ದಾವಣಗೆರೆಯಲ್ಲಿ ನ್ಯಾಯಬೆಲೆ ಅಂಗಡಿಗೂ ಕೊರೊನಾ ಎಫೆಕ್ಟ್
ದಾವಣಗೆರೆ, ಮಾರ್ಚ್ 15: ಕೊರೊನಾ ವೈರೆಸ್ ನ ಎಫೆಕ್ಟ್ ಈಗ ನ್ಯಾಯಬೆಲೆ ಅಂಗಡಿಗಳಿಗೂ ತಟ್ಟಿದೆ. ದಾವಣಗೆರೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡುವಾಗ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಸಾಧನವನ್ನು ಸ್ವಚ್ಛಗೊಳಿಸುವಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಬೆರಳಚ್ಚು ಪಡೆದ ನಂತರ ಸ್ಯಾನಿಟೈಸರ್ ಮೂಲಕ ಪ್ರತಿ ಬಾರಿಯೂ ಸ್ವಚ್ಛಗೊಳಿಸಲು ಆಹಾರ ಇಲಾಖೆ ಆಯುಕ್ತರು ಸೂಚನೆ ನೀಡಿದ್ದು, ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸೊಸೈಟಿಯ ಕಾರ್ಯದರ್ಶಿಗಳಿಗೆ ಆಹಾರ ಇಲಾಖೆಯಿಂದ ಸೂಚನೆ ಬಂದಿದೆ.

ಪಡಿತರ ವಿತರಣೆ ಹಾಗೂ ಇ-ಕೆವೈಸಿ ಸಂದರ್ಭದಲ್ಲಿ ಪ್ರತಿ ಬಾರಿಯೂ ಸ್ವಚ್ಚಗೊಳಿಸಬೇಕು ಎಂಬ ಆದೇಶ ನೀಡಲಾಗಿದ್ದು, ಪ್ರತಿಯೊಬ್ಬರ ಬಯೋ ಪಡೆದ ತಕ್ಷಣ ಬಯೋಮೆಟ್ರಿಕ್ ಸಾಧನವನ್ನು ಸ್ಯಾನಿಟೈಸರ್ ಮೂಲಕ ಪ್ರತಿ ಬಾರಿಯೂ ಸ್ವಚ್ಛಗೊಳಿಸಬೇಕು. ಸದ್ಯಕ್ಕೆ ಬಟ್ಟೆಯಿಂದ ಕೈ ಶುಚಿಗೊಳಿಸಿಸುತ್ತಿದ್ದು, ಸರ್ಕಾರದ ಆದೇಶ ಬಂದ ಬಳಿಕ ಸ್ಯಾನಿಟೈಸರ್ ಬಳಸಲು ಮುಂದಾಗುವುದಾಗಿ ಆಹಾರ ಇಲಾಖೆ ತಿಳಿಸಿದೆ.












Click it and Unblock the Notifications