ದಾವಣಗೆರೆ ವಿರಕ್ತ ಮಠದಲ್ಲಿ ಮುರುಘಾ ಶ್ರೀಗಳ ಬಂಧನ: ಈ ವೇಳೆ ಏನೆಲ್ಲಾ ಆಯ್ತು ಗೊತ್ತಾ?, ಇಲ್ಲಿದೆ ಮಾಹಿತಿ
ದಾವಣಗೆರೆ, ನವೆಂಬರ್, 20: ಎರಡನೇ ಪೋಕ್ಸೋ ಪ್ರಕರಣ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶ್ರೀಗಳು ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ದಾವಣಗೆರೆ ನಗರದ ವಿರಕ್ತ ಮಠದಲ್ಲಿ ಕಳೆದ ನಾಲ್ಕು ದಿನಗಳಿಂದ ವಾಸ್ತವ್ಯ ಹೂಡಿದ್ದ ಶ್ರೀಗಳನ್ನು ಚಿತ್ರದುರ್ಗ ಪೊಲೀಸರು ದಾವಣಗೆರೆಗೆ ಆಗಮಿಸಿ ವಶಕ್ಕೆ ಪಡೆದು ಬಂಧಿಸಿದರು.
ಮೊದಲ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ಮುರುಘಾ ಶ್ರೀಗಳು ದಾವಣಗೆರೆಗೆ ಆಗಮಿಸಿದ್ದರು. ಮಂಡಿಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಸಮಾಜದ ಮುಖಂಡರು, ರಾಜಕೀಯ ಮುಖಂಡರು, ಭಕ್ತರು ಶ್ರೀಗಳನ್ನು ಭೇಟಿ ಮಾಡಿದ್ದರು. ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರೂ ಆಗಮಿಸಿ ಮುರುಘಾ ಶ್ರೀಗಳ ಭೇಟಿ ಮಾಡಿ ಧೈರ್ಯ ತುಂಬಿದ್ದರು.

ಆದರೆ ಎರಡನೇ ಪೋಕ್ಸೋ ಪ್ರಕರಣ ಸಂಬಂಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿತ್ತು. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಆದೇಶ ಹೊರಡಿಸಿದ್ದರು. ಬಾಡಿ ವಾರಂಟ್ ಆಧರಿಸಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿತ್ತು. ಆರೋಪಿ ಮುರುಘಾ ಶರಣರನ್ನು ಕೂಡಲೇ ಬಂಧಿಸುವಂತೆ ಆದೇಶ ನೀಡಲಾಗಿತ್ತು.
ಇಂದೇ ಸಾಯಂಕಾಲದೊಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಡಿ ವಾರಂಟ್ ಮೇಲೆ ವಿಚಾರಣೆ ನಡೆದಿತ್ತು. ಮಾತ್ರವಲ್ಲ, ಮುರುಘಾ ಶ್ರೀಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಶ್ರೀಗಳು ವಿಚಾರಣೆಗೆ ಹಾಜರಾಗದ ಕಾರಣ ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿರಕ್ತ ಮಠದಲ್ಲಿ ಬೆಳವಣಿಗೆ
ಇಂದು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಮುರುಘಾ ಶ್ರೀಗಳನ್ನು ಮತ್ತೆ ಬಂಧಿಸಲಾಗುತ್ತದೆ. ಎರಡನೇ ಪೋಕ್ಸೋ ಕೇಸ್ ಸಂಬಂಧ ಬಂಧಿಸಲು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಬಂಧಿಸಲು ಕೋರ್ಟ್ ಸೂಚನೆ ನೀಡಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಹಾಗಾಗಿ, ವಿರಕ್ತ ಮಠಕ್ಕೆ ಭಕ್ತರು, ರಾಜಕೀಯ ಪ್ರತಿನಿಧಿಗಳು, ಶ್ರೀಗಳ ಆಪ್ತರು, ವಕೀಲರು ಸೇರಿದಂತೆ ಹಲವರು ಆಗಮಿಸಿ ಮಾತುಕತೆ ನಡೆಸಿದರು. ಮಾಧ್ಯಮದವರಿಗೆ ಈ ಕುರಿತಂತೆ ಯಾವ ಮಾಹಿತಿಯನ್ನೂ ನೀಡಲಿಲ್ಲ.
