Arecanut Price: ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ದರ ಏರಿಕೆ.!-ತಾಲೂಕುವಾರು ದರಗಳ ಅಂಕಿಅಂಶಗಳ ವಿವರ ತಿಳಿಯಿರಿ
Arecanut Price: ಜೂನ್ ಆರಂಭದಿಂದಲೂ ಅಡಿಕೆ ದರ ಏರಿಕೆಯಾಗುತ್ತಲಿದ್ದು, ನಿನ್ನೆಯಷ್ಟೇ ಇಳಿಕೆಯಾಗಿತ್ತು. ಆದರೆ ಮತ್ತೆ ಇದೀಗ ಏರಿಕೆಯಾಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಾಯವಾಗಿದ್ದ ನಗು ಮತ್ತೆ ಮೂಡಿದಂತಾಗಿದೆ. ಹಾಗಾದರೆ ಇದೀಗ ಪ್ರಸ್ತುತ ದಾವಣಗೆರೆ ಜಿಲ್ಲೆಯ ತಾಲೂಕುವಾರು ಕ್ವಿಂಟಾಲ್ ಅಡಿಕೆ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಇದೀಗ ತುಸು ಏರಿಕೆ ಆಗಿದೆ. ಜೂನ್ ಮೊದಲ ವಾರ 55,000 ರೂಪಾಯಿ ತಲುಪಿಸ್ದ ದರ, ಎರಡನೇ ವಾರ 54,000 ರೂಪಾಯಿ ಕೆಳಗೆ ಬಂದಿತ್ತು. ಇದೀಗ ಇಂದು (ಜೂನ್ 19) ಮತ್ತೆ ತುಸು ಏರಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗರಿಷ್ಠ ಬೆಲೆ ಕ್ವಿಂಟಲ್‌ಗೆ 53,890 ರೂಪಾಯಿ ಇದ್ದು, ಕನಿಷ್ಠ ದರ 43,000 ರೂಪಾಯಿ ಆಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 200 ರೂಪಾಯಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ತಲುಪಿತ್ತು. ಆದ್ದರಿಂದ ಇನ್ನೂ ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಒಳ್ಳೆಯ ದರ ಸಿಗುವ ಸಾಧ್ಯತೆಯಿದೆ. ಇದೀಗ ಜಿಲ್ಲೆಯಲ್ಲಿ ಮುಂಗಾರು ಚುರುಕು ಪಡೆದಿರುವುದರಿಂದ ಉತ್ತಮ ಫಸಲು ಬರಲಿದ್ದು, ದರ ಕೂಡ ಇನ್ನು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಕಳೆದ ವರ್ಷ ಮಳೆಯಿಲ್ಲದೆ ತೀವ್ರ ಬರದ ವಾತಾವರಣ ನಿರ್ಮಾಣವಾಗಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿತ್ತು. ಇದೀಗ ಸ್ವಲ್ಪ ಚೇತರಿಕೆ ಕಾಣುತ್ತಿವೆ. ಇನ್ನು ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದೆ ಅಂತಲೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮತ್ತಷ್ಟು ಮಂದಹಾಸ ಹೆಚ್ಚುವಂತೆ ಮಾಡಿದೆ.
2024ರ ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿಯಲ್ಲಿ ಏಕಾಏಕಿ 48,000 ರೂಪಾಯಿ ಇಳಿಕೆ ಆಗಿತ್ತು. ಮಾರ್ಚ್ ತಿಂಗಳಳಲ್ಲಿ ಏರಿಕೆಯಾಗಿದ್ದು, 50,000 ರೂಪಾಯಿ ತಲುಪಿತ್ತು. ಇನ್ನು ಏಪ್ರಿಲ್‌ನಲ್ಲಿ ಗರಿಷ್ಠ ದರ 54,000 ರೂಪಾಯಿ ಮುಟ್ಟಿತ್ತು. ಮೇ ತಿಂಗಳಲ್ಲಿ ಗರಿಷ್ಠ 55,000 ತಲುಪಿ ಮತ್ತೆ ಇಳಿಕೆ ಆಗಿತ್ತು. ಜೂನ್ ತಿಂಗಳ ಎರಡನೇ ವಾರ ಮತ್ತೆ ಕುಸಿತ ಕಂಡು ಏರಿಕೆಯಾಗಿ, ಮತ್ತೆ ಕುಸಿವಾಗಿ, ಮತ್ತೆ ಇದೀಗ ಏರಿಕೆಯಾಗಿದ್ದು, ಇದರಿಂದ ಬೆಳೆಗಾರರು ಸಂತಸಗೊಂಡಿದ್ದಾರೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜೂ.19ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 43,000 ರೂ., ಗರಿಷ್ಠ ಬೆಲೆ 53,890 ಹಾಗೂ ಸರಾಸರಿ ಬೆಲೆ 51,874ರೂ.ಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಗರಷ್ಠ ಬೆಲೆ 38,090 ರೂ. ಆಗಿದೆ.
ಒಟ್ಟಿನಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ದಿನಗಳಲ್ಲಿ ಭಾರೀ ಮಳೆಯಾದರೆ, ಅಡಿಕೆ ಫಸಲು ಮತ್ತಷ್ಟು ಚೆನ್ನಾಗಿ ಬರಲಿದೆ. ಈ ಮೂಲಕ ದರ ಮತ್ತೆ ಏರಿಕೆಯಾದರೆ ಬೆಳಗಾರರು ಮುಖದಲ್ಲಿ ಸಂತಸ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications