟು ನೀಡಿದರು.

English summary
Former CM Siddaramaiah said that the state government had given permission for the new KPCC president to be sworn in on July 2 by DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X