ಉತ್ಥಾನ ಪತ್ರಿಕೆ: ಅಂಬೇಡ್ಕರ್ 125’ ವಿಶೇಷ ಸಂಚಿಕೆ ಕೊಳ್ಳಿರಿ
ಚಿತ್ರದುರ್ಗ, ಏಪ್ರಿಲ್ 13: ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಇತ್ತೀಚೆಗೆ
ಉತ್ಥಾನ ಮಾಸಪತ್ರಿಕೆ ಹೊರತಂದಿರುವ 'ಡಾ|| ಬಾಬಾಸಾಹೇಬ ಅಂಬೇಡ್ಕರ್ 125' ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿಯವರು ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಉತ್ಥಾನ ಮಾಸಪತ್ರಿಕೆ ಹೊರತಂದಿರುವ 'ಡಾ|| ಬಾಬಾಸಾಹೇಬ ಅಂಬೇಡ್ಕರ್ 125' ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕ ವಾದಿರಾಜ್ ಹಾಗೂ ಉತ್ಥಾನ ಮಾಸಪತ್ರಿಕೆಯ ವ್ಯವಸ್ಥಾಪಕ-ಸಂಪಾದಕ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಡಾ|| ಅಂಬೇಡ್ಕರ್ ಅವರ ಬದುಕು-ಬರಹ-ಚಿಂತನೆ ಹಾಗೂ ಅವರ ಪ್ರೇರಣೆಯಿಂದ ನಡೆದ ವಿವಿಧ ಮುಖಗಳ ಚಟುವಟಿಕೆಗಳು, ವಿವಿಧ 'ವಾದ'ಗಳೊಂದಿಗೆ ಅಂಬೇಡ್ಕರ್ ಚಿಂತನೆಯ ಮುಖಾಮುಖಿ, ದಲಿತ ಸಮಾಜದ ನೋವು-ವಾಸ್ತವ ಹಾಗೂ ಮೀಸಲಾತಿಯ ಕುರಿತು ಉತ್ಥಾನ ಮಾಸಪತ್ರಿಕೆ ನಡೆಸಿರುವ ಸಮೀಕ್ಷೆ ಸೇರಿದಂತೆ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತ ಜೀವನದೃಷ್ಟಿಯ ವಿವಿಧ ಮುಖಗಳನ್ನು ಪರಿಚಯಿಸುವ ಸಮಗ್ರ ಬರಹಗಳನ್ನು ಈ ವಿಶೇಷ ಸಂಚಿಕೆಯಲ್ಲಿದೆ.
ವಿಶೇಷ ಸಂಚಿಕೆಯ ಬೆಲೆ: ರೂ. 50.00
ಪ್ರತಿಗಳಿಗಾಗಿ ಸಂಪರ್ಕಿಸಿ:
'ಉತ್ಥಾನ' ಮಾಸಪತ್ರಿಕೆ, ಕೆಂಪೇಗೌಡ ನಗರ, ಬೆಂಗಳೂರು - 560 019,
ದೂರವಾಣಿ: 98865 15648.
ಈ ಬಾರಿ ಏಪ್ರಿಲ್ 14ರಂದು ವಿಶ್ವದೆಲ್ಲೆಡೆ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. (ಮಾಹಿತಿ ಕೃಪೆ: ಸಂವಾದ.ಆರ್ಗ್)












Click it and Unblock the Notifications