ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬತ್ತಿದ ಕುಂದುವಾಡ ಕೆರೆ; ದಾವಣಗೆರೆ ನಗರಕ್ಕೆ ಜಲಕ್ಷಾಮ?

By ಅಣ್ಣಪ್ಪ ಬಿ.ಕುಂದುವಾಡ
|
Google Oneindia Kannada News

ದಾವಣಗೆರೆ, ಫೆಬ್ರವರಿ 03: ನೂರಾರು ಪ್ರಾಣಿ ಪಕ್ಷಗಳ ಸಾವು, ಕುಂದವಾಡ ಕೆರೆ ಅಂಗಳದಲ್ಲಿ ಘರ್ಜಿಸುತ್ತಿರುವ ಜೆಸಿಬಿಗಳು, ಕೆರೆಯ ಕಾಮಗಾರಿ ನಿಲ್ಲಿಸುವಂತೆ ಸಾರ್ವಜನಿಕರ ಆಕ್ರೋಶ ಈ ಎಲ್ಲಾ ಸನ್ನಿವೇಶ ಕಂಡು ಬರುತ್ತಿರುವುದು ದಾವಣಗೆರೆಯ ಜೀವನಾಡಿಯಾದ ಕುಂದವಾಡ ಕೆರೆಯಲ್ಲಿ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಕೆರೆಯ ನೀರು ಖಾಲಿ ಮಾಡಲಾಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದಾವಣಗೆರೆ ನಗರದ ಜೀವನಾಡಿ ಕುಂದವಾಡ ಕೆರೆ. ನಗರದ ಶೇ 60 ರಷ್ಟು ಭಾಗಕ್ಕೆ ಈ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಈಗ ಕೆರೆ ಬತ್ತಿದ್ದು, ಇಡೀ ನಗರಕ್ಕೆ ಜಲಕ್ಷಾಮ ಉಂಟಾಗುವ ಸ್ಥಿತಿ ಎದುರಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 15 ಕೋಟಿ ವೆಚ್ಚದಲ್ಲಿ ಕುಂದವಾಡ ಕರೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಕೆರೆಯ ಏರಿ, ರಸ್ತೆ ಅಗಲೀಕರ, ಕೆರೆಯಲ್ಲಿರುವ ಹೂಳು ಸೇರಿದಂತೆ ವಿವಿಧ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

120 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ಬಸ್ ನಿಲ್ದಾಣ ಪುನರ್ ನಿರ್ಮಾಣ120 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ಬಸ್ ನಿಲ್ದಾಣ ಪುನರ್ ನಿರ್ಮಾಣ

ಇಡೀ‌ ಕೆರೆಯನ್ನು ಬರಿದು ಮಾಡಿದ್ದಾರೆ. ಆದರೂ ಕೂಡ ಸಚಿವರು ಅಭಿವೃದ್ಧಿ ಮಾಡಬೇಕು ಎಂದರೆ‌ ಸಣ್ಣಪುಟ್ಟ ತೊಂದರೆಗಳು ಇರುತ್ತವೆ ಎಂದು ಸಬೂಬು ಹೇಳಿಕೊಂಡಿದ್ದಾರೆ. ಇನ್ನೊಂದು ಕಡೆ ಬದುಕು ಕಟ್ಟಿಕೊಳ್ಳಲು ಸಾವಿರಾರು ಕಿ. ಮೀ. ದೂರದಿಂದ ಬರುವ ವಿದೇಶ ಹಕ್ಕಿಗಳು ಶವವಾಗುತ್ತಿವೆ. ನೀರಿಲ್ಲದೆ ಪರಿತಪಿಸುತ್ತಿರುವ ಹಕ್ಕಿಗಳು ಸಾವನ್ನಪ್ಪುತ್ತಿವೆ. ಸಂತಾನಾಭಿವೃದ್ಧಿಗಾಗಿ ಬರುವ ಪಕ್ಷಿಗಳ ಕೆಲವು ಕಾಲ ಇದ್ದು ಇಲ್ಲಿಂದ ವಾಪಸ್ ಹೋಗುತ್ತವೆ.

