ನಿನ್ನೆ ಅಪಘಾತವಾಗಿ ನಿಂತಿದ್ದ ಲಾರಿಗೆ ಮತ್ತೆ ಕಾರು ಡಿಕ್ಕಿ– ವ್ಯಕ್ತಿ ಸಾವು

ಚಿತ್ರದುರ್ಗ, ಜುಲೈ 18: ಅಪಘಾತವಾಗಿ ದಾರಿ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗದ ಕುಂಚಿಗನಾಳ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು 25 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಸದಾನಂದ, ಸಿರೀಶ್ ಹಾಗೂ ಕಾರು ಚಾಲಕ ಪವನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

One person died when a car collided with a lorry in chitradurga

ನಿನ್ನೆಯಷ್ಟೇ ಇನ್ನೋವಾ ಕಾರೊಂದು ಟೈರ್ ಸಿಡಿದು ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದರು. ಅಪಘಾತವಾಗಿದ್ದ ಆ ಲಾರಿಯನ್ನು ಸ್ಥಳಾಂತರಿಸದೇ ಅಲ್ಲಿಯೇ ಬಿಟ್ಟಿದ್ದರು. ಇದೇ ಲಾರಿಗೆ ಮತ್ತೆ ಕಾರು ಡಿಕ್ಕಿ ಹೊಡೆದಿದೆ. ಪೊಲೀಸರು ಲಾರಿಯನ್ನು ತಕ್ಷಣವೇ ಸ್ಥಳಾಂತರಿಸಿದ್ದರೆ ಈ ಅಪಘಾತ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+