B and E-Khata: ದಾವಣಗೆರೆ ಜಿಲ್ಲೆ ಜನತೆಗೆ ಬಿ ಹಾಗೂ ಇ ಖಾತಾ ಬಗ್ಗೆ ಮಹತ್ವದ ಮಾಹಿತಿ
B and E-Khata: ಅಕ್ರಮ ಬಡಾವಣೆ ಹಾಗೂ ಅನಧಿಕೃತ ಆಸ್ತಿ ಮಾಲೀಕರಿಗೆ ಸರ್ಕಾರವು ಬಿ-ಖಾತಾ ಅಭಿಯಾನ ಹಮ್ಮಿಕೊಂಡಿದೆ. ಹಾಗೆಯೇ ಇದೀಗ ಸರ್ಕಾರದ ಆದೇಶದ ಮೇರೆಗೆ ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ಗಳಲ್ಲಿ ಈಗಾಗಲೇ ಕಂದಾಯ ಆಸ್ತಿಗಳಿಗೆ ಬಿ ಹಾಗೂ ಇ ಖಾತಾ ಉಚಿತವಾಗಿ ನೀಡಲಾಗುತ್ತಿದೆ.
ಅದರಲ್ಲೂ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚು ಆಸ್ತಿಗಳಿದ್ದು, ಬಿ ಹಾಗೂ ಇ ಖಾತಾ ಪಡೆಯಲು ಹೆಚ್ಚೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ ಅರ್ಜಿ ಸಲ್ಲಿಸಿಕೆ ಮಾಡಿದವರಿಗೆ ಪಾಲಿಕೆಯಿಂದ ಬಿ ಹಾಗೂ ಇ ಖಾತೆ ನೀಡಲಾಗುತ್ತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿ ಆಸ್ತಿಗಳಿವೆ. ಪಾಲಿಕೆ ಅಧಿಕಾರಿಗಳು ಸರ್ಕಾರದ ಆದೇಶದ ಅನ್ವಯ ಬಿ ಹಾಗೂ ಇ ಖಾತಾಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಜಿಎಂ ಅವರು ಬಿ.ಖಾತಾ ನೀಡಲು ಜಿಲ್ಲೆಯ ಎಲ್ಲಾ ಪಿಡಿಓ, ಪುರಸಭೆ, ನಗರಸಭೆ, ಪಾಲಿಕೆಗೆ ಸೂಚಿಸಿದ್ದಾರೆ.
ಆದೇಶ ಬರುತ್ತಿದ್ದಂತೆಯೇ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 450 ಅರ್ಜಿಗಳು ಬಂದಿದ್ದು, ಇನ್ನು ಜಿಲ್ಲೆಯಾದ್ಯಂತ ಮಾಹಿತಿ ಲಭ್ಯ ಆಗಬೇಕಿದೆ. ಈ ಖಾತಾಗಳನ್ನು ನೀಡಲು 10,000 ರೂಪಾಯಿ ನಿಗದಿಪಡಿಸಲಾಗಿತ್ತು. ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ 50 ರೂಪಾಯಿ ಪಡೆದು ಖಾತಾ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ .ಜಿ.ಎಂ.ಅವರು, ಬಿ ಖಾತಾ ಮಾಡಲು ಎಲ್ಲಾ ಪಿಡಿಒ, ಪುರಸಭೆ, ನಗರ ಸಭೆ, ಪಾಲಿಕೆಗೆ ಸೂಚನೆ ಕೊಟ್ಟಿದ್ದೇವೆ. ಬಿ ಅಥವಾ ಇ ಖಾತಾ ಮಾಡಲು ಆಂದೋಲನ ಮಾಡಿದ್ದೇವೆ ಎಂದು ಹೇಳಿದರು.
