ಹಾಲಿನ ಟ್ಯಾಂಕರ್ ಪಲ್ಟಿ, 8 ವಿದ್ಯಾರ್ಥಿನಿಯರಿಗೆ ತೀವ್ರ ಗಾಯ
ದಾವಣಗೆರೆ, ಫೆಬ್ರವರಿ 03: ಶಾಲೆಗೆ ತೆರಳಲು ಬಸ್ ಇಲ್ಲದೆ ಹಾಲಿನ ಟ್ಯಾಂಕರ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಶಾಲಾ ಬಾಲಕಿಯರು ಈಗ ಆಸ್ಪತ್ರೆ ಸೇರಿದ್ದಾರೆ. ಹಾಲಿನ ಟ್ಯಾಂಕರ್ ಮುಗುಚಿ ಬಿದ್ದ ಪರಿಣಾಮ ಟ್ಯಾಂಕರ್‌ನಲ್ಲಿದ್ದ ಎಂಟೂ ವಿದ್ಯಾರ್ಥಿನಿಯರು ಆಸ್ಪತ್ರೆ ಪಾಲಾಗಿದ್ದಾರೆ.
ಎಂಟು ಜನ ವಿದ್ಯಾರ್ಥಿನಿಯರು ಜಗಳೂರು ತಾಲ್ಲೂಕಿನ ಬಸಳಾಪುರದಿಂದ ಜಗಳೂರಿಗೆ ಶಾಲೆಗೆ ತೆರಳಲು ಹಾಲಿನ ಟ್ಯಾಂಕರ್ ಹತ್ತಿದ್ದಾರೆ ಆದರೆ ಟ್ಯಾಂಕರ್ ಮುಗುಚಿ ಬಿದ್ದ ಕಾರಣ ಮೂರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ ಅವರಲ್ಲಿ ಮೂರು ವಿದ್ಯಾರ್ಥಿನಿಯರ ಸ್ಥಿತಿ ಗಂಭಿರವಾಗಿದ್ದು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ.
ಇನ್ನುಳಿದ 5 ವಿದ್ಯಾರ್ಥಿಗಳನ್ನು ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಮಕ್ಕಳ ಪೋಷಕರು ಗಾಬರಿಗೊಳಗಾಗಿದ್ದಾರೆ.

ಗ್ರಾಮದಿಂದ ಜಗಳೂರಿಗೆ ಶಾಲೆ ಕಾಲೇಜಿಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದೇ ಇಂದಿನ ಈ ಘಟನೆಗೆ ಕಾರಣ ಎಂದು ಬಸಳಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಶಾಸಕರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹಿತ ಇಲ್ಲಿ ಸರ್ಕಾರಿ ಬಸ್ಸು ಹಾಕಲಾಗಿಲ್ಲ. ಖಾಸಗಿ ಬಸ್ಸುಗಳ ಲಾಭಿಗೆ ಮಣಿದು ಬೇಕೆಂದೇ ಸರ್ಕಾರಿ ಬಸ್ಸುಗಳನ್ನು ಈ ರೂಟ್‌ಗೆ ಹಾಕಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications