ಬಿಎಸ್‌ವೈಗೆ ಎಚ್ಚರಿಕೆ ನೀಡಿದ ಸ್ವಾಮೀಜಿ ಬೆಂಬಲಕ್ಕೆ ಡಿಕೆಶಿ
Recommended Video
ದಾವಣಗೆರೆ, ಜನವರಿ 15: ಬಿ.ಎಸ್.ಯಡಿಯೂರಪ್ಪ ಅವರಿಗೆ ವೇದಿಕೆ ಮೇಲೆ 'ರಾಜಕೀಯ ಎಚ್ಚರಿಕೆ' ನೀಡಿದ ವಚನಾನಂದ ಸ್ವಾಮೀಜಿ ಬೆಂಬಲಕ್ಕೆ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ.
ನಿನ್ನೆ ಯಡಿಯೂರಪ್ಪ ಅವರು ಭಾಗವಹಿಸಿದ್ದ ಅದೇ ಜಾತ್ರೆಯ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ಅಧಿಕಾರದಲ್ಲಿರುವವರು ತಾಳ್ಮೆ ಕಳೆದುಕೊಂಡರೆ ಹೇಗೆ?' ಎಂದು ಪ್ರಶ್ನಿಸಿದ್ದಾರೆ.
'ಮಠಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ, ಮತ ಪಡೆದುಕೊಳ್ಳಲು ಮಠಗಳು, ಸ್ವಾಮೀಜಿಗಳು ಬೇಕು, ಆದರೆ ಸಚಿವ ಸ್ಥಾನ ಕೊಡಿ ಎಂದು ಒತ್ತಾಯ ಮಾಡುವಂತಿಲ್ಲ' ಎಂದು ಹೇಳಿದರೆ ಹೇಗೆ?' ಎಂದು ಅವರು ಪ್ರಶ್ನಿಸಿದರು.

ನಿನ್ನೆ ಬಿಎಸ್‌ವೈ ಗೆ ಎಚ್ಚರಿಕೆ ನೀಡಿ ಅವರ ಕೋಪಕ್ಕೆ ಗುರಿ ಆಗಿದ್ದ ವಚನಾನಂದ ಸ್ವಾಮೀಜಿ ಅವರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ಸ್ವಾಮೀಜಿಗಳೇ ನೀವೇನು ಬೇಜಾರು ಮಾಡಿಕೊಳ್ಳಬೇಡಿ, ನಡೆಯುವರು ಎಡವುತ್ತಾರೆ, ಸುಮ್ಮನೇ ಕೂತವರು ಎಡವುವುದಿಲ್ಲ, ಹೆಚ್ಚು ಶಕ್ತಿಶಾಲಿ ಆಗಿದ್ದವನಿಗೆ ಹೆಚ್ಚು ಶತ್ರುಗಳು, ಕಡಿಮೆ ಶಕ್ತಿಶಾಲಿಗೆ ಕಡಿಮೆ ಶತ್ರುಗಳು, ಶಕ್ತಿ ಇಲ್ಲದವನಿಗೆ ಶತ್ರುಗಳೇ ಇಲ್ಲ' ಎಂದು ಇಂಗ್ಲೀಷಿನಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
'ಓಟು ಹಾಕಿಸಿಕೊಳ್ಳಲು ನೀವು ಬೇಕು, ಈಗ ರಾಜಕೀಯದಲ್ಲಿ ಮೂಗು ತೂರಿಸಬೇಡ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, 'ನಿಮ್ಮ ಪಾಡಿಗೆ ನೀವು ಯೋಚಿಸಿರುವ ಕಾರ್ಯಗಳನ್ನು ಮಾಡುತ್ತಿರಿ, ಯಾವುದಕ್ಕೂ ಭಯಪಡಬೇಡಿ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.











Click it and Unblock the Notifications