• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿರಿಯ ಪತ್ರಕರ್ತ ಗೌರೀಪುರ ಚಂದ್ರು ನಿಧನ: ಕೊರೊನಾ ಪಾಸಿಟಿವ್ ಪತ್ತೆ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಜೂನ್ 18: ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತ ಗೌರೀಪುರ ಚಂದ್ರು (54) ಅವರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದ್ದರೂ, ಅವರ ದೇಹ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

   Government orders BSNL not to use Chinese equipments | BSNL | Oneindia Kannada

   ಗೌರೀಪುರ ಚಂದ್ರು ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರೀಪುರ ಗ್ರಾಮದವರು. ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ ಹೇಳಲಾಗಿದೆ.

   ಗುಡ್ ನ್ಯೂಸ್: ಚಿತ್ರದುರ್ಗ ಈಗ ಕೊರೊನಾ ಸೋಂಕು ಮುಕ್ತ ಜಿಲ್ಲೆ

   ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಗೌರೀಪುರ ಚಂದ್ರು ಅವರು, ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ 12 ರ ಹೊತ್ತಿಗೆ ಪ್ರಜ್ಞಾಹೀನರಾಗಿ ಕುಸಿದ ಬಿದ್ದಿದ್ದರು. ಕೂಡಲೇ ಚಂದ್ರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

   ವೈದ್ಯರು ಪರೀಕ್ಷಿಸಿದ ನಂತರ ಚಂದ್ರು ಅವರ ಸಾವನ್ನು ಖಚಿತಪಡಿಸಿದ್ದಾರೆ. ಈ ವೇಳೆ ಅವರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅವರಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಅವರ ಆರೋಗ್ಯ ವರದಿಯಲ್ಲಿ ತಿಳಿಸಲಾಗಿದೆ.

   ಚಂದ್ರು ಅವರು ಎಂಜನಿಯರಿಂಗ್ ಪದವಿ ಮುಗಿಸಿದ್ದರೂ, ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ಮೃತ ಪತ್ರಕರ್ತರಿಗೆ ಸಂಗೀತ ಶಿಕ್ಷಕಿಯಾಗಿರುವ ಪತ್ನಿ, ಎಂಜನಿಯರಿಂಗ್ ಓದುತ್ತಿರುವ ಮಗ, ಹೈಸ್ಕೂಲ್ ಓದುತ್ತಿರುವ ಇನ್ನೊಬ್ಬ ಮಗನನ್ನು ಅಗಲಿದ್ದಾರೆ.

   English summary
   Gowripura Chandru (54), a senior journalist at Vijaya Karnataka newspaper, died of a heart attack on Thursday, but a coronavirus infection has been confirmed on his body test.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X