ದಾವಣಗೆರೆ : ಮಹಿಳೆಯನ್ನು ಮಂಚಕ್ಕೆ ಕರೆದ ಮ್ಯಾನೇಜರ್ ಮನೆಗೆ
ದಾವಣಗೆರೆ, ಅಕ್ಟೋಬರ್ 16 : ಸಾಲ ಕೊಡಲು ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಉದ್ಯೋಗಿಯನ್ನು ಡಿಎಚ್‌ಎಫ್‌ಎಲ್ ಸೇವೆಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ವಜಾಗೊಳಿಸಿದೆ. ದಾವಣಗೆರೆಯಲ್ಲಿ ನಡೆದ ಈ ಘಟನೆ ಸುದ್ದಿ ವೈರಲ್ ಆಗಿತ್ತು.
ಡಿಎಚ್‌ಎಫ್‌ಎಲ್ ಬ್ಯಾಂಕ್ ಮ್ಯಾನೇಜರ್ ದೇವಣ್ಣನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಮಂಗಳವಾರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ಇಂತಹ ಘಟನೆಯನ್ನು ಖಂಡಿಸುವುದಾಗಿಯೂ ಬ್ಯಾಂಕ್ ಹೇಳಿದೆ.
ದಾವಣಗೆರೆಯ ಡಿಎಚ್‌ಎಫ್‌ಎಲ್ ಬ್ಯಾಂಕ್ ಮ್ಯಾನೇಜರ್ ದೇವಣ್ಣ ಸಾಲ ಕೊಡುವುದಾಗಿ ಹೇಳಿ ಮಹಿಳೆಯನ್ನು ಮಂಚಕ್ಕೆ ಕರೆದಿದ್ದ. ಮಹಿಳೆ ಮಹಿಳಾ ಸಂಘಟನೆಗಳ ಜೊತೆ ಸೇರಿ ದೇವಣ್ಣನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬಳಿಕ ಮ್ಯಾನೇಜರ್‌ನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ.
ಬ್ಯಾಂಕ್ ಮ್ಯಾನೇಜರ್‌ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಪೊಲೀಸರು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.












Click it and Unblock the Notifications