ಎರಡು ದಿನಗಳಲ್ಲಿ ಪರಿಹಾರ ಹಣ ಬಿಡುಗಡೆಗೆ ಸಿಎಂ ಭರವಸೆ
ಚಿತ್ರದುರ್ಗ, ಸೆಪ್ಟೆಂಬರ್ 24: "ಮುಖ್ಯಮಂತ್ರಿ ಆದಾಗಿನಿಂದಲೂ ನನಗೆ ಒಂದಿಲ್ಲೊಂದು ಅಗ್ನಿಪರೀಕ್ಷೆ ಎದುರಾಗುತ್ತಲೇ ಇದೆ. ಇದಕ್ಕೆ ಹೆದರದೇ ಎಲ್ಲ ಸಮಸ್ಯೆ ಎದುರಿಸುವ ಶಕ್ತಿಯನ್ನು ಗುರುಗಳು, ದೇವರು ನೀಡಿದ್ದಾರೆ" ಎಂದಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,"ಒಂದು ಕಡೆ ಬರ ಮತ್ತೊಂದು ಕಡೆ ನೆರೆಹಾವಳಿ, ಪ್ರವಾಹ. ಅತಿವೃಷ್ಟಿ, ಅನಾವೃಷ್ಟಿ ಎರಡೂ ಇದೆ. ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಿದ್ಧತೆ ನಡೆಸಲಾಗಿದೆ. ಕೆಲ ಉಪಯೋಗವಿಲ್ಲದ ಹಿಂದಿನ ಯೋಜನೆಗಳನ್ನು ರದ್ದುಗೊಳಿಸಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲಾಗುವುದು" ಎಂದು ಹೇಳಿದರು.

ಒಂದೆರಡು ದಿನದಲ್ಲಿ ಕೇಂದ್ರದಿಂದ ಪರಿಹಾರ ಹಣ ಬಿಡುಗಡೆ ಆಗಲಿರುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಬಸವರಾಜ್ ಬೊಮ್ಮಾಯಿ, ಸ್ಥಳೀಯ ಶಾಸಕರು ಸೇರಿದಂತೆ ಇತರರು ಯಡಿಯೂರಪ್ಪ ಜೊತೆಗೆ ಇದ್ದರು.












Click it and Unblock the Notifications