ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಳ್ಳಕೆರೆಯ ಅಪ್ಪ-ಮಗಳಿಗೆ ಕೊರೊನಾ; ಎರಡು ಗ್ರಾಮಗಳು ಸೀಲ್ ಡೌನ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 15: ಗ್ರೀನ್ ಝೋನ್ ಪಟ್ಟಿಯಲ್ಲಿದ್ದ ಕೋಟೆನಾಡು ಚಿತ್ರದುರ್ಗಕ್ಕೆ ಕೊರೊನಾ ವೈರಸ್ ಕಾಲಿಟ್ಟಿದ್ದು, ಇಂದು ಮತ್ತೆ ಎರಡು ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಚಿತ್ರದುರ್ಗದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9ಕ್ಕೆ ಏರಿದೆ.

ಈ ಒಂಬತ್ತರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಅಹಮದಾಬಾದ್ ನಿಂದ ಬಂದಿದ್ದ 15 ಜನ ತಬ್ಲಿಘಿಗಳಲ್ಲಿ 6 ಜನರಿಗೆ ಸೋಂಕು ಪತ್ತೆಯಾಗಿತ್ತು. ಇದೀಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದ ಮೂರು ವರ್ಷದ ಮಗು ಸೇರಿದಂತೆ ತಂದೆಗೆ ಕೊರೊನಾ ಸೋಂಕು ಆವರಿಸಿಕೊಂಡಿದೆ.

BREAKING: ರಾಜ್ಯದಲ್ಲಿ ಕೊರೊನಾ ಸೋಂಕಿಗೆ 35 ಬಲಿ, ಸೋಂಕಿತರ ಸಂಖ್ಯೆ 981!BREAKING: ರಾಜ್ಯದಲ್ಲಿ ಕೊರೊನಾ ಸೋಂಕಿಗೆ 35 ಬಲಿ, ಸೋಂಕಿತರ ಸಂಖ್ಯೆ 981!

Two In Challakere Reported Corona Positive

ಪಿ-993 ಬಾಲಕಿ (3 ವರ್ಷ) ಹಾಗೂ ಪಿ-994 ಪುರುಷ (39 ವರ್ಷ), ತಂದೆ -ಮಗಳಲ್ಲಿ ಸೋಂಕು ಕಂಡುಬಂದಿದೆ. ತಮಿಳುನಾಡಿನ ಚೆನ್ನೈ ನಿಂದ ಮೇ. 05 ರಂದು ಖಾಸಗಿ ವಾಹನದಲ್ಲಿ ಇವರು ಗ್ರಾಮಕ್ಕೆ ಆಗಮಿಸಿದ್ದು, ಇವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ‍ನಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ನಾಲ್ವರು ಸದಸ್ಯರ ಈ ಕುಟುಂಬ ಚೆನ್ನೈನಿಂದ ಬೆಂಗಳೂರು ಮೂಲದ ಖಾಸಗಿ ವಾಹನದ ಮೂಲಕ ತಮ್ಮ ಸ್ವಗ್ರಾಮ ಕೋಡಿಹಳ್ಳಿ ಗ್ರಾಮಕ್ಕೆ ಮೇ. 5ರಂದು ಆಗಮಿಸಿತ್ತು. ಇಲ್ಲಿನ ರಾಪಿಡ್ ರೆಸ್ಪಾನ್ಸ್ ತಂಡವು, ಚೆನ್ನೈನಿಂದ ಬಂದ ಕುಟುಂಬದ ಬಗ್ಗೆ ಮಾಹಿತಿ ಪಡೆದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಮೇ. 11 ರಂದು ಕುಟುಂಬ ಸದಸ್ಯರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಚಿತ್ರದುರ್ಗಕ್ಕೆ ಕಂಟಕ, ಆರಕ್ಕೇರಿದ ಸೋಂಕಿತರ ಸಂಖ್ಯೆಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಚಿತ್ರದುರ್ಗಕ್ಕೆ ಕಂಟಕ, ಆರಕ್ಕೇರಿದ ಸೋಂಕಿತರ ಸಂಖ್ಯೆ

ಇಂದು ಈ ಕುಟುಂಬ ಸದಸ್ಯರ ಪೈಕಿ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಪತ್ನಿಯ ವರದಿ ನೆಗೆಟಿವ್ ಬಂದಿದ್ದು, ಇವರ 20 ದಿನದ ಮಗುವಿನ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಈ ನಡುವೆ ಸೋಂಕಿತ ವ್ಯಕ್ತಿ ಕೋಡಿಹಳ್ಳಿ ಸಮೀಪ ಮೂರು ಕಿ.ಮೀ. ದೂರದ ಚಿಕ್ಕೆಹಳ್ಳಿ ಗ್ರಾಮದ ಬಂಧುಗಳ ಮನೆಗೆ ಹೋಗಿ ಬಂದಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಕೋಡಿಹಳ್ಳಿ, ಚಿಕ್ಕೇಹಳ್ಳಿ ಸೇರಿದಂತೆ 5 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್ ಮೆಂಟ್ ಝೋನ್ ಆಗಿ ಗುರುತಿಸಿ, ಸಂಪೂರ್ಣವಾಗಿ ಸೀಲ್ ‍ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.

English summary
Baby and father in challakere, who went to see their relation in tamilnadu reported corona positive today. Total 9 cases reported in chitradurga district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X