ದಾವಣಗೆರೆ : ಯಾವ ಬಡವಾಣೆಗೆ ಯಾವಾಗ ನೀರು ಪೂರೈಕೆ?

Posted By:
Subscribe to Oneindia Kannada

ದಾವಣಗೆರೆ, ಜನವರಿ 11: ದಾವಣಗೆರೆ ನಗರದ ಶೇ.60ರಷ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡುವ ರಾಜನಹಳ್ಳಿ ಜಾಕ್ವೆಲ್ ನಲ್ಲಿ ತುಂಗಭದ್ರಾ ನೀರು ಬೇಸಿಗೆಗೆ ಮುಂಚಿತವಾಗಿ ಬತ್ತಿದೆ. ಈಗ ನಗರದ ದಕ್ಷಿಣ ಭಾಗಗಳಿಗೆ ನಿಯಮಿತವಾಗಿ ನೀರು ಪೂರೈಕೆ ಮಾಡುವುದು ಅನಿವಾರ್ಯ ಮಹಾನಗರ ಪಾಲಿಕೆ ಪ್ರಕಟಿಸಿದೆ.

ಒಂದು ಗಂಟೆ ಮಾತ್ರ ನೀರು ಸರಬರಾಜು ಮಾಡಲಿದ್ದು, ಅದನ್ನು ಕುಡಿಯಲು ಮಾತ್ರ ಬಳಸಬೇಕಿದೆ. ಜನವರಿ 9ರಿಂದ ಜ.23ರವರೆಗೆ ನೀರು ಪೂರೈಕೆ ಮಾಡುವ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನಗರ ಈ ಎರಡು ಪ್ರಮುಖ ಕೆರೆಗಳಿಗೆ ಭದ್ರಾ ಜಲಾಶಯದಿಂದ ನೀರು ಒದಗಿಸಲಾಗುತ್ತದೆ. ಆದರೆ, ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಸದ್ಯ 144 ಅಡಿ ಮಾತ್ರ ಇದೆ. 150 ಅಡಿ ಪ್ರಮಾಣ ದಾಟಿದರೆ ಮಾತ್ರ ನಾಲೆಗಳ ಮೂಲಕ ನೀರು ಒದಗಿಸಲು ಸಾಧ್ಯ ಎಂದು ಮೇಯರ್ ರೇಖಾ ನಾಗರಾಜ್ ಹೇಳಿದರು.

Davangere City Residents schedule of water supply

ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದಕ್ಕಾಗಿ ಕೆರೆಗಳ ಆಂತರಿಕ ಜೋಡಣೆಯೇ ಪರಿಹಾರ, ಯೋಜನೆ ಸದ್ಯಕ್ಕೆ ಕಾರ್ಯಗತವಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎಂದು ಮೇಯರ್ ರೇಖಾ ತಿಳಿಸಿದರು.

* ರಂಗನಾಥ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ 1ನೇ ಹಂತ, ಸಂಪೂರ್ಣ
* ವಾರ್ಡ್ ನಂ.37, 26, 27, ಭಾಗಶಃ, 33ರ 31 ಮತ್ತು 32ನೇ ವಾರ್ಡುಗಳಲ್ಲಿ ಜ. 9, 15 ಹಾಗೂ 21ರಂದು ನೀರು ಪೂರೈಕೆ
* ವಾರ್ಡ್ ನಂ. 28, 29, 36, 38, ಭಾಗಶಃ 32 ಹಾಗೂ 35 ಗಳಿಗೆ ಜ.10, 16 ಮತ್ತು 22ರಂದು ನೀರು ಪೂರೈಕೆಯಾಗಲಿದೆ.
* ವಾರ್ಡ್ ನಂ. 17, 20, 29, 39, ಭಾಗಶಃ 35 ಹಾಗೂ 24 ಗಳಿಗೆ ಜ. 11, 17 ಮತ್ತು 23ರಂದು ನೀರು ಪೂರೈಸಲಾಗುವುದು

ಭದ್ರಾ ಬಲದಂಡೆ ನಾಲೆಯ ಮೂಲಕ ಸಮಗ್ರ ನೀರು ಸರಬರಾಜು ಕೇಂದ್ರ ಹಾಗೂ ಕುಂದುವಾಡ ಕೆರೆಗಳಿಗೆ ನೀರು ಭರ್ತಿ ಮಾಡಿಕೊಳ್ಳುತ್ತಿರುವುದರಿಂದ, ಸಂಕ್ರಾಂತಿ ವೇಳೆ ಕೆರೆಗಳಿಗೆ ತೆರಳದಂತೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ಸಿಬ್ಬಂದಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Davangere City facing water scarcity, Drinking water supply can be provided only for an hour. Here is a schedule of water supply for residents. Mayor Rekha also said lakes Inter linking project is underway.
Please Wait while comments are loading...