ಕಂಟೈನ್ಮೆಂಟ್ ಝೋನ್ ಮಾಡಿಲ್ಲ ಎಂದು ದಾವಣಗೆರೆಯಲ್ಲಿ ಪಾಲಿಕೆ ಸದಸ್ಯನ ಮೇಲೆ ಹಲ್ಲೆ
ದಾವಣಗೆರೆ, ಜುಲೈ 22: ಕೊರೊನಾ ಸೋಂಕು ಹರಡುತ್ತಿದ್ದರೂ ಕಂಟೈನ್ ಮೆಂಟ್ ಝೋನ್ ಮಾಡಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪಾಲಿಕೆ ಸದಸ್ಯನ ಮೇಲೆ ಪಾಲಿಕೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಸೇರಿ ಐವರು ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿರುವ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Recommended Video
ಘಟನೆ ಹಿನ್ನಲೆ:
ದಾವಣಗೆರೆಯ ಕಾಯಿಪೇಟೆಯ 18ನೇ ವಾರ್ಡ್ ನ ಬಿಜೆಪಿ ಕಾರ್ಪೊರೇಟರ್ ಸೋಗಿ ಶಾಂತಕುಮಾರ ಹಲ್ಲೆಗೊಳಗಾದವರು. ಪಾಲಿಕೆ ಚುನಾವಣೆಯಲ್ಲಿ ಸೋಗಿ ಶಾಂತಕುಮಾರ ಎದುರಾಳಿಯಾಗಿ ನಿಂತು ಪರಾಜಿತವಾಗಿದ್ದ ಪಕ್ಷೇತರ ಅಭ್ಯರ್ಥಿ ಪಿ. ಮಂಜು ಎನ್ನುವವರಿಂದ ಹಲ್ಲೆ ನಡೆದಿದೆ.
ಕಾಯಿಪೇಟೆಯಲ್ಲಿ ಕೊರೊನಾ ಪಾಸಿಟಿವ್ ವರದಿಗಳು ದೃಢಪಟ್ಟಿದ್ದರಿಂದ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡುವ ವಿಚಾರವಾಗಿ ಸೋಗಿ ಶಾಂತಕುಮಾರ ಅವರ ಮನೆಗೆ ತೆರಳಿ ಚರ್ಚೆ ನಡೆಸುವಾಗ, ಶಾಂತಕುಮಾರ್ ಅವರು ಈ ಬಗ್ಗೆ ಡಿಸಿ ಆದೇಶ ಮಾಡಬೇಕು. ನಾವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆಗ ಮಂಜು ದುಂಡಾವರ್ತನೆ ತೋರಿದ್ದಾರೆ ಎನ್ನಲಾಗಿದೆ.

ಎದುರಾಳಿ ಅಭ್ಯರ್ಥಿಯಾಗಿದ್ದ ಮಂಜು ಸೋಮವಾರ ರಾತ್ರಿ ಫೋನ್ ಮಾಡಿ ತನ್ನ ಹಿಂಬಾಲಕರೊಂದಿಗೆ ಮನೆ ಬಳಿ ಬಂದಿದ್ದರು. ವಾರ್ಡ್ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬ್ಯಾರಿಕೇಡ್ ಕೂಡ ಹಾಕಲಾಗುವುದು ಎಂದು ತಿಳಿಸಿದರೂ ಚುನಾವಣೆಯಲ್ಲಿ ಅಪಜಯ ಹೊಂದಿರುವ ಹತಾಶೆಯಿಂದ ಮಂಜು ನನ್ನ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಸೋಗಿ ಶಾಂತ್ ಕುಮಾರ್ ದೂರು ನೀಡಿದ್ದಾರೆ.
ಈ ಸಂಬಂಧ ಸೋಗಿ ಶಾಂತ್ ಕುಮಾರ್ ಅವರ ದೂರಿನ್ವಯ ಐವರನ್ನು ಬಂಧಿಸಿ, ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬಸವನಗರ ಠಾಣೆ ಪಿಎಸ್ ಐ ನಾಗರಾಜ್ ತಿಳಿಸಿದ್ದಾರೆ.












Click it and Unblock the Notifications