ಸುಮಾರು ಒಂದೂವರೆಯಿಂದ 2 ಗಂಟೆಯ ಹೊತ್ತಿಗೆ ಚಿತ್ರದುರ್ಗದ ಪೊಲೀಸರು ದಾವಣಗೆರೆಯ ವಿರಕ್ತ ಮಠಕ್ಕೆ ಆಗಮಿಸಿ ಶ್ರೀಗಳನ್ನು ಬಂಧಿಸುವುದಾಗಿ ತಿಳಿಸಿದರು. ಶ್ರೀಗಳು ಸಹ ಎಲ್ಲಿಯೂ ಪರಾರಿಯಾಗಲು ಯತ್ನಿಸದೇ ಪೊಲೀಸರಿಗೆ ಸಹಕರಿಸಿದರು. ಪೊಲೀಸರು ಬಂಧಿಸಿ ಪೊಲೀಸ್ ಜೀಪ್‌ನಲ್ಲಿ ಕರೆದೊಯ್ದರು. ಈ ವೇಳೆ ಭಕ್ತರು ಯಾರೂ ವಿರೋಧ ಮಾಡಲಿಲ್ಲ. ಶ್ರೀಗಳು ಸಹ ಮೌನವಾಗಿಯೇ ಪೊಲೀಸರ ಜೊತೆ ತೆರಳಿದರು.
ವಿರಕ್ತ ಮಠವು ಶಿವಮೂರ್ತಿ ಮುರುಘಾ ಶ್ರೀಗಳು ಬಂದ ಬಳಿಕ ಕೇಂದ್ರೀಕೃತವಾಗಿತ್ತು. ಶ್ರೀಗಳು ಸಹ ಮೌನಕ್ಕೆ ಶರಣಾಗಿದ್ದರು. ಆತ್ಮೀಯರ ಜೊತೆ ಮಾತ್ರ ಸುದೀರ್ಘವಾಗಿ ಚರ್ಚೆ ಮಾಡುತ್ತಿದ್ದರು. ಮಾಧ್ಯಮದವರಿಗೆ ಮೌನಕ್ಕೆ ಶರಣಾಗಿದ್ದೇವೆ. ಏನನ್ನೂ ಮಾತನಾಡುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ನೀವೂ ಒಳ್ಳೆಯದು ಮಾಡಿ ಎಂದಿದ್ದರು. ಯಾರೊಟ್ಟಿಗೂ ಮತ್ತೆ ಮಾತನಾಡಿರಲಿಲ್ಲ. ಪೂಜೆಯಲ್ಲಿ ನಿರತರಾಗಿದ್ದ ಶ್ರೀಗಳು, ಮೌನಕ್ಕೆ ಶರಣಾಗುವ ಜೊತೆಗೆ ಧಾನ್ಯದಲ್ಲಿಯೂ ನಿರತರಾಗಿದ್ದರು.
ಮಠದಲ್ಲಿ ನೀರವ ಮೌನ
ಇನ್ನು ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಲು ಚಿತ್ರದುರ್ಗ ಪೊಲೀಸರು ಆಗಮಿಸುತ್ತಿದ್ದಂತೆಯೇ ಅಕ್ಕಪಕ್ಕದವರೆಲ್ಲರೂ ಮಠದ ಬಳಿ ಜಮಾಯಿಸಿದರು. ಶ್ರೀಗಳನ್ನು ಪೊಲೀಸರು ಕರೆದೊಯ್ದ ಬಳಿ ಮಠದಲ್ಲಿ ನೀರವ ಮೌನ ಆವರಿಸಿತು. ಭಕ್ತರು ಹಾಗೂ ಶ್ರೀಗಳ ಹಿತೈಷಿಗಳು ಬೇಸರದಲ್ಲಿ ಇದ್ದದ್ದು ಕಂಡು ಬಂತು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications