ಚಿತ್ರದುರ್ಗ: ಸೆಪ್ಟೆಂಬರ್ 15ರಂದು ಈ ರಾಷ್ಟ್ರೀಯ ಹೆದ್ದಾರಿ ಎಡಭಾಗದಲ್ಲಿ ವಾಹನ ಸಂಚಾರ ನಿರ್ಬಂಧ: ಕಾರಣ ಏನು?
ಚಿತ್ರದುರ್ಗ, ಸೆಪ್ಟೆಂಬರ್, 14: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಸೆಪ್ಟೆಂಬರ್ 15ರಂದು ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ಮಾರ್ಗದಲ್ಲಿ ಸುಮಾರು 140 ಕಿಲೋ ಮೀಟರ್ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಪರ್ಯಾಯ ಮಾರ್ಗಗಳ ವಿವರಗಳನ್ನು ತಿಳಿಯಿರಿ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸ್ವ-ಸಹಾಯ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಮಾನವ ಸರಪಳಿ ರಚನೆಯನ್ನು ಮೊಳಕಾಲ್ಮೂರು ತಾಲ್ಲೂಕಿನ ತಮ್ಮೇನಹಳ್ಳಿ ಗೇಟ್‌ನಿಂದ, ಹಿರಿಯೂರು ನಗರದ ಟಿ.ಬಿ.ವೃತ್ತದವರಗೆ ಹಾದು ಹೊಗಿರುವ ರಾಷ್ಟ್ರೀಯ ಹೆದ್ದಾರಿ 150(ಎ) ಹಾಗೂ ಹಿರಿಯೂರು ನಗರದ ಟಿ.ಬಿ ವೃತ್ತದಿಂದ ಜೆ.ಜೆ.ಹಳ್ಳಿ ಬಾರ್ಡರ್‌ವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರಸ್ತೆಗಳ ಎಡಭಾಗದಲ್ಲಿ ನಿರ್ಮಾಣ ಮಾಡಲಾಗುವುದು.
ಈ ಕಾರಣದಿಂದ ಸಾರ್ವಜನಿಕರ ಸುರಕ್ಷತೆ, ವಾಹನ ಸುಗಮ ಸಂಚಾರದ ದೃಷ್ಠಿಯಿಂದ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ಮಾರ್ಗದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೆಪ್ಟೆಂಬರ್ 15ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಗಯವರೆಗೆ ಎಡ ಭಾಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಹಸಿರು ಸೇನಾನಿಗಳಿಗೆ ನಮನ: ಅರಣ್ಯ ರಕ್ಷಣೆಯಲ್ಲಿ ತೊಡಗಿದ ವೇಳೆ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಇಂದು ಗಡಿಜಿಲ್ಲೆಯಲ್ಲಿ ಸ್ಮರಿಸಿಕೊಂಡು ರಾಷ್ಟ್ರೀಯ ಅರಣ್ಯ ಹುತಾತ್ಮ ದಿನದಂದು ಗೌರವ ನಮನ ಸಲ್ಲಿಸಲಾಯಿತು.
ಚಾಮರಾಜನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದ ಅರಣ್ಯ ಹುತಾತ್ಮರ ಸ್ಮಾರಕದಲ್ಲಿ ಪ್ರಧಾನ ಜಿಲ್ಲಾ ನ್ಯಾಯಧೀಶರಾದ ಬಿ.ಎಸ್.ಭಾರತಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಹುತಾತ್ಮರಿಗೆ ಗೌರವ ಸೂಚಿಸಿದರು.
ಬಳಿಕ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ, ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಬಿ.ಎಸ್ ಸೇರಿದಂತೆ ಸಂಘ-ಸಂಸ್ಥೆ ಗಣ್ಯರು ಪುಷ್ಮ ನಮನ ಸಲ್ಲಿಸಿದರು.
ಪೊಲೀಸ್ ವಾದ್ಯವೃಂದದಿಂದ ಅಬೈಡ್ ವಿಥ್ ಮಿ, ಲಾಸ್ಟ್ ಪೋಸ್ಟ್ ಗಾಯನದ ಮೂಲಕ 61 ಮಂದಿ ಹುತಾತ್ಮರಿಗೆ ಗೌರವ ಸಮರ್ಪಿಸಲಾಯಿತು. ಜೊತೆಗೆ,
3 ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹಸಿರು ಸೇನಾನಿಗಳಿಗೆ ವಂದಿಸಲಾಯಿತು.
ರಾಜ್ಯದ ಕಾಡುಗಳ ರಕ್ಷಣೆಗಾಗಿ ಕಳೆದ 58 ವರ್ಷಗಳಲ್ಲಿ 61 ಜನರು ಪ್ರಾಣತ್ಯಾಗ ಮಾಡಿದ್ದಾರೆ. 1966ರಿಂದ 2024ರವರೆಗೆ ಅರಣ್ಯ ರಕ್ಷಕರು, ವನಪಾಲಕರು, ಅರಣ್ಯಾಧಿಕಾರಿಗಳು, ದಿನಗೂಲಿ ನೌಕರರು, ಅರಣ್ಯ ವೀಕ್ಷಕರು, ಪಶು ವೈದ್ಯ, ಕೇರ್ಟೇಕರ್, ಗಸ್ತು ಅರಣ್ಯ ಪಾಲಕರು, ಹೊರಗುತ್ತಿಗೆ ನೌಕರರು ಮತ್ತು ಇತರರು ಅರಣ್ಯ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
1966ರಿಂದ 2024ರವರೆಗೆ ರಾಜ್ಯದಲ್ಲಿ 61 ಜನರು ಹುತಾತ್ಮರಾಗಿದ್ದಾರೆ. 1966ರ ಆ.13ರಲ್ಲಿ ಬೆಳಗಾವಿ ವಿಭಾಗದಲ್ಲಿ ಅರಣ್ಯ ರಕ್ಷಕ ಶಂಕರ್ ಮೂಡಲಗಿಯಿಂದ ಶುರುವಾದ ಬಲಿದಾನ 2024ರ ಜು.11ರಂದು ಪ್ರಾಣತ್ಯಾಗ ಮಾಡಿದ ಬನ್ನೇರುಘಟ್ಟ ವನ್ಯಜೀವಿ ವಲಯದ ಕಲ್ಕೆರೆ ಗಸ್ತಿನ ದಿನಗೂಲಿ ನೌಕರ ಚಿಕ್ಕಮಾದಯ್ಯವರೆಗೂ ಮುಂದುವರಿದಿದೆ.












Click it and Unblock the Notifications