'ನನ್ನ ಮಗಳಿಗೆ ಕೊರೊನಾ ಇಲ್ಲ': ಸಂಸದ ಸಿದ್ದೇಶ್ವರ ಸ್ಪಷ್ಟನೆ

ಚಿತ್ರದುರ್ಗ, ಮಾರ್ಚ್ 26: ದಾವಣೆಗೆರೆ ಸಂಸದ ಜಿಎಂ ಸಿದ್ದೇಶ್ವರ ಅವರ ಮಗಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಹಬ್ಬಿತ್ತು. ವಿದೇಶದಿಂದ ಬಂದಿದ್ದ ಸಿದ್ದೇಶ್ವರ ಮಗಳಿಗೆ ರೋಗಲಕ್ಷಣಗಳು ಪತ್ತೆಯಾಗಿದ್ದು, ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ಹೇಳಲಾಗಿತ್ತು.

ಸಂಸದರ 37 ವರ್ಷದ ಮಗಳು ಗಯಾನದಿಂದ ವಾಪಸ್ ಬಂದಿದ್ದಾಗಿ ತಿಳಿದುಬಂದಿದೆ. ಮಾರ್ಚ್ 22ರಂದು ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ನಂತರ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದಾಗಿ ಸುದ್ದಿ ಚರ್ಚೆಯಾಗಿತ್ತು.

ಇದೀಗ, ಈ ಬಗ್ಗೆ ಸ್ವತಃ ಸಂಸದರು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಮೂಲಕ ಗೊಂದಲಕ್ಕೆ ತೆರೆ ಎಳೆದಿರುವ ಸಿದ್ದೇಶ್ವರ ಅವರು ''ನನ್ನ ಮಗಳಿಗೆ ಹಾಗೂ ಮೊಮ್ಮಕ್ಕಳಿಗೆ ಕೊರೊನಾ ಇಲ್ಲ'' ಎಂದಿದ್ದಾರೆ.

Davangere Mp Gm Siddeshwara Daughter Not Affected From COVID

''ನನ್ನ ಮಗಳಿಗೆ ಕೊರೊನಾ ಬಂದಿದೆ ಎಂದು ಸುಳ್ಳು ಸುದ್ದಿ ಹರಿಡಿಸುತ್ತಿದ್ದಾರೆ. ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ವದಂತಿ ಹಬ್ಬಿಸುತ್ತಿದ್ದಾರೆ. ನನ್ನ ಮಗಳಿಗೆ ಕೊರೊನಾ ಇಲ್ಲ. ಸುರಕ್ಷಿತೆಯಾಗಿದ್ದಾರೆ. ಎರಡ್ಮೂರು ದಿನದಲ್ಲಿ ಮನೆಗೆ ಬರ್ತಾರೆ. ಯುಎಸ್‌ನಿಂದ ಬಂದಿದ್ದ ಮೊಮ್ಮಗ ಹಾಗೂ ಲಂಡನ್‌ನಿಂದ ಬಂದಿದ್ದ ಮೊಮ್ಮಗ ಇಬ್ಬರಿಗೂ ನೆಗಿಟಿವ್ ಬಂದಿದೆ. ನಾನು, ನನ್ನ ಪತ್ನಿ, ನನ್ನ ಮೊಮ್ಮಕ್ಕಳು ಎಲ್ಲರೂ ನೆಗಿಟಿವ್ ನಲ್ಲಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ.

'ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀರವರ ಸೂಚನೆಯಂತೆ ನಮ್ಮ ಕುಟುಂಬದಲ್ಲಿ ಎಲ್ಲ ಸದಸ್ಯರು ಕ್ಷೇಮವಾಗಿ "ಹೋಂ ಕ್ವಾರಂಟೈನ್" ಆಗಿದ್ದೇವೆ. ರಾಜ್ಯದ ಮತ್ತು ನಮ್ಮ ಜಿಲ್ಲೆಯ ಸಮಸ್ತ ಜನತೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಮತ್ತು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ನವರ ಸೂಚನೆಯನ್ನು ಪಾಲಿಸಬೇಕಾಗಿ ತಮ್ಮಲ್ಲಿ ನನ್ನ ಮನವಿ'' ಎಂದು ವಿಡಿಯೋ ಸಂದೇಶ ನೀಡಿದ್ದಾರೆ.

ಅಂದ್ಹಾಗೆ, ಸಂಸದರ ಮಗಳಿಗೆ ಸೋಂಕು ಖಚಿತವಾಗಿರುವ ಹಿನ್ನೆಲೆ ಮನೆಯ ಸುತ್ತಲೂ 5 ಕಿ.ಮೀ ರೆಡ್ ಝೋನ್ ಹೇರಲಾಗಿದೆ. ರೆಡ್ ಝೋನ್ ನಲ್ಲಿರುವ ಮನೆಯವರು ಯಾರೂ ಹೊರ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾಹಿತಿ ನೀಡಿದ್ದರು. ಸಂಸದ ಸೇರಿದಂತೆ ಮನೆಯಲ್ಲಿನ 6 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 4 ಜನರ ವರದಿ ಬಂದಿದ್ದು, ಎಲ್ಲರದ್ದು ನೆಗೆಟಿವ್ ಬಂದಿದೆ. ಸೋಂಕಿತ ಮಹಿಳೆ ಜೊತೆ ಇಬ್ಬರು ಮಕ್ಕಳಿದ್ದು, ಅವರಲ್ಲೂ ಸೋಂಕು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದ್ದರು.ಇದೀಗ, ಸಿದ್ದೇಶ್ವರ ಮಗಳಿಗೆ ಸೋಂಕು ಇಲ್ಲ ಎಂದು ಸ್ವತಃ ಸಂಸದರೇ ಹೇಳುವ ಮೂಲಕ ಗೊಂದಲ ಬಗೆಹರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+