ಚಿತ್ರದುರ್ಗದಲ್ಲಿ ಗುಡುಗು ಸಿಡಿಲು ಸಹಿತ ಸುರಿದ ಮಳೆ
ಚಿತ್ರದುರ್ಗ, ಮೇ 05: ಚಿತ್ರದುರ್ಗದ ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ಇಂದು ಮಳೆಯಾಗುತ್ತಿದೆ. ಜಿಲ್ಲೆಯ ಹಿರಿಯೂರು ನಗರ ಮತ್ತು ತಾಲೂಕಿನ ಸುತ್ತಮುತ್ತ ಮುಸ್ಸಂಜೆ ಸಮಯದಲ್ಲಿ ಸಾಧಾರಣ ಮಳೆಯಾಗಿದೆ.
ಸಂಜೆ 4 ಗಂಟೆ ಸುಮಾರಿಗೆ ಭಾರೀ ಗಾಳಿಯೊಂದಿಗೆ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುಡುಗು ಸಿಡಿಲು ಸಹಿತ ಸುಮಾರು 30 ನಿಮಿಷಗಳ ಕಾಲ ಮಳೆರಾಯ ಅಬ್ಬರಿಸಿದ್ದಾನೆ. ಮಳೆಯಿಂದ ಚಿತ್ರದುರ್ಗ ಜನತೆಯಲ್ಲಿ ಕೃಷಿ ಚಟುವಟಿಕೆಯೂ ಚುರುಕುಗೊಳ್ಳಲಿದೆ. ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಸಹ ಸಣ್ಣ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿರುವ ವರದಿಯಾಗಿದೆ.

ಲಾಕ್ ಡೌನ್ ಹಾಗೂ ರಣಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಚಿತ್ರದುರ್ಗ ಜನತೆಗೆ ಮಳೆ ತಂಪೆರೆದಂತಾಗಿದೆ. ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ. ಹಿರಿಯೂರು ತಾಲ್ಲೂಕಿನ ವಿವಿ ಸಾಗರದಿಂದ ಕಳೆದ ಹದಿನೈದು ದಿನಗಳಿಂದ ವೇದಾವತಿ ನದಿ ಮೂಲಕ ಚಳ್ಳಕೆರೆಗೆ ನೀರು ಹರಿಯುತ್ತಿರುವ ಕಾರಣ ನದಿ ದಂಡೆಯ ಗಿಡಮರಗಳು ಚಿಗುರೊಡೆದಿದ್ದು, ಅಂತರ್ಜಲದಿಂದ ಬತ್ತಿ ಹೋಗಿದ್ದ ಬೋರ್ ವೆಲ್ ಗಳು ಸೀಪೇಜ್ ಆಗತೊಡಗಿವೆ.












Click it and Unblock the Notifications