ದಾವಣಗೆರೆ; ಸಚಿವರ ಸಿಟಿ ರೌಂಡ್ಸ್, ಅಧಿಕಾರಿಗಳ ವಿರುದ್ಧ ಗರಂ ದಾವಣಗೆರೆ; ಸಚಿವರ ಸಿಟಿ ರೌಂಡ್ಸ್, ಅಧಿಕಾರಿಗಳ ವಿರುದ್ಧ ಗರಂ

ನೀರಿಲ್ಲದೆ ಜಲಚರಗಳು ಸಾವು

ನೀರಿಲ್ಲದೆ ಜಲಚರಗಳು ಸಾವು

ಕೆರೆ ನೀರು ಖಾಲಿ ಆಗುತ್ತಿರುವುದರಿಂದ ವಿದೇಶಿ ಹಕ್ಕಿಗಳು ಮಾತ್ರವಲ್ಲ, ಮೀನು, ಶಂಕು ಹುಳು, ನೀರು ಹಾವು, ಆಮೆ, ಏಡಿ ಮುಂತಾದ ಜಲಚರಗಳು ಕೆರೆಯಲ್ಲಿ ನೀರಿಲ್ಲದ ಪರಿಣಾಮ ಸಾವನ್ನಪ್ಪುತ್ತಿವೆ. ನೀರಲ್ಲಿ ಸುತ್ತಾಡುವ ಹಕ್ಕಿಗಳು ಸಿಗುವ ಸ್ಥಳದಲ್ಲಿ ಅವುಗಳ ಅಸ್ತಿ ಪಂಜರ ಸಿಗುತ್ತಿವೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರಕ್ಕೆ ನೀರಿನ ಕೊರತೆ

ನಗರಕ್ಕೆ ನೀರಿನ ಕೊರತೆ

ಕುಂದವಾಡ ಕೆರೆಗೆ ಸುತ್ತಲೂ ಪ್ರತಿನಿತ್ಯ ವಾಯು ವಿಹಾರ ನಡೆಸಲು ನೂರಾರು ಜನರು ಆಗಮಿಸುತ್ತಾರೆ. ಕೆರೆಯ ಸೌಂದರ್ಯವನ್ನು ಸವಿಯುತ್ತಾ ಆನಂದದಿಂದ ಕಾಲ ಕಳೆಯುತ್ತಿದ್ದರು. ಆದರೆ ಈಗ ಅದೆಲ್ಲವುಕ್ಕೂ ಕಡಿವಾಣ ಹಾಕಿದಂತಾಗಿದೆ. ನೈಸರ್ಗಿಕವಾದ ಈ ಸುಂದರ ಕೆರೆ ನೋಡಲು ಸಾವಿರಾರು ಜನರು ಆಗಮಿಸುತ್ತಿದ್ದರು. ಈ ಕೆರೆಯನ್ನೇ ನಂಬಿ ಸಾವಿರಾರು ಕೊಳವೆಬಾವಿಗಳಿವೆ. ಆದರೆ ಈಗ ಸ್ಮಾರ್ಟ್ ಸಿಟಿ ಅಭಿವೃದ್ಧಿ ಹೆಸರಲ್ಲಿ ಈ ಕೆರೆ ವಿನಾಶದ ಹಂತಕ್ಕೆ ತಲುಪುತ್ತಿದೆ. ಇಡೀ ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕ ಉಂಟಾಗಿದೆ.

ಪಕ್ಷಿಪ್ರೇಮಿಗಳ ಆಕ್ರೋಶ

ಪಕ್ಷಿಪ್ರೇಮಿಗಳ ಆಕ್ರೋಶ

ಪಕ್ಷಿ ಪ್ರೇಮಿ ಶಿಶುಪಾಲ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ, "ಕೇವಲ ಅಭಿವೃದ್ಧಿ ಕಾಮಗಾರಿ ಮಾಡಿದರೆ ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗುತ್ತಿರಲಿಲ್ಲ. ಕೆರೆಯ ಜೊತೆ ಲಕ್ಷಾಂತರ ಜೀವಿಗಳು ಅವಿನಾಭಾವ ಸಂಬಂಧವನ್ನು ಹೊಂದಿವೆ, ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದಾಂತೆ ಲಕ್ಷಾಂತರ ಜೀವಿಗಳು ಸಾವನ್ನಪ್ಪುತ್ತಿವೆ" ಎಂದು ಹೇಳಿದ್ದಾರೆ.

ಯಾರ ಸಲಹೆಯನ್ನು ಕೇಳಿಲ್ಲ

ಯಾರ ಸಲಹೆಯನ್ನು ಕೇಳಿಲ್ಲ

ಈಗಾಗಲೇ ಅಭಿವೃದ್ಧಿಯಾಗಿರುವ ಕೆರೆಯನ್ನು ಮತ್ತೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಾಂಕ್ರೀಟ್ ತೊಟ್ಟಿ‌ಮಾಡುವ ಬದಲು ನೈಸರ್ಗಿಕ ವಾಗಿ ಇರುವ ಕೆರೆಯನ್ನು ಹಾಗೇ ಬಿಟ್ಟು, ಬೇರೆ ಪಾಳು ಬಿದ್ದ ಕೆರೆಗಳನ್ನು ಅಭಿವೃದ್ಧಿ ಮಾಡಬೇಕು. ಅದನ್ನು ಬಿಟ್ಟು ಲಕ್ಷಾಂತರ ಜೀವಿಗಳಿಗೆ ತೊಂದರೆಯಾಗುವಂತೆ ಕುಂದವಾಡ ಕೆರೆ ಅಭಿವೃದ್ಧಿ ಮಾಡುವುದು ಸರಿಯಲ್ಲ.ಪರಿಣಿತರು ಹಾಗೂ ಪರಿಸರ ಪ್ರೇಮಿಗಳ ಸಲಹೆಯನ್ನು ಪಡೆಯದೇ ಕಾಮಗಾರಿ ಆರಂಭಿಸಲಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

Recommended Video

#AeroIndia2021: 13ನೇ ಆವೃತ್ತಿಯ ಏರ್ ಶೋಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | Oneindia Kannada
15 ಕೋಟಿ ಅನುದಾನ

15 ಕೋಟಿ ಅನುದಾನ

ದಾವಣಗೆರೆಯ ಜನತೆಗೆ ಕುಡಿಯುವ ನೀರಿನ ಮೂಲವಾಗಿರುವ ಕೆರೆ ಇದು. ಕೆರೆಯ ಸುತ್ತಮುತ್ತಲಿರುವ ಐದಾರು ಕಿಲೋಮೀಟರ್ ದೂರದಲ್ಲಿನ ಬೋರ್ ವೆಲ್ ಗಳು ಸಂಪೂರ್ಣ ಬತ್ತಿಹೋಗುತ್ತವೆ, ಕಾಮಗಾರಿಯನ್ನು ಸ್ಥಗಿತ ಮಾಡಬೇಕು. ಕೆರೆಯನ್ನು ನಾಶ ಮಾಡಲು ಮುಂದಾದರೆ ರಾಷ್ಟ್ರೀಯ ಹಸಿರು ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೂ ದೂರು ನೀಡಲಾಗುತ್ತದೆ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ. ಮೂರು ಕೋಟಿಗೆ ಮುಗಿಯುವ ಕಾಮಗಾರಿಗಾಗಿ 15 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

English summary
Hundreds of snakes, birds, fishes found dead in Kundavada lake in Davanagere. Lake had been dried for the development works under the smart city project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X