ದಾವಣಗೆರೆ: ನೀರಿನ ಸಮಸ್ಯೆ ನಿವಾರಣೆಗೆ ಕೆರೆಗಳ ಜೋಡಣೆ

Posted By:
Subscribe to Oneindia Kannada

ದಾವಣಗೆರೆ, ಜು.19: ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗ ಲಭ್ಯವಿರುವ ನೀರು 10 ರಿಂದ 15 ದಿನಗಳಿಗೆ ಸಾಕಾಗುತ್ತದೆ. ಇದಕ್ಕಾಗಿ ಕೆರೆಗಳ ಆಂತರಿಕ ಜೋಡಣೆಯೇ ಪರಿಹಾರ ಎಂದು ಪಾಲಿಕೆ ಮೇಯರ್ ಅಶ್ವಿನಿ ಪ್ರಶಾಂತ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಟಿವಿ ಸ್ಟೇಷನ್ ಕೆರೆ ಹಾಗೂ ಕುಂದುವಾಡ ಕೆರೆಗಳ ನೀರಿನ ಪ್ರಮಾಣ ಪ್ರತಿದಿನ ಕುಸಿತ ಕಾಣುತ್ತಿದೆ. ಹೀಗಾಗಿ ಕೆರೆಗಳ ಆಂತರಿಕ ಜೋಡಣೆಗೆ ಸಿದ್ಧರಾಗಬೇಕಿದೆ ಎಂದು ಹೇಳಿದರು.[ಮಳೆಗಾಗಿ ದುಗ್ಗಮ್ಮ ದೇವಿ ಮುಂದೆ ಸಂತೆಯೋ ಸಂತೆ!]

ನಗರ ಈ ಎರಡು ಪ್ರಮುಖ ಕೆರೆಗಳಿಗೆ ಭದ್ರಾ ಜಲಾಶಯದಿಂದ ನೀರು ಒದಗಿಸಲಾಗುತ್ತದೆ. ಆದರೆ, ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಸದ್ಯ 144 ಅಡಿ ಮಾತ್ರ ಇದೆ. 150 ಅಡಿ ಪ್ರಮಾಣ ದಾಟಿದರೆ ಮಾತ್ರ ನಾಲೆಗಳ ಮೂಲಕ ನೀರು ಒದಗಿಸಲು ಸಾಧ್ಯ ಎಂದರು.[ದಾವಣಗೆರೆಯಲ್ಲಿ ಹೆಲಿಕಾಪ್ಟರ್ ಆಂಬುಲೆನ್ಸ್ ಸೇವೆಗೆ ಚಾಲನೆ]

ಈಗ ನಗರದಲ್ಲಿ ಜನರಿಗೆ ವಾರದಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ವಾರ್ಡ್ ಗಳನ್ನು ವಿಂಗಡಿಸಿ ನೀರು ಬಿಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಕೆರೆಗಳ ಜೋಡಣೆ ಅಗತ್ಯ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪಾಲಿಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಮುಂದಿದೆ ಓದಿ...[ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ]

ಕೆರೆಗಳ ಜೋಡಣೆ ಏಕೆ ಅಗತ್ಯ?

ಕೆರೆಗಳ ಜೋಡಣೆ ಏಕೆ ಅಗತ್ಯ?

2045ರ ಹೊತ್ತಿಗೆ ನಗರಕ್ಕೆ ಸುಮಾರು 160 MLD ನೀರಿನ ಅಗತ್ಯ ಇರುತ್ತದೆ. ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ, ಆವರಗೆರೆ ಎಲ್ಲವನ್ನು ಆಂತರಿಕ ಜೋಡಣೆ ಮಾಡುವ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಜಲ ಸಿರಿ ಯೋಜನೆಯಡಿಯಲಿ 535 ಕೋಟಿ ರು ಅನುದಾನ ನಿರೀಕ್ಷಿಸಲಾಗಿದೆ.

