ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಶ್ರೀ ಪೋಕ್ಸೋ ಪ್ರಕರಣ: 5ನೇ ಆರೋಪಿ ಪೋಲಿಸರಿಗೆ ಶರಣು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 7 : ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೇ ಆರೋಪಿ ವಕೀಲ ಗಂಗಾಧಯ್ಯ ಮಂಗಳವಾರ ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಮುರುಘಾ ಮಠದ ವಸತಿನಿಲಯುದಲ್ಲಿನ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದಲ್ಲಿ ಈಗಾಗಲೆ ಎ-1 ಆರೋಪಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಎ-2 ಆರೋಪಿ ಹಾಸ್ಟಲ್‌ ವಾರ್ಡನ್ ರಶ್ಮಿ ಬಂಧನವಾಗಿದೆ. ಇದೀಗ ಪ್ರಕರಣದ 5ನೇ ಆರೋಪಿಯಾಗಿದ್ದ ಮಠದ ವಕೀಲ ಗಂಗಾಧರಯ್ಯ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ: ಮತ್ತೆ ಜೈಲು ಸೇರಿದ ಮುರುಘಾ ಶರಣರುಲೈಂಗಿಕ ದೌರ್ಜನ್ಯ ಆರೋಪ: ಮತ್ತೆ ಜೈಲು ಸೇರಿದ ಮುರುಘಾ ಶರಣರು

5ನೇ ಆರೋಪಿ ವಕೀಲ ಗಂಗಾಧರಯ್ಯ ಪೊಲೀಸರಿಗೆ ಶರಣಾಗಿದ್ದು, ಸದ್ಯ ಗಂಗಾಧರಯ್ಯನನ್ನು ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಪ್ರಕರಣದ ಎರಡನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ ಕೂಡ ನ್ಯಾಯಾಂಗ ಬಂಧನದಲ್ಲಿದ್ದು, ಶಿವಮೊಗ್ಗ ಕಾರಾಗೃಹಕ್ಕೆ ಕಳಿಹಿಸಲಾಗಿದೆ.

Pocso case:5th Accuse Lawyer Gangadharaiah Surrender to Chitradurga police on Tuesday

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಸ್ವಾಮಿಯನ್ನು ಕೋರ್ಟ್‌ ಸೆಪ್ಟೆಂಬರ್ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದಕ್ಕೂ ಮುನ್ನ ಪ್ರಕರಣದ ವಿಚಾರಣೆಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೋರ್ಟ್‌ 4 ದಿನಗಳ ಪೊಲೀಸ್‌ ಕಸ್ಟಡಿಗೆ ಒಳಪಡಿಸಿತ್ತು. ಭಾನುವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಶರಣರನ್ನು ಜೆಎಂಎಫ್‍ಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೋಮಲ ಅವರು ಮುರುಘಾ ಶರಣರಿಗೆ ಸೆಪ್ಟಂಬರ್‌ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದರು.

Breaking; ಮುರುಘಾ ಶ್ರೀಗಳಿಗೆ ಸೆ. 14ರ ತನಕ ನ್ಯಾಯಾಂಗ ಬಂಧನBreaking; ಮುರುಘಾ ಶ್ರೀಗಳಿಗೆ ಸೆ. 14ರ ತನಕ ನ್ಯಾಯಾಂಗ ಬಂಧನ

ಸಂತ್ರಸ್ತ ಬಾಲಕಿಯರು ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ನಜರಾಬಾದ್‌ ಸ್ಟೇಷನ್‌ನಲ್ಲಿ ಒಟ್ಟು ಐವರ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ದೂರು ದಾಖಲಿಸಿದ್ದರು. ಶಿವಮೂರ್ತಿ ಮುರುಘಾ ಶರಣರು ಎ-1, ಹಾಸ್ಟೆಲ್ ವಾರ್ಡನ್ ಎ-2, ಮಠದ ಉತ್ತರಾಧಿಕಾರಿ ಎ-3, ಮಠದ ಕಾರ್ಯದರ್ಶಿ ಪರಮಶಿವಯ್ಯ ಎ-4 ಹಾಗೂ ವಕೀಲ ಗಂಗಾಧರಯ್ಯರನ್ನು ಎ-5 ಆರೋಪಿಯಾಗಿ ದೂರು ದಾಖಲಿಸಲಾಗಿದೆ.

English summary
Lawyer Gangadharaiah surrender to Chitradurga police on Tuesday, who was A-5 accused in the case of sexual Assult on Murugha mutt minor students,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X