ಸಿದ್ದರಾಮಯ್ಯ ಅಂಥಹವರು ಈ ಭೂಮಿ ಮೇಲೆ ಇರಬಾರದು: ಶ್ರೀರಾಮುಲು

Recommended Video

      Siddaramaiah and CT Ravi tweets creating a controversy | Oneindia Kannada

      ಚಿತ್ರದುರ್ಗ, ಅಕ್ಟೋಬರ್ 19: ಗಾಂಧಿಯನ್ನು ಕೊಂದ ಗೋಡ್ಸೆಗೆ ಭಾರತ ರತ್ನ ಕೊಡುವ ಮಾತನಾಡಿರುವ ಸಿದ್ದರಾಮಯ್ಯ ಅಂಥಹವರು ಈ ಭೂಮಿ ಮೇಲೆ ಇರಬಾರದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

      ಸಾವರ್ಕರ್‌ಗೆ ಭಾರತ ರತ್ನ ಕೊಡುವ ಬಗ್ಗೆ ಬಿಜೆಪಿ ಪ್ರಣಾಳಿಕೆ ಹೊರಡಿಸಿರುವ ಕುರಿತು ನಿನ್ನೆ ಮಾತನಾಡಿದ್ದ ಸಿದ್ದರಾಮಯ್ಯ, 'ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ಕೊಟ್ಟು ಬಿಡಿ' ಎಂದು ವ್ಯಂಗ್ಯ ಮಾಡಿದ್ದರು. ಆದರೆ ವ್ಯಂಗ್ಯವನ್ನು ಗಂಭೀರವಾಗಿ ಪರಿಗಣಿಸಿದಂತಿರುವ ರಾಮುಲು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

      ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, 'ಸಿದ್ದರಾಮಯ್ಯಗೆ ನಾಲಿಗೆ ಮೇಲೆ ಹಿಡಿತವಿಲ್ಲ, ಯಾರಿಗೆ ಪುರಸ್ಕಾರ ಕೊಡಬೇಕು, ಯಾರಿಗೆ ಸನ್ಮಾನ ಮಾಡಬೇಕು ಎಂದು ಗೊತ್ತಿಲ್ಲದ ಸಂಸ್ಕೃತಿಯಲ್ಲಿ ಅವರು ಬೆಳೆದಿದ್ದಾರೆ, ಸಾವರ್ಕರ್‌ ಅವರ ಬಗ್ಗೆ ಓದಿಕೊಂಡು ಅವರು ಮಾತನಾಡಲಿ' ಎಂದು ರಾಮುಲು ಹೇಳಿದರು.

      Siddaramaiah Unfit To Live On The Earth: Sriramulu

      'ಈ ರೀತಿಯ ಪ್ರಚೋದನಕಾರಿ, ದುರಹಂಕಾರದ ಹೇಳಿಕೆಗಳನ್ನು ಕೊಡುವ ಸಿದ್ದರಾಮಯ್ಯ ಅವರನ್ನು ಜನರು ಸಹಿಸಬಾರದು' ಎಂದು ರಾಮುಲು ಆಕ್ರೋಶ ವ್ಯಕ್ತಪಡಿಸಿದರು.

      ಬಿ.ಎಲ್.ಸಂತೋಶ್ ಅವರು ಹೇಳಿದಂತೆ ನಳಿನ್ ಕಟೀಲ್ ಕುಣಿಯುತ್ತಾರೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮುಲು, ದೆಹಲಿಯಲ್ಲಿರುವ ಸೋನಿಯಾ ಗಾಂಧಿ ರಿಮೋಟ್‌ನಲ್ಲಿ ಸಿದ್ದರಾಮಯ್ಯ ಇದ್ದಾರಲ್ಲ, ಸೋನಿಯಾ ರಿಮೋಟ್ ಒತ್ತಿದರೆ ಇವರು ಕುಣಿಯುತ್ತಾರಾ? ಎಂದು ಪ್ರಶ್ನೆ ಮಾಡಿದರು.

      'ಮಾತನಾಡಲು ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು, ರಾಜ್ಯಾಧ್ಯಕ್ಷರು ಎಂದ ಮೇಲೆ ಎಲ್ಲರ ಮಾತನ್ನೂ ಕೇಳಿಸಿಕೊಳ್ಳಬೇಕಾಗುತ್ತದೆ' ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+