ಹಿರಿಯೂರು: ಜಮೀನು ವಿಚಾರಕ್ಕೆ ವ್ಯಕ್ತಿಯೊಬ್ಬರ ಬಳಿ ಲಂಚ ಪಡೆದ ಕೆಆರ್ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಅಮಾನತು
ಚಿತ್ರದುರ್ಗ, ಅಕ್ಟೋಬರ್, 2: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಸೇಗೌಡ ಅವರನ್ನು ಸೋಮವಾರ (ಅಕ್ಟೋಬರ್ 1) ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಲಂಚ ತಗೊಂಡಿದ್ದಾರೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದ್ದು, ಈ ಹಿನ್ನೆಲೆ ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ ಅದೇಶ ಹೊರಡಿಸಿದದ್ದಾರೆ.

ಆದೇಶ ಕಾಪಿ: ಸೆಪ್ಟೆಂಬರ್ 30ರಂದು ತಮ್ಮ ಜಮೀನು ಕೆಲಸದ ವಿಚಾರವಾಗಿ ಹಿರಿಯೂರು ತಾಲ್ಲೂಕಿನ ವ್ಯಕ್ತಿಯೊಬ್ಬರು ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಜಿ.ಎಂ. ಬಳಿ ಹೋಗಿದ್ದು, ಈ ವೇಳೆ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಆ ವ್ಯಕ್ತಿ "ಹಣ ತಗೊಳಿ ಸಾರ್ ಎಂದು ಹೇಳಿದ್ದಾರೆ. ಅಧಿಕಾರಿ ನಾನು ಆರ್.ಐ.ಗೆ ಕೊಡಬೇಕು, ಅವರಿಗೆ, ಇವರಿಗೆ ಕೊಡಬೇಕು. ನನಗೆ ಉಳಿಯುವುದು 500 ರೂಪಾಯಿ ಅಷ್ಟೇ," ಎನ್ನುವ ಸಂಭಾಷಣೆ ವೈರಲ್ ಆಗಿದೆ.
ಲಂಚ ಪಡೆಯುತ್ತಿರುವ ಪಡೆಯುತ್ತಿರುವ ದೃಶ್ಯ ಸೆರೆಯಾಗಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೌಕರರಿಗೆ ಸದರಿ ವಿಷಯವಾಗಿ ಕಾರಣ ಕೇಳಿ ನೋಟೀಸ್ ನೀಡಲಾಗಿರುತ್ತದೆ ಎಂದು ಈ ಪ್ರಾಧಿಕಾರಕ್ಕೆ ವರದಿ ಮಾಡಿರುತ್ತಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಇನ್ನು ದಾಸೇಗೌಡ ಜಿ.ಎಂ. ಅವರು ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಸದರಿಯವರ ವರ್ತನೆಯು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 1966 ಹಾಗೂ ತಿದ್ದುಪಡಿ ನಿಯಮಗಳು 2021ರ ನಿಯಮ 3(i) (ii)(iii)ಕ್ಕೆ ವಿರುದ್ಧವಾಗಿರುವುದರಿಂದ ಈ ಕೆಳಕಂಡಂತೆ ಅದೇಶ ಹೊರಡಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 10(1)(ಡಿ)ರ ಅಡಿಯಲ್ಲಿ ಶಿಸ್ತಕ್ರಮ ತೆಗೆದುಕೊಳ್ಳಲಾಗಿದೆ. ಕೆಆರ್ ಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಜಿ.ಎಂ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ನಡೆಸಿ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿರುತ್ತೇನೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಹಾಗೂ ಕರ್ನಾಟಕ ಸಿವಿಲ್ ಸೇವಾ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶಿಸಿದೆ.
ಸೈಬರ್ ಕಳ್ಳರ ಬಂಧನ: ಸೈಬರ್ ವಂಚಕರು ಸಾಮಾನ್ಯ ಜನರಿಂದ ಹಣ ದೋಚುತ್ತಿರುವ ಘಟನೆಗಳು ಹೆಚ್ಚಾಗುತ್ತಲಿವೆ. ಅಲ್ಲದೆ, ಹಲವು ಸೈಬರ್ ಕಳ್ಳರನ್ನು ಪೊಲೀಸರು ಸದೇ ಬಡಿದ ಘಟನೆಗಳು ನಡೆದಿವೆ. ಇನ್ನು ಇದೀಗ ಸೈಬರ್ ವಂಚಕರಿಂದ 1 ಕೋಟಿ 27 ಲಕ್ಷ ರೂಪಾಯಿ ಹಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಚಿತ್ರದುರ್ಗ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವೈದ್ಯರಾದ ಶ್ರೀನಿವಾಸ್ ಶೆಟ್ಟಿಯವರಿಗೆ ಕಳೆದ ಆಗಸ್ಟ್ 25ರಂದು ಸೈಬರ್ ವಂಚಕರು ಕರೆ ಮಾಡಿ ನಾವೂ TRAI & ಮುಂಬೈ ಪೊಲೀಸರು ಎಂದು ಹೇಳಿ ಅವರ ಖಾತೆಯಿಂದ ಖಾತೆಗೆ 1 ಕೋಟಿ 27 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಈ ಕುರಿತು ನಗರದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಬಂಡಾರು ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಕುಮಾರಸ್ವಾಮಿ ಎಸ್.ಜೆ. ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಪೊಲೀಸ್ ಠಾಣೆರವರಾದ ಉಮೇಶ್ ಈಶ್ವರ್ ನಾಯ್ಕ್ ಅವರ ನಾಯಕತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್ ಎನ್., D.S.B ಬ್ರಾಂಚ್ ಪಿಎಸ್‌ಐ ಸತೀಶ್ ನಾಯ್ಕ್, ಸಿಬ್ಬಂದಿಗಳಾದ ಕೆಂಚಪ್ಪ, ಗಗನ್ ದೀಪ್ ಅವರೊಂದಿಗೆ ಪ್ರಕರಣವನ್ನು ಬೆನ್ನತ್ತಿದ್ದರು.












Click it and Unblock the Notifications