ದಾವಣಗೆರೆ: ₹50,000 ಗಡಿ ದಾಟಿದ ಕ್ವಿಂಟಾಲ್ ಅಡಿಕೆ ಧಾರಣೆ.!, ಮುಂದಿನ ವಾರ ₹60,000 ಮುಟ್ಟುತ್ತಾ?
Arecanut Price: ಅಡಿಕೆ ದರ ಬಂಗಾರ-ಬೆಳಿಯಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇದೀಗ ಅಡಿಕೆ ಧಾರಣೆಯು ಪ್ರತಿ ಕ್ವಿಂಟಾಲ್‌ಗೆ 50,000 ರೂಪಾಯಿ ಗಡಿ ದಾಟಿದ್ದು, ಇದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇದೀಗ ತಾಲೂಕುವಾರು ದರಗಳ ಅಂಕಿಅಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ಕಳೆದ ಎರಡು ತಿಂಗಳಿಂದ ಕುಂಠಿತಗೊಂಡಿದ್ದ ಅಡಿಕೆ ಧಾರಣೆ ಏರಿಕೆ ಹಾಗೂ ಇಳಿಕೆ ಕಾಣುತ್ತಲೇ ಇತ್ತು. ಇದು ರೈತರ ಆತಂಕಕ್ಕೆ ಕಾರಣವಾಗಿತ್ತು. ಇದೀಗ 50,000 ರೂಪಾಯಿ ದಾಟಿರುವುದು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ಒಂದೇ ದಿನ ಸುಮಾರು 600 ರೂಪಾಯಿ ಏರಿಕೆ ಕಂಡಿದ್ದು, 51,000 ರೂಪಾಯಿಯತ್ತ ದಾಪುಗಾಲಿಟ್ಟಿದೆ. ರಾಶಿ ಅಡಿಕೆ ಗರಿಷ್ಠ ಬೆಲೆಯು ಪ್ರತಿ ಕ್ವಿಂಟಲ್‌ಗೆ 50,539 ರೂಪಾಯಿ ಆಗಿದ್ದರೆ, ಕನಿಷ್ಠ ಬೆಲೆ 48,899 ರೂಪಾಯಿ ಆಗಿದೆ. ಹಿಂದಿನ ಮಾರುಕಟ್ಟೆಗೆ ಹೋಲಿಸಿದರೆ ಸುಮಾರು 600 ರೂಪಾಯಿಗೂ ಹೆಚ್ಚು ಹೆಚ್ಚಳವಾಗಿದೆ.

ಸುಡುತ್ತಿದೆ ಬಿಸಿಲು: ಇನ್ನು ಅಡಿಕೆ ಧಾರಣೆಯು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡರೂ, ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರಾ ನಾಲೆಯ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಸಿಗುತ್ತಿಲ್ಲ. ಚನ್ನಗಿರಿ ತಾಲೂಕಿನ ಕೆಲ ಭಾಗಗಳಿಗೆ ಮಾತ್ರ ನೀರು ಸಿಗುತ್ತಿದೆ. ಉಳಿದಂತೆ ಬೋರ್ ವೆಲ್ ನೀರನ್ನು ಅವಲಂಬಿಸಬೇಕಾಗಿದೆ. ಆದರೆ ಬೋರ್ ವೆಲ್‌ಗಳ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಆದ್ದರಿಂದ ತೋಟಗಳಿಗೆ ನೀರುಣಿಸುವುದು ಕಷ್ಟಕರವಾಗಿದೆ.