ಜಲ ಸಿರಿ ಯೋಜನೆಯಡಿ ಕಾಮಗಾರಿ

ಜಲ ಸಿರಿ ಯೋಜನೆಯಡಿ ಕಾಮಗಾರಿ

ಆದರೆ, ಜಲ ಸಿರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ಕರ್ನಾಟಕ ಸರ್ಕಾರ ಇಲ್ಲಿ ತನಕ 35 ಕೋಟಿ ರು ಮಾತ್ರ ನೀಡಿದೆ. ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ಅಮೃತ್ ಸಿಟಿ ಯೋಜನೆ ಮೂಲಕ ಸಿಗುವ 160 ಕೋಟಿ ರು ಬಳಸಿಕೊಂಡು ಕೆರೆ ಜೋಡಣೆ ಪೂರ್ಣಗೊಳಿಸಲಾಗುವುದು.

ಮಳೆಗಾಗಿ ಸಂತೆ

ಮಳೆಗಾಗಿ ಸಂತೆ

ಪ್ರತಿವರ್ಷದ ವಾಡಿಕೆಯಂತೆ ನಗರದ ದೇವತೆ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಜುಲೈ 24ರಿಂದ ಆಗಸ್ಟ್ 28ರ ವರೆಗೆ ಭಾನುವಾರ ಸಂತೆ ನಡೆಸಲು ನಿರ್ಧರಿಸಲಾಗಿದೆ. ಮಳೆಗಾಗಿ ವಿಶೇಷ ಪ್ರಾರ್ಥನೆ ಕೈಗೊಳ್ಳಲಾಗುತ್ತದೆ ಎಂದು ಮೇಯರ್ ಅಶ್ವಿನಿ ಪ್ರಶಾಂತ್ ಹೇಳಿದರು.

ಪ್ಲಾಸ್ಟಿಕ್ ಮುಕ್ತ ನಗರ ಗುರಿ

ಪ್ಲಾಸ್ಟಿಕ್ ಮುಕ್ತ ನಗರ ಗುರಿ

ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರ ಪಾಲಿಕೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಸಾರ್ವಜನಿಕವಾಗಿ ಪ್ಲಾಸ್ಟಿಕ್ ಬಳಸಿದ್ದಲ್ಲಿ ಪಾಲಿಕೆಗೆ ದಂಡ ತೆರಬೇಕಾಗುತ್ತದೆ. ಈಗಾಗಲೆ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ವಶಪಡಿಸಿಕೊಳ್ಳುವ ಕಾರ್ಯ ಸಾಗಿದೆ ಎಂದರು.

ಎರಡೂವರೆ ಟನ್ ಗಳಷ್ಟು ಪ್ಲಾಸ್ಟಿಕ್ ವಶ

ಎರಡೂವರೆ ಟನ್ ಗಳಷ್ಟು ಪ್ಲಾಸ್ಟಿಕ್ ವಶ

ನಗರವನ್ನು ಶೇ 95ರಷ್ಟು ಪ್ಲಾಸ್ಟಿಕ್ ಮುಕ್ತವನ್ನಾಗಿಸುವಲ್ಲಿ ಪಾಲಿಕೆ ಯಶಸ್ವಿಯಾಗಿದೆ. ಸುಮಾರು ಎರಡೂವರೆ ಟನ್ ಗಳಷ್ಟು ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಅಂಗಡಿ, ಹೂ ತರಕಾರಿ ಮಾರಾಟಗಾರರಲ್ಲದೆ, ಕೈಗಾರಿಕಾ ಪ್ರದೇಶಗಳ ಮೇಲೂ ದಾಳಿ ನಡೆಸಿ ಶೇ 100 ರಷ್ಟು ಪ್ಲಾಸ್ಟಿಕ್ ಮುಕ್ತ ನಗರ ತಲುಪಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Davangere City facing water Scarcity Lakes Inter linking is the solution said mayor Ashwini Prashanth. TV Station lake and Kundavada lake will be inter link to provide water to city. At present available water is enough to serve up to 10 to 15 days she added.
Please Wait while comments are loading...