ಉದ್ಘಾಟನೆಗೊಂಡು 3 ವರ್ಷ ಕಳೆದರೂ ಬಾಗಿಲು ತೆರೆಯದ ಪ್ರವಾಸಿ ವಸತಿ ಗೃಹಗಳು
ಚಿತ್ರದುರ್ಗ, ಡಿಸೆಂಬರ್ 29: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯವಾಗಿರುವ ವಾಣಿ ವಿಲಾಸ ಸಾಗರವೂ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಅಧೋಗತಿಯಾಗಿದೆ. ಅಂದಹಾಗೆ ಜಲಾಶಯ ಮುಂಭಾಗದಲ್ಲಿ ಪ್ರವಾಸಿಗರು ಬಂದು ತಂಗಲು ನಿರ್ಮಿಸಿರುವ ಪ್ರವಾಸಿ ವಸತಿ ಗೃಹಗಳು ಉದ್ಘಾಟನೆಗೊಂಡು 3 ವರ್ಷ ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸ್ಥಳೀಯ ನಿವಾಸಿ ಎ.ಉಮೇಶ್ ಆರೋಪಿಸಿದ್ದಾರೆ.

2014 ರಲ್ಲಿ ಕೇಂದ್ರ ಸರ್ಕಾರ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿಗರ ಯಾತ್ರಿ ನಿವಾಸ, ಉದ್ಯಾನವನ, ಶೌಚಾಲಯ ನಿರ್ಮಿಸಿದ್ದು, ಇವು ಕಾರ್ಯರೂಪಕ್ಕೆ ಬರದೆ ಹಾಗೆ ಉಳಿದಿವೆ. ಸದ್ಯ ಯಾತ್ರಿ ನಿವಾಸ ಕುಡುಕರ ತಾಣವಾಗಿದೆ.

ನಿವಾಸದ ಮುಂಭಾಗದಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಶೌಚಾಲಯ ಬಳಕೆ ಇಲ್ಲ, ಉದ್ಯಾನವನದಲ್ಲಿ ಕೂಡ ಪ್ರವಾಸಿಗರಿಗೆ ನಿರ್ಮಿಸಿರುವ ಶೌಚಾಲಯ ಬಳಕೆ ಆಗುತ್ತಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎ.ಉಮೇಶ್ ಆರೋಪಿಸಿದ್ದಾರೆ.












Click it and Unblock the Notifications