ಸಿದ್ದರಾಮಯ್ಯ ಸಂಸ್ಕಾರವಿಲ್ಲದ ವ್ಯಕ್ತಿ,ರಾವಣಾಸುರನಿದ್ದಂತೆ ಎಂದ ಶ್ರೀರಾಮುಲು
ಚಿತ್ರದುರ್ಗ,ಜ.29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸ್ಕಾರವಿಲ್ಲ, ಅವರೊಬ್ಬ ರಾವಣಾಸುರನಿದ್ದಂತೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಟೀಕಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾವಣಾಸುರನ ಎಲ್ಲ ಗುಣಗಳು ಸಿದ್ದರಾಮಯ್ಯ ಬಳಿ ಇದೆ, ಸಿದ್ದರಾಮಯ್ಯ ಓರ್ವ ಸಂಸ್ಕಾರವಿಲ್ಲದ ವ್ಯಕ್ತಿ ಎಂದರು. ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡುತ್ತಾರಷ್ಟೇ ಆದರೆ ಹತ್ತಿರದಿಂದ ನೋಡಿದವರಿಗೆ ಅವರ ಗುಣ ಏನೆಂಬುದು ತಿಳಿಯುತ್ತಿದೆ, ಅವರು ದೊಡ್ಡವನ್ನು ಕೂಡ ಏಕ ವಚನದಲ್ಲೇ ಮಾತನಾಡಿಸುತ್ತಾರೆ ಎಂದು ಹೇಳಿದರು.
ಶಾಸಕರು ಅಸಮಾಧಾನಗೊಂಡಿದ್ದು ಸಮ್ಮಿಶ್ರ ಸರ್ಕಾರ ಕೊನೆ ಕ್ಷಣಗಳನ್ನು ನೋಡುತ್ತಿದೆ ಎಂದರು. ಈ ಸಮ್ಮಿಶ್ರ ಸರ್ಕಾರಕ್ಕೆ ತತ್ವ ಸಿದ್ಧಾಂತ ಗೊತ್ತು ಗುರಿ.. ಯಾವುದೂ ಇಲ್ಲ. ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಏರ್ಪಟ್ಟಿದೆ.

ಚುನಾವಣೆಗೆ ಹಣ ಕ್ರೋಢೀಕರಿಸಲು ಕಚ್ಚಾಟ, ಲಂಚ, ಕಮಿಷನ್ ಹಣಕ್ಕಾಗಿ ಕಾದಾಟ ನಡೆಯುತ್ತಿದ್ದು, ವರ್ಗಾವಣೆಯ ದಂಧೆಯೂ ನಡೆಯುತ್ತಿದೆ ಎಂದು ಆರೋಪಿಸಿದರು.












Click it and Unblock the Notifications