ಅಯೋಧ್ಯೆಗೆ ತೆರಳಿದ ಚಿತ್ರದುರ್ಗದ ಮಠಾಧೀಶರು, ಇವರ ಜೊತೆ ಇನ್ನು ಯಾರೆಲ್ಲ ಹೋದ್ರು ಗೊತ್ತಾ?-ಮಾಹಿತಿ
ಚಿತ್ರದುರ್ಗ, ಜನವರಿ, 21: ದೇಶದ ಜನತೆಯ ಬಹುದಿನಗಳ ಕನಸು ನನಸಾಗಲು ಇನ್ನು ಕೆಲವೇ ಕ್ಷಣಗಳಷ್ಟೇ ಬಾಕಿಯಿದೆ. ಇನ್ನು ಇಡೀ ದೇಶದ ಜನತೆಯ ಚಿತ್ತ ರಾಮಮಂದಿರದತ್ತ ಇದೆ. ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮಂದಿರ ದೇವಾಲಯ ಉದ್ಘಾಟನೆಗೆ ಚಿತ್ರದುರ್ಗಲ ಹಿಂದುಳಿದ ಮಠಾಧೀಶರು ತೆರಳಿದ್ದಾರೆ.
ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳಿ, ಅಲ್ಲಿಂದ ವಿಮಾನ ಮೂಲಕ ಲಕ್ನೋ ತಲಪಲಿದ್ದಾರೆ. ನಂತರ ಲಕ್ನೋದಿಂದ ಅಯೋಧ್ಯೆಗೆ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ. ಅಯೋಧ್ಯೆಯಲ್ಲಿ ದೇಶದ ಸುಮಾರು ನಾಲ್ಕು ಸಾವಿರ ಗಣ್ಯರು ಸೇರಲಿದ್ದು ವಾಸ್ತವಿಕೆ ಸೂಚಿತವಾದ ಸಿಟಿ ನಿರ್ಮಾಣ ಮಾಡಲಾಗಿದೆ. ಎಲ್ಲಾ ಗಣ್ಯರು ವಾಸ್ತವ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಅದರಂತೆ ಚಿತ್ರದುರ್ಗದ ಪ್ರಮುಖ ಮಠಾಧೀಶರು ಕೂಡ ಹಿಂದೂ ವಿಮಾನ ಮೂಲಕ ಅಯೋಧ್ಯ ಕಡೆ ಪ್ರಯಾಣ ಬೆಳೆಸಿದ್ದಾರೆ.

ಪ್ರಮುಖವಾಗಿ ಜಿಲ್ಲೆಯಿಂದ ಭಾಗವಹಿಸುತ್ತಿರುವ ಮಠಾಧೀಶರುಗಳಾದ ಜಗದ್ಗುರು ಶ್ರೀ ನಿರಂಜನಾನಂದ ಮಹಾಸ್ವಾಮಿಜಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಕಾಗಿನೆಲೆ, 2). ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗ, 3) ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಕುಂಚಗಿರಿ ಹೊಸದುರ್ಗ, 4) ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮಯ್ಯ ಮಹಾಸ್ವಾಮೀಜಿ ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗ ಇವರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.
ಇವರ ಜೊತೆಗೆ ದಾವಣಗೆರೆ ಜಿಲ್ಲೆಯ ಮಠಾಧೀಶರು ಕೂಡ ಅಯೋಧ್ಯೆಗೆ ತೆರಳಿದ್ದಾರೆ. 1). ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿ ಶ್ರೀ ವಾಲ್ಮೀಕಿ ಗುರುಪೀಠ ರಾಜನಳ್ಳಿ ಹರಿಹರ, 2) ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಹಾಸ್ವಾಮೀಜಿ ಪಂಚಮಸಾಲಿ ಗುರುಪೀಠ ಹರಿಹರ, 3)ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಭಗೀರಥ ಪೀಠ ಮಧುರೆ ಇವರು ಸಹ ತೆರಳಿದ್ದಾರೆ. ಚಿತ್ರದುರ್ಗ ಜಿಲ್ಲೆಯಿಂದ ಅಯೋಧ್ಯೆಗೆ ತೆರಳಿದ ಮಠಾಧೀಶರಿಗೆ ಭಕ್ತರು ಗೌರವಿಸಿ, ಆರತಿ ಬೀಳ್ಕೊಟ್ಟರು.












Click it and Unblock the Notifications