• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ರೇಣುಕಾಚಾರ್ಯರೇ ನೋಡಿ: ನಿಮ್ಮದೇ ಕ್ಷೇತ್ರದ ಕೊವಿಡ್-19 ಕೇಂದ್ರದ ಕಥೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 06: ಕೊರೊನಾವೈರಸ್ ವಾರಿಯರ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮ ಕಾರ್ಯವೈಖರಿಯಿಂದ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ.
ಒಂದು ಕಡೆ ಕೊವಿಡ್-19 ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತೇನೆ ಎಂದು ಶಾಸಕರು ಓಡಾಡುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಅವರದ್ದೇ ಸ್ವಕ್ಷೇತ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಕೊರೊನಾವೈರಸ್ ಸೋಂಕಿತರೊಬ್ಬರು ಆರೋಪಿಸಿದ್ದಾರೆ.

"ವಿಧಿಯೇ ನೀನೆಷ್ಟು ಕ್ರೂರಿ'': ಸೋಂಕಿತನ ಅಂತ್ಯಸಂಸ್ಕಾರ ಮಾಡಿ ಭಾವುಕರಾದ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರೊಬ್ಬರು ಕೊರೊನಾವೈರಸ್ ಚಿಕಿತ್ಸಾ ಕೇಂದ್ರದ ಅವ್ಯವಸ್ಥೆ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ, ತಹಶೀಲ್ದಾರ್, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಹೊನ್ನಾಳಿ ತಾಲೂಕು ಕೊವಿಡ್-19 ಕೇಂದ್ರದಲ್ಲಿ ಸಮಸ್ಯೆ?:
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯು ದಾಖಲಾದ ಹಾಸಿಗೆಯನ್ನು ಸ್ಯಾನಿಟೈಸ್ ಮಾಡುತ್ತಿಲ್ಲ. ಒಬ್ಬರು ಬಳಸಿದ ಹಾಸಿಗೆಗೆ ಸ್ಯಾನಿಟೈಸ್ ಮಾಡದೇ ಮತ್ತೊಬ್ಬರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಈ ಅವ್ಯವಸ್ಥೆ ಬಗ್ಗೆ ಪ್ರಸ್ನೆ ಮಾಡಿದ್ದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯ ಕಾರಣ ಹೇಳಲಾಗುತ್ತಿದೆ ಎಂದು ವಿಡಿಯೋ ಮಾಡಿರುವ ಸೋಂಕಿತ ವ್ಯಕ್ತಿ ದೂಷಿಸಿದ್ದಾರೆ.

https://kannada.oneindia.com/news/davanagere/honnali-mla-renukacharya-performs-last-rites-of-man-who-died-of-covid-19-223872.html

Recommended Video

   Online Class ಗಳಿಂದ ಶಿಕ್ಷಕರಿಗಾಗುವ ತೊಂದರೆಗಳ ಬಗ್ಗೆ ಮಾತನಾಡಿದ ಪ್ರೊಫೆಸರ್ | Oneindia Kannada

   ಸಾಯುವುದಕ್ಕೆ ಈ ಆಸ್ಪತ್ರೆಗೆ ಬರಬೇಕೇ?:
   ಕೊರೊನಾವೈರಸ್ ಸೋಂಕಿತರು ಬಳಸಿರುವ ಅಥವಾ ಆಸ್ಪತ್ರೆಯಲ್ಲಿ ಸೋಂಕಿನಿಂದಲೇ ಪ್ರಾಣ ಬಿಟ್ಟವರು ಬಳಸಿದ ಹಾಸಿಗೆಯನ್ನು ಮತ್ತೊಬ್ಬರಿಗೆ ನೀಡಲಾಗುತ್ತಿದೆ. ಈ ಅವ್ಯವಸ್ಥೆಯಿಂದಾಗಿ ಜನರ ಜೀವಕ್ಕೆ ಗ್ಯಾರೆಂಟಿ ಇಲ್ಲದಂತೆ ಆಗಿದೆ. ಜನರು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕೇ ಎಂದು ಸೋಂಕಿತ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ.

   English summary
   Covid-19 Patient Explains About Problems In Corona Center Under MLA Renukacharya Constituency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X