ಈಗಾಗಲೇ ದಾವಣಗೆರೆ ಪಾಲಿಕೆಗೆ 450 ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ಎಷ್ಟು ಬಂದಿವೆ ಎಂಬ ಮಾಹಿತಿ ಲಭ್ಯವಾಗಬೇಕಿದೆ. ಅಲ್ಲದೆ 14ಕ್ಕೆ ಹರಿಹರದಲ್ಲಿ ಸಭೆ ಮಾಡುತ್ತೇವೆ. ಪಾಲಿಕೆಯಿಂದ 10,000 ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು. ಆದರೂ ಸಚಿವರ ಸೂಚನೆ ಮೇರೆಗೆ ಹಣ ಪಡೆಯುತ್ತಿಲ್ಲ. ಬದಲಿಗೆ ಉಚಿತವಾಗಿ ಬಿ ಹಾಗೂ ಇ ಖಾತೆ ಮಾಡಿಕೊಡುತ್ತೇವೆ. ಸರ್ಕಾರದ ಮಾನದಂಡದ ಮೂಲಕ ಅರ್ಜಿ ಕೊಟ್ಟರೆ ಬಿ, ಇ ಖಾತಾ ನೀಡಲಾಗುತ್ತದೆ ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ ಮಹಾನಗರ ಪಾಲಿಕೆಯಿಂದ ಫೆ.20 ರಿಂದ ಬಿ ಖಾತೆ ಕೊಡಲು ಆರಂಭಿಸಿದ್ದೇವೆ. ದಾವಣಗೆರೆ ನಗರದಲ್ಲಿ ಒಟ್ಟು 20 ಸಾವಿರ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ನೇರವಾಗಿ ಮೂರು ವಲಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.
ಖಾತಾ ಮಾಡಿಸಲು ಬೇಕಾದ ದಾಖಲೆಗಳು
* ಮಾಲೀಕರ ಆಧಾರ್ ಕಾರ್ಡ್
* ವೋಟರ್ ಐಡಿ
* ಆಸ್ತಿ ಪತ್ರ
* ತೆರಿಗೆ ಕಟ್ಟಿದ ರಶೀದಿ ಜೊತೆ ಸಲ್ಲಿಸಬೇಕು
ಅರ್ಜಿ, ಆಧಾರ್ ಕಾರ್ಡ್, ವೋಟರ್ ಐಡಿ, ಆಸ್ತಿ ಪತ್ರ, ತೆರಿಗೆ ಕಟ್ಟಿದ ರಶೀದಿ ಜೊತೆ ಸಲ್ಲಿಸಿದರೆ, ನೊಂದಣಿ ಮಾಡಿಕೊಳ್ಳಬಹುದು. ಖಾತಾ ಇದ್ದರೆ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ನಾವು ಕೊಡಬಹುದು. ಈ ಬಗ್ಗೆ ಆಟೋ ಅನೌನ್ಸ್ಮೆಂಟ್ ಮಾಡಿ ಅಂತರ್‌ಜಾಲದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಖಾತಾ ಮಾಡಿಸಲು ಮೇ 10 ಕೊನೆ ದಿನವಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20,000 ಸಾವಿರ ಆಸ್ತಿಗಳಿವೆ. ಬಿ ಖಾತಾಗಾಗಿ 450 ಅರ್ಜಿ ಬಂದಿದ್ದು, ಈಗಾಗಲೇ 250 ಖತಾ ಕೊಟ್ಟಿದ್ದೇವೆ. ದಿನಕ್ಕೆ 100-150 ಅರ್ಜಿಗಳು ಬರುತ್ತಿವೆ. ಈಗಾಗಲೇ ಕೆಲವರಿಗೆ ಬಿ ಖಾತಾವನ್ನು ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ನೀಡಿದ್ದಾರೆ. ಸಿಬ್ಬಂದಿ ಕಡಿಮೆ ಇರುವ ಹಿನ್ನೆಲೆ ಸಮಸ್ಯೆ ಆಗುತ್ತಿದೆ ಎಂದರು.
ವಿನಾಯಕ ನಗರ, ಯಲ್ಲಮ್ಮ ನಗರ, ನಿಟ್ಟುವಳ್ಳಿ ಆಶೋಕ್ ನಗರದ ಭಾಗದಲ್ಲಿ ಹೆಚ್ಚು ಬಿ ಖಾತೆ ಇವೆ. ಇದೀಗ ಎರಡು ತೆರಿಗೆ ಕಟ್ಟಬೇಕು. ಮುಂದಿನ ದಿನ ಒಂದು ತೆರಿಗೆ ಕಟ್ಟಬೇಕು. 50 ರೂಪಾಯಿ ಹಣ ಸಂದಾಯ ಮಾಡಿದರೆ ಬಿ-ಖಾತೆ ಸಿಗಲಿದೆ ಎಂದು ತಿಳಿಸಿದರು. ಅಲ್ಲದೆ, ಹಳ್ಳಿ, ತಾಲೂಕು, ಪಟ್ಟಣದ ಜನ ಆಯಾಯ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯತ್, ಪುರಸಭೆ, ಗ್ರಾಮ ಪಂಚಾಯತಿಗಳಲ್ಲಿ ಖಾತಾ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications