ಚಿತ್ರದುರ್ಗದಲ್ಲಿ ಕುರಿ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಅಜ್ಜ ಮೊಮ್ಮಗ ಸಾವು
ಚಿತ್ರದುರ್ಗ, ಮೇ 31: ಕೆರೆಯಲ್ಲಿ ಕುರಿಗಳ ಮೈ ತೊಳೆಯಲು ಹೋಗಿ ಅಜ್ಜ ಮೊಮ್ಮಗ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೇಟೆಮರದಹಟ್ಟಿ ಗ್ರಾಮದಲ್ಲಿ ನಡೆದಿದೆ.
ಸೀಗಣ್ಣ (65), ಪ್ರತಾಪ್ (24) ಎಂಬುವರೇ ಮೃತಪಟ್ಟವರು. ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಉಳುವಿನಹಾಳು ಕೆರೆಯಲ್ಲಿ ಕುರಿ ತೊಳೆಯಲು ಹೋದಾಗ ಈ ದುರ್ಘಟನೆ ನಡೆದಿದೆ. ಮೊದಲು ಪ್ರತಾಪ್ ಎನ್ನುವ ಯುವಕ ಕೆರೆಗೆ ಇಳಿದಾಗ, ಆತನ ಕಾಲು ನೀರಿನಲ್ಲಿ ಸಿಲುಕಿಕೊಂಡು ಮುಳುಗಿದ್ದಾನೆ. ಎಷ್ಟು ಹೊತ್ತಾದರೂ ಮೇಲೆ ಬಾರದ ಕಾರಣ ಅನುಮಾನಗೊಂಡ ಸೀಗಣ್ಣ ಎಂಬುವರು ಕೂಡ ನೀರಿಗೆ ಇಳಿದಿದ್ದಾರೆ. ಅವರೂ ನೀರಿನೊಳಗೆ ಸಿಲುಕಿಕೊಂಡು ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ. ಇಬ್ಬರ ಮೃತದೇಹವನ್ನೂ ನೀರಿನಿಂದ ಮೇಲೆತ್ತಲಾಗಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications