ದಾವಣಗೆರೆಯಲ್ಲಿ ಎಂಟು ವರ್ಷದ ತನ್ಮಯಿ ಡೆಂಗ್ಯೂಗೆ ಬಲಿ

By: ಶ್ರೀಕಾಂತ್
Subscribe to Oneindia Kannada

ದಾವಣಗೆರೆ, ಸೆಪ್ಟೆಂಬರ್ 2: ಇಲ್ಲಿನ ಪಿಜೆ ಬಡಾವಣೆಯ ಪಿಸಾಳೆ ಕಾಂಪೌಂಡ್ ನ ಅನಿಲ್ ಹಾಗೂ ಆಶಾ ದಂಪತಿಯ ಪುತ್ರ, ಎಂಟು ವರ್ಷದ ಬಾಲಕ ತನ್ಮಯಿ ಶುಕ್ರವಾರ ಡೆಂಗ್ಯೂಗೆ ಬಲಿಯಾಗಿದ್ದಾನೆ. ಬಚಪನ್ ಶಾಲೆಯಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಆತನನ್ನು ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡೆಂಗ್ಯೂಗೆ ತುಮಕೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಲಿ

ನಾಲ್ಕು ದಿನಗಳಿಂದ ತನ್ಮಯಿಗೆ ಜ್ವರ ಇತ್ತು. ಆತನನ್ನು ಕುಟುಂಬ ವೈದ್ಯರ ಬಳಿ ತೋರಿಸಲಾಗಿತ್ತು. ಚಿಕಿತ್ಸೆ ಪಡೆದ ನಂತರ ಸ್ವಲ್ಪ ಸುಧಾರಿಸಿಕೊಂಡಿದ್ದ. ಆದರೆ ಮತ್ತೆ ಆತನಿಗೆ ಜ್ವರ ಕಾಣಿಸಿಕೊಂಡಿತ್ತು. ಶುಕ್ರವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಬಾಪೂಜಿ ಆಸ್ಪತ್ರೆಗೆ ಸೇರಿಸಲಾಗಿತ್ತು. ರಾತ್ರಿ ಹತ್ತು ಗಂಟೆವರೆಗೆ ಮಾತನಾಡಿಕೊಂಡಿದ್ದ ತನ್ಮಯಿ ರಕ್ತದೊತ್ತಡ ಕಡಿಮೆ ಆಗಿದೆ.

8 year Tanmayi died to dengue in Davanagere

ರಾತ್ರಿ 11.45ರ ಹೊತ್ತಿಗೆ ಆತ ತೀರಿಕೊಂಡಿದ್ದಾನೆ. ತನ್ಮಯಿ ಸಂಬಂಧಿಕರೊಬ್ಬರ ಈ ಬಗ್ಗೆ ಮಾತನಾಡಿದ್ದು, ಮದುವೆಯಾದ ಹನ್ನೆರಡು ವರ್ಷದ ನಂತರ ಹುಟ್ಟಿದ ಮಗು ಅದು. ಒಬ್ಬನೇ ಮಗ ಹೀಗೆ ತೀರಿಕೊಂಡಿದ್ದಾನೆ. ಆ ದಂಪತಿಯ ಸ್ಥಿತಿ ನೋಡಲಿಕ್ಕೆ ಆಗುತ್ತಿಲ್ಲ ಎಂದು ಗದ್ಗದಿತರಾದರು. ವೈಕುಂಠ ಟ್ರಸ್ಟ್ ನಲ್ಲಿ ತನ್ಮಯಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tanmayi- 8 year old boy from Davanagere died to dengue on Friday. Last rituals will be perform in Vaikunta trust on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