ಶ್ರೀರಾಮುಲು ಪರ ಪ್ರಚಾರ ಮಾಡದೇ ವಾಪಾಸ್ಸಾದ ಸುದೀಪ್!
ಚಿತ್ರದುರ್ಗ, ಮೇ 07: ಸುದೀಪ್ ಅವರು ಸಿದ್ದರಾಮಯ್ಯ ಪರ ಮತ ಯಾಚಿಸುತ್ತಾರಾ ಇಲ್ಲ ಶ್ರೀರಾಮುಲು ಪರ ಮತ ಯಾಚಿಸುತ್ತಾರಾ ಎಂದು ಸುದೀಪ್ ಅಭಿಮಾನಿಗಳು ಸೇರಿದಂತೆ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು.
ಆದರೆ ಎಲ್ಲಾ ಚರ್ಚೆಗೆ ತೆರೆ ಎಳೆದು ಸುದೀಪ್ ಅವರು ಇಂದು ಚುನಾವಣಾ ಪ್ರಚಾರ ಕನಕ್ಕೆ ಇಳಿದು ಬೆಳ್ಳಿಗ್ಗೆ ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಮತ್ತು ಸಣ್ಣ ಪಕೀರಪ್ಪ ಅವರ ಪರ ಪ್ರಚಾರ ಮಾಡಿದರು. ಇವರಿಬ್ಬರೂ ಬಿಜೆಪಿ ಅಭ್ಯರ್ಥಿ.
ಬಳ್ಳಾರಿಯಲ್ಲಿ ಪ್ರಚಾರ ಮುಗಿಸಿದ ಸುದೀಪ್ ಅವರು ಗೆಳೆಯ ಶ್ರೀರಾಮುಲು ಅವರ ಕ್ಷೇತ್ರ ಮೊಳಕಾಲ್ಮೂರಿಗೆ ಪ್ರಚಾರಕ್ಕಾಗಿ ಆಗಮಿಸಿದರು ಆದರೆ ಸಮಯ ಮೀರಿದ್ದರಿಂದ ಪ್ರಚಾರ ಮಾಡಲಾಗದೇ ಹಾಗೆಯೇ ವಾಪಾಸ್ ತೆರಳಿದರು.

ಸುದೀಪ್ ಅವರು ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿಗೆ ಬರುವಷ್ಟರಲ್ಲಿ ಗಂಟೆ 1 ಆಗಿತ್ತು. ಆದರೆ ಬಿಜೆಪಿಯು ರೋಡ್‌ಶೋಗೆ ಪಡೆದಿದ್ದ ಅನುಮತಿ 9-12 ಹಾಗಾಗಿ ಚುನಾವಣಾ ಅಧಿಕಾರಿ ನೀಡಿದ್ದ ಸಮಯ ಮುಗಿದ ಕಾರಣ ಸುದೀಪ್ ಅವರು ಶ್ರೀರಾಮುಲು ಪರ ಪ್ರಚಾರ ಮಾಡಲಾಗದೆ ವಾಪಾಸ್ ತೆರಳಿದರು.
ಆದರೆ ವಾಪಾಸ್ ತೆರಳುವ ಮುನ್ನಾ ಸುದೀಪ್ ಅವರು ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ಮತ್ತು ಹೊರಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಇಂದು ಸಮಯದ ಮಿತಿ ಮೀರಿದ ಕಾರಣ ನಾಳೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುದೀಪ್ ಪ್ರಚಾರ ಮಾಡಬಹುದು ಎನ್ನಲಾಗಿದೆ.
ಬಳ್ಳಾರಿಯಲ್ಲಿ ಇಂದು ಬೆಳ್ಳಿಗ್ಗೆ ಪ್ರಚಾರ ಮಾಡುವ ವೇಳೆ 'ನಾನು ಯಾವುದೇ ಪಕ್ಷಕ್ಕೆ ಸೀಮಿತನಲ್ಲ ಆದರೆ ಶ್ರೀರಾಮುಲು ನನ್ನ ಆತ್ಮೀಯ ಗೆಳೆಯ ಹಾಗಾಗಿ ಅವರ ಪರ ಪ್ರಚಾರ ಮಾಡುತ್ತೇನೆ' ಎಂದಿದ್ದರು.












Click it and Unblock the Notifications