ಬಿಜೆಪಿಯವರಿಗೆ ಶ್ರೀ ರಾಮನ ಶಾಪ ಕನ್ಫರ್ಮ್: ಸಚಿವ ಮಧು ಬಂಗಾರಪ್ಪ ಹೀಗೆ ಹೇಳಲು ಕಾರಣ ಏನು?
ಚಿತ್ರದುರ್ಗ, ಜನವರಿ, 23: ಬರುವ ಲೋಕಸಭಾ ಚುನಾವಣೆಯಲ್ಲಿ ಹೈ ಕಮಾಂಡ್ ಸೂಚಿಸುವಂತೆ ಅಭ್ಯರ್ಥಿಗಳ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಉಸ್ತುವಾರಿಗಳ ಕೆಲಸವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಇದೇ ವೇಳೆ ಅವರು, ಬಿಜೆಪಿಯವರಿಗೆ ಶ್ರೀರಾಮನ ಶಾಪ ತಟ್ಟೇ ತಟ್ಟುತ್ತದೆ ಎಂದು ಹೇಳಿದರು. ಹಾಗಾದರೆ ಅವರು ಹೀಗೆ ಹೇಳಲು ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಂಗಳೂರು ಉಸ್ತುವಾರಿ ಇದ್ದೇನೆ. ಆದ್ದರಿಂದ ಅಲ್ಲೆಲ್ಲಾ ಒತ್ತು ಕೊಡಲು ಸೂಚಿಸಿದ್ದಾರೆ. ಹಾಲಿ ಸಚಿವರಿಗೂ ಲೋಕಸಭೆಗೆ ಹೋಗಲು ಹೇಳಿದರೆ ನಾವು ತಲೆ ಬಾಗಬೇಕಾಗುತ್ತದೆ. ಪ್ರಜಾ ಪ್ರಭುತ್ವ ಉಳಿಯಬೇಕಾದರೆ ಪಕ್ಷದ ವರಿಷ್ಠರು ಹೇಳಿದಂತೆ ಕೇಳಬೇಕಾಗುತ್ತದೆ ಎಂದರು.

ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಹಲ್ಲೆಗೆ ಯತ್ನದ ಬಗ್ಗೆ ಪ್ರತಿಕ್ರಿಯಿಸಿ, ಹಲ್ಲೆಗೆ ಯತ್ನಿಸುವುದು ತೊಂದರೆ ಕೊಡುವುದು ಹೊಸದೇನಲ್ಲ. ಕಿತಾಪತಿ ಮಾಡುವುದರಲ್ಲಿ ನಂಬರ್ 1 ಬಿಜೆಪಿಯವರು, ನಾವು ರಾಮನ ಭಕ್ತರೆ ಅಲ್ಲ ಎನ್ನುವಂತೆ ಬಿಂಬಿಸುತ್ತಾರೆ ಎಂದು ಕಿಡಿಕಾರಿದರು.
ಯಾರು ಬೇರೆ ಧರ್ಮ-ಜಾತಿ ಗೌರವವನ್ನು ಕೊಡುತ್ತಾರೆಯೋ ಅವರೇ ನಿಜವಾದ ಹಿಂದುಗಳು. ದೇವರ ಹೆಸರಲ್ಲಿ ರಾಜಕಾರಣ ಮಾಡುವುದು ಒಳ್ಳೆ ಪದ್ದತಿಯಲ್ಲ. ಸಂವಿಧಾನವೇ ನಮ್ಮ ದೇಶದ ದೇವರು, ಅದನ್ನು ಮನೆಗೆ ಅಡವಿಡಬಾರದು. ಒಂದೊಂದು ದೇವರನ್ನು ಒಂದೊಂದು ಪಕ್ಷಕ್ಕೆ ಅಡವಿಡಬಾರದು. ನೀವು ರಾಮಭಕ್ತರಾದರೆ ಇನ್ನೊಬ್ಬರು ರಾಮನ ವಿರೋಧಿಗಳಾ? ನಾವು ಎಲ್ಲ ಧರ್ಮ ದೇವರ ಭಕ್ತರು ಎಂದರು.
ಅಧಿಕಾರದಲ್ಲಿದ್ದಾಗ ನಾವು ಬಹಳ ಜವಾಬ್ದಾರಿಯಿಂದಿರಬೇಕು. ಅವರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ, ಇದನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಭಾಗ್ಯಗಳನ್ನು ನೀಡಿ ಹರಾಜಾಗಿದೆ ಎನ್ನುತ್ತಾರೆ. ಆದರೆ 92% ರಷ್ಟು ಯಶಸ್ಸನ್ನು ನಾವು ಕಂಡಿದ್ದೇವೆ. ಭಾಗ್ಯಗಳ ಸೌಲಭ್ಯವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ. ನಾವು ಪಡೆದಿಲ್ಲ ಎಂದು ಹೇಳಲಿ ನೋಡೋಣ, ನಾವು ಭಾಗ್ಯ ಕೊಟ್ಟಿರೋದು ಅರ್ಥಿಕ ಸಂಕಷ್ಟ ನೀಗಿಸಲು, ವೋಟಿಗಾಗಿ ಅಲ್ಲ ಎಂದರು.
ಎಲ್ಲಾ ಭಾಗ್ಯಗಳಿಗೂ ಸರ್ಕಾರ ಹಣ ಕಟ್ಟುತ್ತಿದೆ, ಯಾವುದೇ ತೊಂದರೆ ಇಲ್ಲ. ಬಿಜೆಪಿ ಅರ್ಥ ಮಾಡ್ಕೋಬೇಕು. ಅವರ ಸರ್ಕಾರವಿದ್ದಾಗ ಕೇವಲ ಯೋಜನೆಗಳನ್ನು ಘೊಷಣೆ ಮಾಡಿದರು, ಜಲ್ಲಿಕಲ್ಲು ಹಾಕಿದರು. ಆದರೆ ಹಣ ಬಿಡುಗಡೆ ಮಾಡಲಿಲ್ಲ. ಈಗ ನಾವು ಒದ್ದಾಡುತ್ತಿದ್ದೇವೆ. ಇವರ ಹಣೆ ಬರಹಕ್ಕೆ ಟ್ಯಾಕ್ಸ್ ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ವ ಶಿಕ್ಷಣ ಅಭಿಯಾನಕ್ಕೆ ಶಿಕ್ಷಣ ಇಲಾಖೆಗೆ 1,800 ಕೋಟಿ ರೂಪಾಯಿ ಕೊಡುತ್ತದೆ. ಪಕ್ಕದ ರಾಜ್ಯಕ್ಕೆ 3,000 ಕೊಡುತ್ತಾರೆ. ಆದ್ದರಿಂದ ಮಂಜೂರಾಗಿದೆ ಎಂದು ಬಂದಿರುವ ಪತ್ರವನ್ನು ವಾಪಾಸ್ಸು ಕಳಿಸುವಂತೆ ಪತ್ರಕ್ಕೆ ಸಹಿ ಮಾಡಿ ಬಂದಿದ್ದೇನೆ. ಇನ್ನು ಅಭಿವೃದ್ದಿ ಬಗ್ಗೆ ಮಾತಾಡದ ಬಿಜೆಪಿಯವರು ಧರ್ಮದ ಬಗ್ಗೆ ಮಾತಾಡಿ ಅದರ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುತ್ತಾರೆಂದು ಕಿಡಿಕಾರಿದರು.
ಉತ್ತರದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಅಡ್ಡಿ ಮಾಡುವ ಕೆಲಸವನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರ ಇದನ್ನು ತಡೆಯಬೇಕಿತ್ತು, ತಡೆದಿಲ್ಲ. ನಮ್ಮಲ್ಲಿ ಕೂಡ ತಡೆಯಲು ಪ್ರಯತ್ನ ಮಾಡಿದ್ದರೂ ಕೂಡ ನಾವು ಬಿಟ್ಟಿಲ್ಲ. ನಾವು ಗಟ್ಟಿಯಾಗಿ ನಿಂತು ಎದುರಿಸಿದ್ದೇವೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಬಿಡಲಿಲ್ಲ. ಉತ್ತರ ಭಾರತದಲ್ಲಿ ಕಾನೂನು ಸತ್ತು ಹೋಗಿದೆ. ಬಿಜೆಪಿಯವರು ಶ್ರೀರಾಮನನ್ನು ಬೀದಿ ಬೀದಿಯಲ್ಲಿ ಓಡಾಡಿಸಿದ್ದಾರೆ. ಅವರಿಗೆ ಖಂಡಿತ ಶಾಪ ತಟ್ಟುತ್ತದೆ. ಬಿಜೆಪಿ ಚೀಪ್ ಪಾಲಿಟಿಕ್ಸ್ ಮಾಡುತ್ತದೆ. ರಾಮ ನಮ್ಮ ಹೃದಯದಲ್ಲಿದ್ದಾರೆ ಎಂದರು.
ಅಪ್ಪರ್ ಭದ್ರಾ ಹೋರಾಟದ ವಿಚಾರ: ಶಿವಮೊಗ್ಗ ಮತ್ತು ಚಿತ್ರದುರ್ಗ ಭಾಗದವರು ಕೂಡ ನನಗೆ ಅರ್ಜಿ ಕೊಟ್ಟಿದ್ದಾರೆ. ಅದನ್ನು ತಿಳಿದುಕೊಂಡು ನಾನು ಏನು ಮಾಡಬೇಕೋ ಮಾಡುತ್ತೇನೆ. ತುಂಬಾ ನೆನೆಗುದಿಗೆ ಬಿದ್ದಿದೆ.
ಸುಧಾಕರ್ ಹೇಳಿದ್ದೇನು?: ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾಗಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 5,300 ಕೋಟಿ ರೂಪಾಯಿ ಘೋಷಿಸಿದ್ದರು. ಇದುವರೆಗೂ ಕೂಡ ಒಂದು ಪೈಸೆ ಬಿಡುಗಡೆ ಆಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು, ಇದರಿಂದ ಭದ್ರಾ ಕಾಮಗಾರಿ ವೇಗವನ್ನು ಪಡೆದುಕೊಳ್ಳುತ್ತದೆ ಎಂದರು.
ರಾಷ್ಟ್ರೀಯ ಯೋಜನೆಯಲ್ಲಿ ಹಣ ಘೋಷಿಸಬೇಡಿ, ಕೃಷಿ ಸಂಚಯನಿಯಲ್ಲಿ ಘೋಷಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ರ ಕೊಟ್ಟು ನಾಲ್ಕು ತಿಂಗಳು ಕಳೆದರೂ ಹಣ ಬಿಡುಗಡೆ ಮಾಡಿಲ್ಲ. ಹನಿ ನೀರಾವಾರಿ ಕೆಲಸ ನಡೆಯುತ್ತಿದೆ. ಅದಕ್ಕಾದರೂ ಬಿಡುಗಡೆ ಮಾಡಬೇಕಿತ್ತಲ್ವ? ಇದಕ್ಕೂ ರಾಜ್ಯ ಸರ್ಕಾರ ಹಣ ಕೊಡುತ್ತಿದೆ ಎಂದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications