• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ.23ರಿಂದ ಕೋಟೆನಾಡು ಚಿತ್ರದುರ್ಗದಲ್ಲಿ 'ದುರ್ಗೋತ್ಸವ'

|

ಚಿತ್ರದುರ್ಗ, ಜ.21 : ಕೋಟೆ ನಾಡು ಚಿತ್ರದುರ್ಗ 'ದುರ್ಗೋತ್ಸವ'ಕ್ಕೆ ಸಿದ್ಧವಾಗುತ್ತಿದೆ. ಚಿತ್ರದುರ್ಗದಲ್ಲಿ ಜ.23ರಿಂದ 25ರವರೆಗೆ ದುರ್ಗೋತ್ಸವ ನಡೆಯಲಿದೆ. 2006ರ ನಂತರ ದುರ್ಗೋತ್ಸವ ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿತ್ತು. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ದುರ್ಗೋತ್ಸವ 2006ರಲ್ಲಿ ಸಂಭ್ರಮದಿಂದ ನಡೆದಿತ್ತು. ಮೂರು ವರ್ಷಕೊಮ್ಮೆ ಆಚರಿಸುತ್ತಿದ್ದ ಈ ಉತ್ಸವವನ್ನು ತದ ನಂತರ ನಾನಾ ಕಾರಣಗಳಿಂದ ನಿಲ್ಲಿಸಲಾಗಿತ್ತು. ಈ ಬಾರಿ ಉತ್ಸವ ನಡೆಸಲು ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ನಿರ್ಧರಿಸಿದ್ದು ದಿನಾಂಕ ನಿಗದಿಯಾಗಿದೆ.

ಜನವರಿ 23, 24 ಮತ್ತು 25ರಂದು ಹಳೆ ಮಾಧ್ಯಮಿಕ ಶಾಲಾ ಅವರಣ ಮತ್ತು ಕೋಟೆ ಅವರಣದಲ್ಲಿ ಮೂರು ದಿನಗಳ ದುರ್ಗೋತ್ಸವ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. [ಚಿತ್ರದುರ್ಗದಲ್ಲಿ 156 ಅಡಿ ಎತ್ತರದ ಬಸವಣ್ಣನ ಪ್ರತಿಮೆ]

ಉತ್ಸವಕ್ಕಾಗಿ ಜಿಲ್ಲೆಯ, ರಾಜ್ಯದ ಹಾಗೂ ಹೊರರಾಜ್ಯಗಳ ಕಲಾವಿದರನ್ನು ಆಹ್ವಾನಿಸಲಾಗಿದೆ. ಜಾನಪದ ಕಲಾ ತಂಡಗಳು ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರು, ಹಿನ್ನಲೆ ಗಾಯಕರು, ನೃತ್ಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಳೆ ಮಾದ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. [ಹಂಪಿ ಉತ್ಸವದ ಸಂಭ್ರಮ ಇಮ್ಮಡಿಸಿದ ಸಾಹಸಿ ಕಲಾವಿದರು]

'ನಾಗರಹಾವು' ತಂಡಕ್ಕೆ ಸನ್ಮಾನ : ಚಿತ್ರದುರ್ಗದ ಕೋಟೆಯ ಖ್ಯಾತಿಯನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಿದ 'ನಾಗರಹಾವು' ಚಲನಚಿತ್ರದಲ್ಲಿ ಅಭಿನಯಿಸಿದ ನಟ ಅಂಬರೀಶ್, ಹಿರಿಯ ನಟಿ ಲೀಲಾವತಿ, ಶಿವರಾಂ, ಹಿರಿಯ ಪೋಷಕ ನಟ ಲೋಕನಾಥ್, ಭಾರತಿ ವಿಷ್ಣು ವರ್ಧನ್ ಮುಂತಾದವರನ್ನು ಉತ್ಸವಕ್ಕೆ ಆಹ್ವಾನಿಸಲಾಗಿದ್ದು, ಅವರಿಗೆ ಸನ್ಮಾನ ಮಾಡಲಾಗುತ್ತದೆ.

ದಸರಾ, ಹಂಪಿ, ಲಕ್ಕುಂಡಿ, ಕದಂಬ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಉತ್ಸವಗಳ ರೀತಿಯಲ್ಲಿ 'ದುರ್ಗೋತ್ಸವ'ವೂ ಪ್ರತಿವರ್ಷ ನಡೆಯಬೇಕು. ಈ ವರ್ಷಕ್ಕೆ ಉತ್ಸವ ಸೀಮಿತವಾಗಬಾರದು. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಉತ್ಸವ ಪ್ರತಿ ವರ್ಷ ನಡೆಯಬೇಕು ಎಂಬುದು ಇಲ್ಲಿನ ಜನರ ಒತ್ತಾಯ.

English summary
'Durgotsav' three day cultural festival will be held in Chitradurga district from January 23 to 25. Chief Minister Siddaramaiah will inaugurate the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X