ಬಂದ ಹಣವೆಲ್ಲಾ ನೀರಿಗೆ: ಈ ವರ್ಷ ಅಡಿಕೆ ಮಾರಾಟ ಮಾಡಿ ಬಂದ ಹಣವೆಲ್ಲವೂ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಹೋಗುತ್ತಿದೆ. ಯಾಕೆಂದರೆ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಬೋರ್ ವೆಲ್‌ಗಳು ಕೈ ಕೊಡುತ್ತಿವೆ. ಜೊತೆಗೆ ಟ್ಯಾಂಕರ್‌ಗಳ ಮೂಲಕ ನೀರು ದುಬಾರಿಯಾಗಿದೆ. ಜಿಲ್ಲಾಡಳಿತವು ಪಂಪ್ ಸೆಟ್‌ಗಳ ತೆರವು ಕಾರ್ಯಾಚರಣೆ ಬಿಗಿ ಮಾಡಿರುವುದರಿಂದ ಅಕ್ರಮವಾಗಿ ನೀರು ಪಡೆಯಲು ಆಗುತ್ತಿಲ್ಲ. ಬೇರೆ ಕಡೆಗಳಿಂದ ನೀರು ತಂದು ಗಿಡಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚನ್ನಗಿರಿ ತಾಲೂಕಿನಲ್ಲಿ ಸೂಳೆಕೆರೆ ಇದ್ದು, ಇದು ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆಯಾಗಿದೆ ಆದರೆ, ಈ ನೀರು ನಮಗೆ ಸಿಗುತ್ತಿಲ್ಲ. ಭದ್ರಾ ಜಲಾಶಯದಿಂದ ಬರುವ ನೀರು ಸಹ ಸರಿಯಾಗಿ ನಮಗೆ ಸಿಗುತ್ತಿಲ್ಲ. ಕೆಲ ಪ್ರದೇಶಗಳಿಗೆ ಮಾತ್ರ ಸಿಗುತ್ತಿದೆ. ಇದರಿಂದಾಗಿ ನಾವೆಲ್ಲಾ ಬೋರ್ ವೆಲ್ ನೀರು ಮಾತ್ರ ಅವಲಂಬಿಸಿದ್ದೇವೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಈಗ ನೀರಿಲ್ಲ, ದುಡ್ಡು ಕೊಡ್ತೇವೆ ಎಂದರೂ ನೀರು ಸಿಗುತ್ತಿಲ್ಲ. ಹಾಗಾಗಿ, ಬಿಸಿಲಿನ ಧಗೆ ಹೆಚ್ಚಾದರೆ, ಮುಂಗಾರು ಮಳೆ ಸರಿಯಾಗಿ ಬಾರದಿದ್ದರೆ ಅಡಿಕೆ ಗಿಡಗಳು ಒಣಗಿ ಹೋಗಿ ತೋಟಗಳನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿ ಇದ್ದೇವೆ. ಸರ್ಕಾರ ನೀಡುವ ಪರಿಹಾರ ಹಣವೂ ಯಾವುದಕ್ಕೂ ಸಾಕಾಗುವುದಿಲ್ಲ. ಆದ್ದರಿಂದ ನೀರು ನೀಡುವ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ಚನ್ನಗಿರಿ ತಾಲೂಕಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಚನ್ನಗಿರಿ ವಹಿವಾಟಿನಲ್ಲಿ ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 48,400 ರೂಪಾಯಿಗಳಾಗಿದ್ದರೆ, ಗರಿಷ್ಠ ಬೆಲೆ 49,699 ರೂಪಾಯಿ ಆಗಿದೆ. ಬೆಟ್ಟೆ ಅಡಿಕೆ ಗರಿಷ್ಠ 36,036 ರೂಪಾಯಿಗೆ ವಹಿವಾಟು ಕೊನೆಗೊಳಿಸಿದೆ.
ಈ ವರ್ಷದ ಆರಂಭದಲ್ಲಿ ಅಡಿಕೆ ಧಾರಣೆಯು ಏರುಮುಖದಲ್ಲಿ ಸಾಗುತ್ತಿದ್ದ ಕಾರಣ ಅಡಿಕೆ ಧಾರಣೆಯು 60,000 ಗಡಿ ಮುಟ್ಟುತ್ತದೆ ಎಂಬ ನಿರೀಕ್ಷೆ ಇರಿಸಲಾಗಿತ್ತು, ಆದರೆ ಅದೆಲ್ಲಾ ಹುಸಿಯಾಗಿತ್ತು. ವರ್ಷದ ಕೊನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಅಡಿಕೆ ದರ ಜನವರಿ ತಿಂಗಳಿನಲ್ಲಿಯೂ ಏರುಮುಖದತ್ತವೇ ಸಾಗಿತ್ತು. ಆದರೆ ಕೊನೇ ವಾರದಲ್ಲಿ ಮತ್ತೆ ಕುಸಿಯಲಾರಂಭಿಸಿತು. ಆರಂಭದಲ್ಲಿ 500 ರೂಪಾಯಿ ಕುಸಿದರೆ, ಇದ್ದಕ್ಕಿದ್ದಂತೆ ಒಮ್ಮೆಲೆ 2,300 ರೂಪಾಯಿನಷ್ಟು ಕುಸಿತ ಕಂಡು ರೈತರ ಆತಂಕ ಹೆಚ್ಚಾಗುವಂತೆ ಮಾಡಿತ್ತು.
ಕಳೆದ 10 ದಿನಗಳ ಹಿಂದೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದ ಅಡಿಕೆ ಧಾರಣೆಯು ಬುಧವಾರ 500 ರೂಪಾಯಿಯಷ್ಟು ಏರಿಕೆ ಆಗಿದ್ದು, ಇದು ರೈತರಲ್ಲಿ ಸ್ವಲ್ಪ ಮಟ್ಟಿಗೆ ಖುಷಿ ತಂದಿದೆ. ಅಲ್ಲದೆ, ಕಳೆದ ಒಂದು ವಾರದಿಂದಲೂ ಏರುಮುಖದಲ್ಲಿಯೇ ಸಾಗಿದೆ. ಒಮ್ಮೆಯೂ ಕುಸಿತ ಕಂಡಿಲ್ಲ.
