ಮಹಾ ಘಟಬಂಧನ್ ಮೂಲಕ ಕಾಂಗ್ರೆಸ್ ದೇಶಕ್ಕೆ ಒಳ್ಳೆಯ ಸಂದೇಶ ಕೊಡಲಿದೆ-ಸಚಿವ ಶಿವರಾಜ್ ತಂಗಡಗಿ
ಚಿತ್ರದುರ್ಗ, ಜುಲೈ 18: ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಜನರ ಕೈಗೆ ಬಿಜೆಪಿ ಚಿಪ್ಪು ಕೊಟ್ಟಿದ್ದರು. ಹೀಗಾಗಿ ಜನರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಚಿಪ್ಪು ಕೊಟ್ಟದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್ ತಂಗಡಗಿ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗ ನಗರದ ಬೋವಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿ ಪಕ್ಷದ ಕೈಗೆ ಚಿಪ್ಪು ಕೊಡಲಿದ್ದಾರೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇಶದಲ್ಲಿ ಅರಾಜಕತೆ ಸೃಷ್ಟಿಸಿಯಾಗುತ್ತಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. 9 ವರ್ಷದಲ್ಲಿ ದೇಶದಲ್ಲಿ ಎಲ್ಲವನ್ನೂ ಹಾಳು ಮಾಡಲು ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮಹಾ ಘಟಬಂಧನ್‌ದಿಂದ ದೇಶಕ್ಕೆ ಒಳ್ಳೆಯ ಸಂದೇಶ ಕೊಡೋಕೆ ಹೊರಟಿದೆ ಎಂದರು.
ರೈತರ ಬಗ್ಗೆ ನಮ್ಮಷ್ಟು ಬಿಜೆಪಿಯವರೇನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಸಚಿವ ಶಿವರಾಜ್ ಎಸ್ ತಂಗಡಗಿ ದೇಶದ ರೈತರು, ಬಡವರು, ದಲಿತರಿಗೆ, ಕೇಂದ್ರ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಒಂದು ಕೆಲಸ ತಿಳಿಸಿ ನೋಡೋಣ ಎಂದು ಕೇಂದ್ರ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಇನ್ನು ಮಾತು ಮುಂದುವರಿಸಿದ ಅವರು, ಹೊಟ್ಟೆ ಕಿಚ್ಚಿಗೆ ಏನೂ ಮಾಡಲು ಆಗುವುದಿಲ್ಲ, ಈಗ ಐದು ಗ್ಯಾರಂಟಿ ಯೋಜನೆಗಳನ್ನು ಪೂರೈಸಿದ್ದೇವೆ. ನವೆಂಬರ್ ತಿಂಗಳಲ್ಲಿ ಯುವನಿಧಿ ಜಾರಿ ಮಾಡುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಅವರ ಪಕ್ಷದಲ್ಲೂ ಯಾರು ಇರುವುದಿಲ್ಲ, ಅವರ ಜೊತೆಗೂ ಯಾರು ಇಲ್ಲ, ಈಗ ಜೆಡಿಎಸ್ ಪಕ್ಷಕ್ಕೆ ಆದ ಗತಿ ಮುಂದೆ ಬಿಜೆಪಿಗೂ ಆಗುತ್ತದೆ ಎಂದು ಲೇವಡಿ ಮಾಡಿದರು.












Click it and Unblock the Notifications