ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಿಂದ ಕಾರಜೋಳರನ್ನು ಸಿಎಂ ಎಂದು ಘೋಷಿಸಿ : ಸಿದ್ದರಾಮಯ್ಯ ಸವಾಲು

|
Google Oneindia Kannada News

ಚಿತ್ರದುರ್ಗ, ಮೇ 03 : ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು. ಬಿಜೆಪಿ ನಾಯಕರಿಗೆ 'ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಮಾಡಿ' ಎಂದು ಅವರು ಸವಾಲು ಹಾಕಿದರು.

ಗುರುವಾರ ಕಲಬುರಗಿಯಲ್ಲಿ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 'ಕಳೆದ ವಿಧಾನಸಭೆ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿ ದಲಿತ ಸಮುದಾದವರ ದಿಕ್ಕುತಪ್ಪಿಸಿತು' ಎಂದು ಆರೋಪಿಸಿದ್ದರು.

ಕಲಬುರಗಿಯಲ್ಲಿ ಖರ್ಗೆ ಮೇಲೆ ಬಿತ್ತು ಪ್ರಧಾನಿ ಮೋದಿ ಕಣ್ಣು!ಕಲಬುರಗಿಯಲ್ಲಿ ಖರ್ಗೆ ಮೇಲೆ ಬಿತ್ತು ಪ್ರಧಾನಿ ಮೋದಿ ಕಣ್ಣು!

ಚಿತ್ರದುರ್ಗದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಅವರಿಗೆ ರಾಷ್ಟ್ರಮಟ್ಟದ ನಾಯಕತ್ವ ನೀಡಿದ್ದೇವೆ. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದಾರೆ' ಎಂದರು.

Siddaramaiah

'ಬಿಜೆಪಿಯವರಿಗೆ ತಾಖತ್ ಇದ್ದರೆ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಜೆಡಿಎಸ್‌ಗೆ ಮತ ಹಾಕಿ ತಪ್ಪು ಮಾಡಬೇಡಿ: ಮೋದಿಜೆಡಿಎಸ್‌ಗೆ ಮತ ಹಾಕಿ ತಪ್ಪು ಮಾಡಬೇಡಿ: ಮೋದಿ

ಮೋದಿ ಭಾಷಣದ ಬಗ್ಗೆ ಟ್ವೀಟ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟ್ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಯೋಗಿ ಆದಿತ್ಯನಾಥ್ ಬಗ್ಗೆ ವ್ಯಂಗ್ಯ : ಉತ್ತರ ಪ್ರದೇಶ ಮುಖ್ಯಮಂತ್ರಿ ಇಂದು ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಡೆಸಿದರು. ಸಿದ್ದರಾಮಯ್ಯ ಅವರು ಇದನ್ನು ವ್ಯಂಗ್ಯಮಾಡಿದ್ದು, ಟ್ವೀಟ್ ಮಾಡಿದ್ದಾರೆ.

English summary
Karnataka Chief Minister Siddaramaiah challenged Karnataka BJP leaders to announced Govind Karjol as Chief Minister candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X