ಜಿಲ್ಲೆಯ ಪ್ರಮುಖ ಬೆಳೆ ಅಡಿಕೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆ ಕಂಡಿದ್ದು, 50,000 ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆ ಮಾರುಕಟ್ಟೆಯಲ್ಲಿ ವಹಿವಾಟು ನಡೆದಿದೆ.
ಕೇವಲ 50, 100, 200 ರೂಪಾಯಿ ಇಳಿಕೆ ಕಂಡು ಆಮೇಲೆ ಮತ್ತೆ ಏರಿಕೆ ಕಂಡಿದ್ದ ಅಡಿಕೆ ಧಾರಣೆಯು 50,000 ರೂಪಾಯಿ ಗಡಿ ದಾಟುವ ಸೂಚನೆ ಸಿಕ್ಕಿರುವುದು ಖುಷಿಗೆ ಕಾರಣವಾಗಿದೆ. ಮತ್ತೊಂದೆಡೆ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ರೈತರು ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ 47,000 ರೂಪಾಯಿ ಇದ್ದ ಪ್ರತಿ ಕ್ವಿಂಟಲ್ ಅಡಿಕೆ ಧಾರಣೆಯು ಮತ್ತೆ ಏರಿಕೆ ಮುಖದತ್ತ ಕಳೆದೊಂದು ವಾರದಿಂದ ಸಾಗಿತ್ತು. ಈಗ 50,000 ರೂಪಾಯಿ ಗಡಿಯತ್ತ ಮುಟ್ಟಿದೆ. ಮಾರುಕಟ್ಟೆಯಲ್ಲಿ 300 ರೂಪಾಯಿ ಹೆಚ್ಚಳವಾಗಿದ್ದು, ಕ್ವಿಂಟಲ್‌ಗೆ 49,699 ರೂಪಾಯಿ ರಾಶಿ ಅಡಿಕೆ ವಹಿವಾಟು ಮುಕ್ತಾಯಗೊಳಿಸಿದ್ದರೆ, ಕನಿಷ್ಠ ಬೆಲೆ 48,600 ರೂಪಾಯಿ ದಾಖಲಿಸಿದೆ. ಹಿಂದಿನ ಮಾರುಕಟ್ಟೆಯಲ್ಲಿ 49,339 ರೂಪಾಯಿ ಇದ್ದರೆ, ಕಳೆದ ಆರು ತಿಂಗಳಿನಿಂದಲೂ ಅಡಿಕೆ ಧಾರಣೆಯಲ್ಲಿ ಹಾವು, ಏಣಿ ಆಟ ಮುಂದುವರೆದಿತ್ತು.
ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 57,000 ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆಗೆ ಧಾರಣೆ ಸಿಕ್ಕಿತ್ತು. ಈ ವೇಳೆ ಕೆಲವರು ಮಾತ್ರ ಅಡಿಕೆ ಮಾರುಕಟ್ಟೆಗೆ ಬಿಟ್ಟಿದ್ದರು. ಆದರೆ ಬಹುತೇಕರು ಮತ್ತೆ ಅಡಿಕೆ ಧಾರಣೆ ಹೆಚ್ಚಾಗಬಹುದು ಎಂಬ ಆಸೆಯಿಂದ ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದರು. ಮತ್ತೆ ಇದ್ದಕ್ಕಿದ್ದಂತೆ 9,000 ರೂಪಾಯಿ ಕಡಿಮೆಯಾಗಿತ್ತು. ಆಗಲೂ ಅಡಿಕೆ ಬಿಟ್ಟಿರಲಿಲ್ಲ. ಈ ವರ್ಷದ ಆರಂಭದಲ್ಲಿ ಅಡಿಕೆ ಧಾರಣೆ ಏರಿಕೆ ಕಂಡಿದ್ದರಿಂದ 60,000 ರೂಪಾಯಿ ಗಡಿ ಮುಟ್ಟುತ್ತದೆ ಎಂಬ ನಿರೀಕ್ಷೆಯೂ ಈಗ ಇಲ್ಲ. ಯಾಕೆಂದರೆ ಅಡಿಕೆ ಧಾರಣೆಯು 50,000 ರೂಪಾಯಿಯ ಗಡಿಯನ್ನೇ ದಾಟುತ್ತಿಲ್ಲ.
ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಬೆಲೆ ಪ್ರತಿ ಕ್ವಿಂಟಲ್‌ಗೆ 50,088 ರೂಪಾಯಿ ಆಗಿದ್ದರೆ, ಕನಿಷ್ಠ ಬೆಲೆ 48,899 ರೂಪಾಯಿ ಆಗಿದೆ. ಬೆಟ್ಟೆ ಅಡಿಕೆ ಗರಿಷ್ಠ ಬೆಲೆ 35,236 ರೂಪಾಯಿ ಆಗಿದೆ. ಮುಂಬರುವ ದಿನಗಳಲ್ಲಿ ಅಡಿಕೆ ಧಾರಣೆಯು ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು.












Click it and Unblock the Notifications