ಗೋವಿಂದ ಕಾರಜೋಳ, ಬಿ.ಎನ್.ಚಂದ್ರಪ್ಪ ಇಬ್ಬರಲ್ಲಿ ಯಾರು ದೆಲ್ಲಿಗೆ?, ಚುಣಾವಣೋತ್ತರ ಸಮೀಕ್ಷೆಗಳು ಹೇಳೋದೇನು?
ಚಿತ್ರದುರ್ಗ, ಜೂನ್, 02: ತೀವ್ರ ಕುತೂಹಲ ಮೂಡಿಸಿರುವ ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕ್ಷೇತ್ರಾದ್ಯಂತ ವಿವಿಧ ಪಕ್ಷಗಳ ಮುಖಂಡರು ಗೆಲುವು ನಮ್ಮದೇ ಎಂದು ಬೀಗುತ್ತಿದ್ದಾರೆ. ಮತ್ತೊಂದೆಡೆ ಕ್ಷೇತ್ರವಾರು ಮತಗಳಿಕೆ ಬಗ್ಗೆ ಚರ್ಚೆ ತುಂಬಾ ಜೋರಾಗಿ ಕೇಳಿಬರುತ್ತಿದೆ. ಅಲ್ಲದೆ, ಕೋಟೆಯಿಂದ ದಿಲ್ಲಿಗೆ ಯಾರು ಎಂಬುದು ಕುತೂಹಲಕಾರಿಯಾಗಿದೆ.
ಏಪ್ರಿಲ್ 26ರಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯ ಮತದಾನ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹಾಗೂ ಎನ್.ಡಿ ಎ. ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇನ್ನು ಮತದಾನ ನಡೆದು ಬರೋಬ್ಬರಿ 36 ದಿನಗಳು ಕಳೆದಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಫಲಿತಾಂಶ ಹೊರಬೀಳಲು ದಿನ ಹತ್ತಿರ ವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆ ಜೋರಾಗಿದೆ.

ಕೈ ಪಾಳಯದಲ್ಲಿ ಗೆಲುವಿನ ವಿಶ್ವಾಸ: ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಗೆಲುವು ನಮ್ಮದೇ ಎಂದು ಬೀಗುತ್ತಿದೆ. ಚಿತ್ರದುರ್ಗದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಗೆಲುವು ನಮ್ಮದೇ ಎಂದು ಕಾಂಗ್ರೆಸ್ ನಾಯಕರು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಅಲ್ಲದೆ, ಈಗಾಗಲೇ ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಮೂಲಕ ನುಡಿದಂತೆ ನಡೆದಿದ್ದಾರೆ. ಆದ್ದರಿಂದ ಮಹಿಳೆಯರು ಹೆಚ್ಚಿನದಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಲ್ಲಿ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದ ಬೆಲೆ ಏರಿಕೆ, ಸುಳ್ಳು ಆಶ್ವಾಸನೆಗಳು ನಮಗೆ ವರದಾನವಾಗಲಿದೆ ಎಂದು ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ಹಾಗೂ ಹೊಸದುರ್ಗ ಕ್ಷೇತ್ರದಲ್ಲಿ ಹೆಚ್ಚು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಲೀಡ್ ಕೊಡಲಿವೆ ಎಂದು ಕಾಂಗ್ರೆಸ್ ಮುಖಂಡರ ಅನಿಸಿಕೆಗಳಾಗಿವೆ. ಅದರಲ್ಲೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20 ರಿಂದ 30 ಸಾವಿರ ಮತಗಳು ಬರಲಿವೆ ಎಂಬುದು ಸ್ಥಳೀಯ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಎಕ್ಸಿಟ್ ಪೋಲ್‌ನಿಂದ ಮೈತ್ರಿ ಕೂಟಕ್ಕೆ ಗೆಲುವಿಗೆ ನಗೆ: ಈಗಾಗಲೇ ದೇಶದಿಂದ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮೂರನೇ ಬಾರಿಗೆ ಆಡಳಿತಕ್ಕೆ ಬರಲಿದೆ ಎಂಬ ಸಮೀಕ್ಷೆ ಬಹಿರಂಗವಾಗಿದೆ. ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಲ್ಪ ಚೇತರಿಸಿಕೊಂಡಿದೆ ಎಂಬುದು ಸಮೀಕ್ಷೆಗಳ ವರದಿಗಳು ಹೇಳುತ್ತುವೆ.
ಎಕ್ಸಿಟ್ ಪೋಲ್‌ನಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಮೈತ್ರಿ ಪಾಲಾಗಲಿದೆ ಎನ್ನುತ್ತಾರೆ ಮೈತ್ರಿ ಮುಖಂಡರು. ಮತ್ತೊಂದೆಡೆ ಎಕ್ಸಿಟ್ ಪೋಲ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ 5ರಿಂದ 8 ಸ್ಥಾನಗಳು ಬರಲಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಕ್ಷೇತ್ರದ ಮೈತ್ರಿ ಪಕ್ಷದ ನಾಯಕರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಬಹುದು.
ಕ್ಷೇತ್ರದಲ್ಲಿ 2ರಿಂದ 3 ಲಕ್ಷ ಜೆಡಿಎಸ್ ಮತಗಳಿದ್ದು, ಈ ಮತಗಳು ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಬಂದಿದ್ದರೆ, ಕೈ ಅಭ್ಯರ್ಥಿ ಗೆಲುವಿಗೆ ಹಿನ್ನಡೆಯಾಗಲಿದೆ. ಶಿರಾ, ಪಾವಗಡ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತದಾನವಾಗಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಕಾಡುಗೊಲ್ಲರು ಹಾಗೂ ಒಕ್ಕಲಿಗರು 60% ಬಿಜೆಪಿಗೆ ಮತ ನೀಡಿದ್ದರೆ, ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಬಹುತೇಕ ಗೆದ್ದಂತಾಗಿದೆ.
ಒಟ್ಟಾರೆಯಾಗಿ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಮಂಗಳವಾರ (ಜೂನ್ 04) ನಡೆಯಲಿರುವ ಫಲಿತಾಂಶದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಾಲಿನಲ್ಲಿ ಕೂರುತ್ತಾರೋ ಅಥವಾ ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ರಾಹುಲ್ ಗಾಂಧಿ ಅವರ ಹಿಂಬದಿಯ ಸಾಲಿನಲ್ಲಿ ಕುರುತ್ತಾರೋ ಎಂಬುದು ಮಂಗಳವಾರ ಮಧ್ಯಾನ 12 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.












Click it and Unblock the Notifications