ಇತಿಹಾಸ ಪ್ರಸಿದ್ಧ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿ: ಬೆಂಗಳೂರಿಗರಿಗೆ ವಾರಂತ್ಯ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ?
Vani Vilasa Sagara Dam: ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಸಾಗರ ಡ್ಯಾಂ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬೀಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಹಾಗಾದ್ರೆ ಇಂದು (ನವೆಂಬರ್ 14) ನೀರಿನ ಮಟ್ಟ ಎಷ್ಟಿದೆ ಹಾಗೂ ಬೆಂಗಳೂರಿನಿಂದ ಇಲ್ಲಿಗೆ ತಲುಪುವುದೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಿರಿಯೂರು ತಲ್ಲೂಕಿನಲ್ಲಿರುವ ಇತಿಸಹಾಸ ಪ್ರಸಿದ್ಧ ವಾಣಿ ವಿಲಾಸ (ಮಾರಿಕಣಿವೆ) ಜಲಾಶಯ ಕೋಡಿ ಬಿದ್ದಿದ್ದು, ಈ ದೃಶ್ಯ ಸವಿಯಲು ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಲಿದ್ದಾರೆ. ಅದರಲ್ಲೂ ಇದು ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಬರಲಿದ್ದು, ಬೆಂಗಳೂರಿನಿಂದ ವಾರಾಂತ್ಯದಲ್ಲಿ ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ತಾಣವಾಗಿದೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಜಲಾಶಯ ಈಗಾಗಲೇ 2025ರ ಜನವರಿಯಲ್ಲಿ ಮೊದಲ ಬಾರಿಗೆ ಭರ್ತಿ ಆಗಿತ್ತು. ಮತ್ತೆ ಕೋಡಿ ಬಿದ್ದಿದ್ದು, ಈ ಮೂಲಕ ಇದೇ ವರ್ಷದಲ್ಲಿ ಎರಡನೇ ಬಾರಿ ತುಂಬಿದೆ. ಮತ್ತೊಂದೆಡೆ ಇದುವರೆಗೆ ನಾಲ್ಕನೇ ಬಾರಿಗೆ ಕೋಡಿ ಬಿದ್ದ ಹೆಗ್ಗಳಿಕೆಗೆ ಗಿಟ್ಟಿಸಿಕೊಂಡಿದೆ.
ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ವಾಣಿ ವಿಲಾಸ ಸಾಗರ ಜಲಾಶಯವನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಇನ್ನು ಇದು 2025ರಲ್ಲಿ ಆರಂಭದಲ್ಲಿ ಎರಡು ಬಾರಿ ಕೋಡಿ ಬಿದ್ದಿದೆ. ಜನವರಿಯಲ್ಲಿ ಭದ್ರ ಡ್ಯಾಂನಿಂದ ಬಿಟ್ಟ ನೀರಿನಿಂದ ಕೋಡಿಬಿದ್ದರೆ, ಅಕ್ಟೋಬರ್‌ನಲ್ಲಿ ಮಳೆ ನೀರಿನಿಂದ ಕೋಡಿ ಬಿದ್ದು ಇತಿಹಾಸ ನಿರ್ಮಿಸಿದೆ. ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 131.65 ಅಡಿ ಇದೆ.
ಯಾವ್ಯಾವಾಗ ಡ್ಯಾಂ ಭರ್ತಿ?: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2022ರಲ್ಲಿ 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಇದೇ ವರ್ಷದ ಅಕ್ಟೋಬರ್‌ನಲ್ಲಿ ಭರ್ತಿಯಾಗಿದೆ. ಈ ಮೂಲಕ ಇದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಹೆಗ್ಗಳಿಗೆ ಪಡೆದುಕೊಂಡಿದೆ.
ಯಾವ ವರ್ಷ ನೀರಿನ ಮಟ್ಟ ಎಷ್ಟು?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123.22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ, 2025ರ ಅಕ್ಟೋಬರ್‌ನಲ್ಲಿ 130 ಅಡಿ ನೀರು ಸಂಗ್ರ ಆಗಿದೆ.
ಪ್ರಸ್ತುತ ನೀರಿನ ಮಟ್ಟ
* ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ: 30.422 ಟಿಎಂಸಿ
* ಪ್ರಸ್ತುತ ನೀರಿನ ಮಟ್ಟ: 131.65 ಅಡಿ
* ಒಳಹರಿವು: 0 ಕ್ಯೂಸೆಕ್
* ಹೊರಹರಿವು: 1967 ಕ್ಯೂಸೆಕ್
1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜೀವನಾಡಿ ಆಗಿದೆ. ಈ ಡ್ಯಾಂ ವಿನ್ಯಾಸ ಇಂಡಿಯಾ ಬೂಪಟದಂತೆ ಇದ್ದು, ಇದೇ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
ಇದೀಗ ಇದು ಇದೇ ವರ್ಷದಲ್ಲಿ ಎರಡನೇ ಬಾರಿ ಕೋಡಿ ಬಿದ್ದಿದ್ದು, ಈ ದೃಶ್ಯ ಸವಿಯಲು ದೂರದ ಊರುಗಳಿಂದ ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿಗರಿಗಂತೂ ವಾರಾಂತ್ಯಕ್ಕೆ ಭೇಟಿ ನೀಡಲು ಹೇಳಿ ಮಾಡಿಸಿದ ತಾಣವಾಗಿದೆ. ಬೆಂಗಳೂರಿನಿಂದ ಇದು 192 ಕಿಲೋ ಮೀಟರ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ತಲುಪಬಹುದು. ಬೆಂಗಳೂರಿನಿಂದ ಬರುವವರು ಹಿರಿಯೂರಿನ ಬಳಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕಾಗುತ್ತದೆ. ಡ್ಯಾಂ ನೋಡಿಕೊಂಡು ಬಳಿಕ ಹಾಗೆ ಮುಂದೆ ಸಾಗಿದರೆ ಸ್ವಲ್ಪ ದೂರದಲ್ಲಿ ಚಿತ್ರದುರ್ಗ ಕಲ್ಲಿನ ಕೋಟೆಯನ್ನು ತಲುಪಬಹುದು. ಒಂದು ದಿನದಲ್ಲಿ ಹೋಗಿ ಅಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ ಸವಿದು ಹಿಂದಿರುಗಬಹುದು.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications