ವಾಟರ್ ಟ್ಯಾಂಕ್ ಏರಿ ಭಾಷಣ ಮಾಡಿದ ರಾಹುಲ್ ಗಾಂಧಿ: ವಿಡಿಯೋ ನೋಡಿ

ಚಿತ್ರದುರ್ಗ, ಅ. 13: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ. ಗುರುವಾರ ಕೂಡ ರಾಹುಲ್ ಗಾಂಧಿ ಇತರ ನಾಯಕರ ಜೊತೆಗೆ ವಾಟರ್ ಟ್ಯಾಂಕ್ ಏರಿ ಭಾಷಣ ಮಾಡಿ ಜನರನ್ನು ಅಚ್ಚರಿಗೊಳಿಸಿದ್ದಾರೆ.

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಮರನಹಳ್ಳಿಯಲ್ಲಿ ರಾಹುಲ್ ಗಾಂಧಿಗೆ ಬೆಲ್ಲದ ಆರತಿ ಮಾಡಿ ಪುಟಾಣಿಗಳು ಸ್ವಾಗತ ಕೋರಿದ್ದಾರೆ. ಈ ವೇಳೆ ನೆರೆದಿದ್ದ ಜನರನ್ನು ನೋಡಿ ರಾಹುಲ್ ಗಾಂಧಿ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದಲೇ ಭಾಷಣ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿದ್ದಾಗ ಜನ ರಾಹುಲ್ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಜನರನ್ನು ನೋಡಲು ಅವರು ವಾಟರ್ ಟ್ಯಾಂಕ್ ಹತ್ತಿ, ರಾಷ್ಟ್ರಧ್ವಜ ಪ್ರದರ್ಶಿಸಿ ಭಾಷಣ ಮಾಡಿದ್ದಾರೆ. ರಾಹುಲ್ ಗಾಂಧಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಾಥ್ ನೀಡಿದ್ದಾರೆ.

Rahul Gandhi Climbs Water Tank Holding Tricolor Flag At Chitradurga

ಇದಲ್ಲದೆ, ಹಿಂದಿ ಹೇರಿಕೆ ಬಗ್ಗೆ ಕಿಡಿ ಕಾರಿದ್ದಾರೆ. ಉದ್ಯೋಗಾಕಾಂಕ್ಷಿಯೊಬ್ಬರು ತಾವು ಕನ್ನಡ ಮಾಧ್ಯಮದಲ್ಲಿ ಓದಿರುವ ಕಾರಣ ತಾವು ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರೂ ಕೆಲಸ ಸಿಗುತ್ತಿಲ್ಲ. ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಹೋಗಬೇಕೆಂಬ ಆಸೆಯಿದ್ದರೂ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೊರಡಿಸುವ ಸುತ್ತೋಲೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಅದನ್ನು ಓದಿ ಅರ್ಥ ಮಾಡಿಕೊಂಡು ಕೆಲಸ ತೆಗೆದುಕೊಲ್ಲಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಇದು ಮೂಲಭೂತ ಹಕ್ಕು, ಕನ್ನಡ ನಿಮ್ಮ ಭಾಷೆ. ಅದಕ್ಕೆ ಅದರ ಸ್ಥಾನ ಸಿಗಬೇಕು. ನೀವು ನಿಮ್ಮ ಕನ್ನಡ ಭಾಷೆಯಲ್ಲಿ ಮಾತನಾಡಲು ಇಚ್ಛಿಸಿದರೆ ಅದು ನಿಮ್ಮ ಹಕ್ಕು ಎಂದಿದ್ದಾರೆ.

Rahul Gandhi Climbs Water Tank Holding Tricolor Flag At Chitradurga

"ಭಾಷೆ ಎನ್ನುವುದು ಕೇವಲ ಸಂವಹನಕ್ಕೆ ಬಳಸುವ ಒಂದು ಕ್ರಮವಲ್ಲ. ಅದೊಂದು ಭರವಸೆ, ಅದೊಂದು ಕಲ್ಪನೆ, ಅದಕ್ಕೊಂದು ಇತಿಹಾಸವಿದೆ. ಹೀಗಾಗಿ ಅದಕ್ಕೆ ಅದರ ಸ್ಥಾನಮಾನ ಸಿಗಬೇಕು. ಒಬ್ಬ ವಿದ್ಯಾರ್ಥಿ ಆ ಭಾಷೆಯಲ್ಲಿ ಪರೀಕ್ಷೆ ಬರೆಯಲು ಬಯಸಿದರೇ ಅವರಿಗೆ ಅನುಮತಿ ನೀಡಬೇಕು" ಎಂದು ರಾಹುಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+