Get Updates
Get notified of breaking news, exclusive insights, and must-see stories!

Vedavathi River: ಕೃತ್ತಿಕಾ ಮಳೆ ಅಬ್ಬರಕ್ಕೆ ಮೈದುಂಬಿದ 'ವೇದಾವತಿ'; ವಾಣಿ ವಿಲಾಸ ಸಾಗರಕ್ಕೆ ಹೆಚ್ಚಾಗಲಿದೆ ಒಳಹರಿವು

ಚಿತ್ರದುರ್ಗ, ಮೇ, 19: ಕಳೆದ ಎರಡು ವಾರಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಬತ್ತಿಹೋಗಿದ್ದ ಜಲಮೂಗಳಿಗೆ ಜೀವಕಳೆ ಬಂದಂತಾಗಿದೆ. ಇದೀಗ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನಲ್ಲಿರುವ ವೇದಾವತಿ ನದಿ ಒಂದು ವರ್ಷದ ಬಳಿಕ ತುಂಬಿ ಹರಿಯುತ್ತಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ನಿನ್ನೆಯಿಂದ (ಮೇ 18) ಸುರಿಯುತ್ತಿರುವ ಮಳೆಯಿಂದ ವೇದಾವತಿ ನದಿಯ ಪಕ್ಕದಲ್ಲಿರುವ ಚೆಕ್‌ಡ್ಯಾಂ ತುಂಬಿ ಹರಿಯುತ್ತಿದ್ದು, ಇಷ್ಟು ದಿನ ಬಿಸಿಲಿನ ಬೇಗೆಗೆ ಬೇಸತ್ತಿದ್ದ ಈ ಭಾಗರದ ಜನರು, ರೈತರ ಮುಖದಲ್ಲಿ ಇದೀಗ ಮಂದಹಾಸ ಮೂಡಿದಂತಾಗಿದೆ.

Vedavati river filled due to heavy rain in just one day Vani Vilasa Sagara inflow increase

ಕಳೆದ ವರ್ಷ ಅಂದರೆ 2023ರಲ್ಲಿ ಮಳೆರಾಯ ಸಂಪೂರ್ಣವಾಗಿದ್ದ ಕೈಕೊಟ್ಟಿದ್ದು, ಜಲಮೂಲಗಳೆಲ್ಲ ಬತ್ತಿಹೋಗಿ ಭರದ ವಾತಾವರಣ ನಿರ್ಮಾಣವಾಗಿತ್ತು. ಆದರೆ 2024ರ ಮೇ ತಿಂಗಳ ಆರಂಭದಿಂದ ರಾಜ್ಯದಲ್ಲಿ ಮಳೆರಾಯ ತಂಪೆರೆಯುತ್ತಲೇ ಇದ್ದು, ಇದರಿಂದ ನದಿಗಳಿಗೆ ಜೀವಕಳೆ ಬಂದಂತಾಗಿದೆ. ಇನ್ನು ನಿನ್ನೆ ಒಂದೇ ದಿನ ಸುರಿದ ಅಬ್ಬರ ಮಳೆಯಿಂದ ಹಿರಿಯೂರು ತಾಲೂಕಿನ ವೇದಾವತಿ ನದಿಯ ಪಕ್ಕದಲ್ಲಿರುವ ಚೆಕ್‌ಡ್ಯಾಂ ಉಕ್ಕಿ ಹರಿಯುತ್ತಿದೆ. ಒಂದು ವರ್ಷದ ಬಳಿಕ ಈ ನದಿಗೆ ಜೀವಕಳೆ ಬಂದಂತಾಗಿದೆ.

