Murugha Mutt Seer POCSO Case: ಮುರುಘಾ ಶರಣರ ಪೋಕ್ಸೋ ಪ್ರಕರಣ-ಮನೆಯಿಂದ ಸಂತ್ರಸ್ಥೆ ಬಾಲಕಿ ನಾಪತ್ತೆ.!
ಚಿತ್ರದುರ್ಗ, ಮೇ, 28: ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ವಿರುದ್ಧದ ಲೈಂಗಿಕ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಾಗಿದ್ದ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮುರುಘಾ ಶ್ರೀ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿ ಚಿಕ್ಕಪ್ಪನ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುರುಘಾ ಶ್ರೀ 1 ಫೋಕ್ಸೋ ಕೇಸ್‌ಗೆ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸಂತ್ರಸ್ತ ಬಾಲಕಿ ಮೇಲೆ ಸಂಬಂಧಿಕರು ಒತ್ತಡ ಹಾಕ್ತಿದ್ದಾರಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.

ಒಂದನೇ ಫೋಕ್ಸ್ ಕೇಸ್‌ನ ಸಂತ್ರಸ್ತ ಬಾಲಕಿ ಚಿಕ್ಕಪ್ಪನ ವಿರುದ್ದವೇ ದೂರು ಕೇಳಿ ಬಂದಿದೆ. ಮನೆಯಲ್ಲಿ ದೈಹಿಕ & ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ದೂರು ಕೇಳಿಬಂದಿದೆ ಎಂದು ತಿಳಿದುಬಂದಿದೆ. ಮೇ 22ರಂದು ಮನೆಯಿಂದ ಮಿಸ್ಸಿಂಗ್ ಆಗಿ ಒಡನಾಡಿ ಸಂಸ್ಥೆಯ ಮುಂದೆ ಬಾಲಕಿ ಹೋಗಿದ್ದರು. ಸಂಸ್ಥೆಯ ಜೊತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮುಂದೆ ಸಂತ್ರಸ್ತ ಬಾಲಕಿ ಬಂದಿದ್ದರು.
ನನ್ನ ಮತ್ತು ತಮ್ಮನ ಮೇಲೆ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಮ್ಮನ್ನು ರಕ್ಷಣೆ ಮಾಡಿ ಎಂದು CWC ಮುಂದೆ ಬಾಲಕಿ ಮನವಿ ಮಾಡಿದ್ದಾರೆ. ಒಡನಾಡಿ ಸಂಸ್ಥೆಯ ಸ್ಟಾನ್ಲಿ ಜೊತೆ ಬಾಲಕಿ ಆಗಮಿಸಿದ್ದಳು. ನಂತರ ಚಿತ್ರದುರ್ಗದ ಬಾಲಕಿಯರ ಬಾಲ ಭವನದಲ್ಲಿ ಸಂತ್ರಸ್ತ ಬಾಲಕಿಯ ಆಪ್ತ ಸಮಾಲೋಚನೆ ನಡೆಸಿದ್ದರು ಎಂದು ಅಧಿಕೃತವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತ ಮಾಹಿತಿ ನೀಡಿತ್ತು.
ಆಡಳಿತ ಸಮಿತಿ ಅಧ್ಯಕ್ಷರ ನೇಮಕ: ಇತ್ತೀಚೆಗಷ್ಟೇ ಮುರುಘಾ ಮಠದ ಆಡಳಿತದಲ್ಲಿ ಬದಲಾವಣೆಯಾಗಿದ್ದು, ಸುಪ್ರೀಂ ಕೋರ್ಟ್ ಗಡುವು ನೀಡಿದ ನಿರ್ದೇಶನದಂತೆ ರಾಜ್ಯ ಸರ್ಕಾರ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣೆಗೆ ನಿವೃತ್ತ ಐಎಎಸ್ ಅಧಿಕಾರಿ ಸಿ.ಶಿವಯೋಗಿ ಕಳಸದ ಅವರನ್ನು ನೇಮಕ ಮಾಡಲಾಗಿತ್ತು. ಸಮಿತಿಯನ್ನು ನೇಮಕ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಫೆಬ್ರವರಿ 27ರಂದು ಸುಪ್ರೀಂ ಕೋರ್ಟ್ ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣೆಗೆ ಮೂರು ದಿನಗಳಲ್ಲಿ ಸಮಿತಿ ರಚನೆ ಮಾಡಲು ಆದೇಶಿಸಿತ್ತು. ಅದರಂತೆ ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ಇನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ಜೈಲು ಸೇರಿ, ಜಾಮೀನಿನ ಮೇರೆಗೆ ಬಿಡುಗಡೆಯಾಗಿರುವ ಮುರುಘಾ ಶರಣರು ಮಠ ಹಾಗೂ ವಿದ್ಯಾಪೀಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹಿರಿಯೂರಿನ ಮಾಜಿ ಸಚಿವ ಹೆಚ್.ಏಕಾಂತಯ್ಯ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಫೆಬ್ರವರಿ 27ರಂದು ಮಹತ್ವದ ತೀರ್ಪು ನೀಡಿ, ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಅದರಂತೆಯೇ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು.












Click it and Unblock the Notifications