ಜಿಲ್ಲೆಯ ಹಲವೆಡೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ವರುಣನ ಆರ್ಭಟಿಸುತ್ತಲೇ ಇದ್ದಾನೆ. ಇನ್ನು ವೇದಾವತಿ ನದಿಯ ಪಕ್ಕದಲ್ಲಿರುವ ಚೆಕ್‌ ಡ್ಯಾಂ ಮೈದುಂಬಿ ಹರಿಯುತ್ತಿರುವುದರಿಂದ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಒಳಹರಿವು ಬರುತ್ತಲೇ ಇದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಬಿರುಗಾಳಿ ಮಳೆಗೆ ಹಾರಿಹೋದ ಶೆಡ್‌ಗಳು: ಜಿಎಂಐಟಿ ಕಾಲೇಜ್ ಹಿಂಭಾಗದಲ್ಲಿ ದೊಡ್ಡಬಾತಿ ಸರ್ವೆ ನಂಬರ್ 53/1ಬಿ /1ಸಿ 11 ಹೆಕ್ಟೇರ್‌ 33 ಗುಂಟೆ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಜನರ ಸ್ಥಳಾಂತರ ಮಾಡಿದ್ದು, ಅವರ ಬದುಕು ಈಗ ಬೀದಿಗೆ ಬಿದ್ದಿದೆ. ಯಾಕೆ ಅಂತೀರಾ ಇಲ್ಲದೆ ನೋಡಿ ಮಾಹಿತಿ.

ಭಾರೀ ಗಾಳಿ, ಮಳೆಯಿಂದಾಗಿ ಶೆಡ್‌ಗಳು ಹಾರಿ ಹೋಗಿವೆ. ಕೆಲ ಶೆಡ್‌ಗಳಂತೂ ವಿದ್ಯುತ್ ಕಂಬಗಳ ಮೇಲೆ ಹಾರಿ ಹೋಗಿವೆ. ಇದರಿಂದಾಗಿ ಜನರು ಮತ್ತೆ ಭಯದಲ್ಲಿಯೇ ಬದುಕುವ ದುಃಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಬಾಷಾ ನಗರ ಬಳಿ ರಿಂಗ್ ರಸ್ತೆ ಬಳಿ ಕಳೆದ 15 ವರ್ಷಗಳಿಂದ ವಾಸವಾಗಿದ್ದ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಜಿಲ್ಲಾಡಳಿತ ಮತ್ತು
ಮಹಾನಗರ ಪಾಲಿಕೆಯು ಅವರಿಗೆ ಮನವೊಲಿಸಿ ಸ್ಥಳಾಂತರಿಸಲಾಗಿತ್ತು.

ನಿವೇಶನ ನೀಡಿ ಸ್ಥಳಾಂತರ ಮಾಡಿದ್ದರೂ, ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಗಾಳಿ, ಮಳೆಯಿಂದಾಗಿ ಜನರ ಬದುಕು ಮತ್ತೆ ಬೀದಿಗೆ ಬರುವಂತಾಗಿದೆ. ಅಧಿಕಾರಿಗಳು ಕೇವಲ ಭರವಸೆ ಮಾತ್ರ ಕೊಡುತ್ತಿದ್ದಾರೆಯೇ ವಿನಃ, ಸಮಸ್ಯೆ ಪರಿಹರಿಸುವ ಕೆಲಸ ಮಾಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರದಿಂದಲೇ ಆಶ್ರಯ ಮನೆ ಕಟ್ಟಿ ಕೊಡುವುದಾಗಿ ಭರವಸೆ ನೀಡಿದ್ದರೂ, ಪ್ರಯೋಜನ ಮಾತ್ರ ಶೂನ್ಯ. ಬಸ್ ಸೌಲಭ್ಯ, ಕುಡಿಯುವ ನೀರಿನ ಪೂರೈಕೆ ಇಲ್ಲ. ಶಾಲೆಗಳಿಲ್ಲಿ, ರಸ್ತೆಗಳಿಲ್ಲ ಎಂಬುದೂ ಸೇರಿದಂತೆ
ಹಲವು ಸಮಸ್ಯೆಗಳ ಕುರಿತಂತೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿರಲಿಲ್ಲ.

ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಾಮೇಗೌಡ ಅವರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಸೂಕ್ತ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದರು. ಈ ವೇಳೆ ಮನೆಯನ್ನ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ಒಂದು ಮಳೆಗೆ ಸಂಪೂರ್ಣ ಅಲ್ಲಿರುವ ತಾತ್ಕಾಲಿಕ ಶೆಡ್‌ಗಳು ಬಿದ್ದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+